ಹಾಸನ : ಹಾಸನ:ಗಣೇಶ ಮೆರವಣಿಗೆ ವೇಳೆ ಅಪಘಾತ ಸಂಭವಿಸಿದ್ದು ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲಿ ಒಂಬತ್ತು ಜನ ಸಾವನಪ್ಪಿದ್ದಾರೆ. 15 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಭೀಕರ ದುರಂತ ಸಂಭವಿಸಿದ್ದು ಮೊಸಳೆಹೊಸಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಒಂದು ಬದಿಯಲ್ಲಿ ಗಣೇಶ ಮೆರವಣಿಗೆ ಹೋಗುತ್ತಿದ್ದು, ಈ ವೇಳೆ ಟ್ರಂಕ್ ವೊಂದು ಯಮನಂತೆ ಬಂದು ಸಾವಿರಾರರು ಜನರಿದ್ದ ಮೆರಣಿಗೆಗೆ ನುಗ್ಗಿದೆ. ಪರಿಣಾಮ ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದ್ದು, ಗಾಯಗೊಂಡರಿಗೆ ಚಿಕಿತ್ಸೆ ಮುಂದುರೆದಿದೆ.
ಮೆರವಣಿಯಲ್ಲಿ ಸಾವಿರಾರು ಜನರು ಡಿಜೆ ಸಾಂಗ್ ಗೆ ಭರ್ಜರಿ ಸ್ಟೆಪ್ ಹಾಕುತ್ತ ಎಂಜಾಯ್ ಮಾಡುತ್ತಿದ್ದು. ಈ ವೇಳೆ ನೋಡ ನೋಡುತ್ತಿದ್ದಂತೆಯೇ ಟ್ರಕ್ ವೇಗವಾಗಿ ಬಂದು ಜನರ ಮೇಲೆ ಹರಿದಿದೆ. ಇನ್ನು ಮೆರವಣಿಗೆಗೆ ಟ್ರಕ್ ನುಗ್ಗಿರುವ ಭಯಾಕನ ದೃಶ್ಯ ವೈರಲ್ ಆಗಿದೆ.