ಮಂಗಳೂರು : ನಗರದ ಬಜಾಲ್ ನಿವಾಸಿಯಾದ ಕೇವಲ ಐದೂ ವರ್ಷದ ಹಾಗೂ 11 ವರ್ಷದ ಸಹೋದರ ಸಹೋದರಿಯವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರತಿನಿಧಿಸುತ್ತಾ ಸೆಪ್ಟೆಂಬರ್ 6 ,2025 ಬೆಂಗಳೂರಿನ , ಕಿಂಗ್ಸ್ ಮೆಡವ್ಸ್ ಹೋಟೆಲ್ ನಲ್ಲಿ ಆಯೋಜಿಸಲಾದ ಮಿಸ್ ಪ್ರತಿಭಾ ಸಂಶಿಮಠ ಇವರ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಮಿಸ್ ಅಂಡ್ ಮಿಸ್ಸೆಸ್ ಅಸ್ತ್ರಲ್ ಸೌಂದರ್ಯ ಸ್ಪರ್ಧೆಯಲ್ಲಿ ಲಿಟಲ್ ಮಿಸ್ಟರ್ ಇಂಡಿಯಾ ರನ್ನರ್ ಅಪ್ ಅನ್ನು ಲಹರಿ ಸಾಯಿ ಇವರು ಹಾಗೂ ಅವರ ಸಹೋದರಿ ವಿಯಾ ಸಾಯಿ ಅವರು ಜೂನಿಯರ್ ಮಿಸ್ ಇಂಡಿಯಾ ಅಸ್ತ್ರಲ್ 2025 ರನ್ನರ್ ಅಪ್ ಎಂಬ ಗೌರವಾನಿತ್ವ ಪ್ರಶಸ್ತಿಯನ್ನು ಗೆದ್ದು ಮಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಕಾರ್ಮೆಲ್ ಸಿ ಬಿ ಎಸ್ ಸಿ ಸ್ಕೂಲ್ ಮಂಗಳೂರು ಇಲ್ಲಿನ ಯುಕೆಜಿಯ ವಿದ್ಯಾರ್ಥಿಯಾದ ಲಹರ್ ಸಾಯಿ ಹಾಗೂ ಆರನೇ ತರಗತಿಯಲ್ಲಿ ವಿಯಾ ಸಾಯಿ ಅವರು ಕಲಿಯುತ್ತಿದ್ದು ತನ್ನ ಅಪ್ರತಿಮೆ ಪ್ರತಿಭೆಯ ಮತ್ತು ಆತ್ಮ ವಿಶ್ವಾಸದಿಂದ ವೇದಿಕೆಯಲ್ಲಿ ಕಂಗೊಳಿಸಿದ್ದಾರೆ. ಇವರು ಬೆಂಗಳೂರುನಲ್ಲಿ ನಡೆದ ಸ್ಪರ್ಧೆ ಮಾತ್ರವಲ್ಲದೆ ಬೇರೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ ಪ್ರಥಮ ಸ್ಥಾನ ಹಾಗೂ ಉಪ ಶೀರ್ಷಿಕೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ .ಲೆಹರ್ ಸಾಯಿ ಅವರು ಪ್ರಿನ್ಸ್ ಅಫ ಪ್ರಿಯದರ್ಶಿನಿಯ ವಿನ್ನರ್ ಹಾಗು ಸಹೋದರಿ ವಿಯಾ ಸಾಯಿ ಪ್ರಿನ್ಸೆಸ್ ಆಫ್ ಕರಾವಳಿ ವಿನ್ನರ್ ,ಪ್ರಿನ್ಸೆಸ್ ಒಫ ಪ್ರಿಯದರ್ಶಿನಿ ರನ್ನರ್ ಅಪ್, ಬೆಸ್ಟ್ ಪರ್ಸನಾಲಿಟಿ ಜೂನಿಯರ್ ಇಂಟರ್ನ್ಯಾಷನಲ್ ಮೋಡಲ್ , ಫ್ಯಾಶನ್ ಐಕಾನ್ ಎಂಬ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇವರಿಬ್ಬರು ದೀಪಕ್ ಗಂಗೂಲಿ ಅವರ ಪಾಥ್ವೇ ಮಾಡಲಿಂಗ್ ಇನ್ಸ್ಟಿಟ್ಯೂಟ್ ಮಂಗಳೂರು ಇವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ.


