ಬೆಂಗಳೂರು ; ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೊನೆಗೂ ಜೈಲಿನಲ್ಲಿ ಕೆಲಸ ಹಂಚಿಕೆಯಾಗಿದ್ದು, ಲೈಬ್ರರಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ.
ಜೈಲು ಲೈಬ್ರರಿಯಲ್ಲಿ ಖೈದಿಗಳಿಗೆ ಪುಸ್ತಕ ಕೊಡುವುದು ಹಾಗೂ ಯಾರಿಗೆ ಯಾವ್ಯಾವ ಪುಸ್ತಕ ಕೊಡಲಾಗಿದೆ ಎಂದು ನೋAದಾಣಿ ಮಾಡಿಕೊಳ್ಳುವ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದು, ದಿನಕ್ಕೆ 522 ರೂ.ಕೂಲಿ ಕೂಡ ಸಿಗಲಿದೆ. ಪ್ರತಿನಿತ್ಯ ನೊಂದಾಣಿ ಮಾಡಿ ಕೆಲಸ ಮಾಡಿದ್ರೆ ಮಾತ್ರ ಆ ದಿನದ ಸಂಬಳ ಬರುತ್ತೆ. ಟ್ರಯಲ್‌ಗೆ ಕೋರ್ಟ್ಗೆ ಹೋಗುವುದು ಸೇರಿ ಕೆಲಸಕ್ಕೆ ಹಾಜರಾಗದಿದ್ದರೆ ಹಣ ನೀಡುವುದಿಲ್ಲ. ಸದ್ಯ ಟ್ರಯಲ್ ಕೋರ್ಟ್ಗೆ ಹೋಗುವದು ಹಾಗೂ ವಕೀಲರ ಜೊತೆ ಚರ್ಚೆ ನಡೆಸುವುದರಲ್ಲಿ ಬ್ಯುಸಿಯಾಗಿರುವುದರಿಂದ ಪ್ರಜ್ವಲ್ ಅವರನ್ನು ಪೂರ್ಣಾವಧಿಗೆ ಕ್ಲರ್ಕ್ ಹುದ್ದೆಗೆ ನಿಯೋಜಿಸಿಲ್ಲ ಎಂದು ತಿಳಿದುಬಂದಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾದವರು ಜೈಲಿನಲ್ಲಿ ಯಾವುದಾದರೊಂದು ಕೆಲಸ ಮಾಡಲೇಬೇಕು. ಅವರ ಅರ್ಹತೆ, ಆಸಕ್ತಿಗೆ ಅನುಗುಣವಾಗಿ ಕೆಲಸ ಹಂಚಿಕೆ
ಮಾಡಲಾಗುತ್ತೆ. ಪ್ರಜ್ವಲ್ ರೇವಣ್ಣ ತಾನು ಕೃಷಿ ಕೆಲಸ ಮಾಡುತ್ತೇನೆ, ಜೊತೆಗೆ ಜೈಲಿನ ಅಡ್ಮಿನಿಸ್ಟ್ರೇಟಿವ್ ಕೆಲಸ ಕೂಡ ಮಾಡುವುದಾಗಿ ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ, ಅಂತಿಮವಾಗಿ ಜೈಲು ಅಧಿಕಾರಿಗಳು ಲೈಬ್ರರಿ ಕ್ಲರ್ಕ್ ಕೆಲಸವನ್ನು ನೀಡಿದ್ದಾರೆ. ಒಂದು ರೇಪ್ ಕೇಸ್‌ನಲ್ಲಿ ಮಾತ್ರ ಜೀವಾವಧಿ ಶಿಕ್ಷೆ ವಿಧಿಸಿ ಕೆಳ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೂ ಮೂರು ಕೇಸ್‌ಗಳಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧದ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ನಡೆಯಲಿದೆ.
ಇವರಿಗೆಲ್ಲಾ ಕಲ್ಲು ಹೊಡಿಯೋ ಕೆಲಸ ಕೊಡಬೇಕಲ್ಲ. ಜೈಲಿಗೆ ಹೋಗೋದು ಶಿಕ್ಷೆ ಅನುಭವಿಸಲಿಕ್ಕೋ ಸಂಬಳ ಎಣಿಸ ಲಿಕ್ಕೋ. ಇದೇನಾ ನಮ್ಮ ನ್ಯಾಯ ಅವ್ಯವಸ್ಥೆ 🤔🤔