ಮಂಗಳೂರು : ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದ ಆಳಕ್ಕೆ ಇಳಿದ ಎಸ್ಐಟಿ ಬುರುಡೆ ಮ್ಯಾನ್ನಿಂದ ಹಿಡಿದು ಅನನ್ಯಾ ಭಟ್ವರೆಗೂ ಸಂಚು ನಡೆದಿರುವುದು ಎಸ್ಐಟಿ ತನಿಖೆಯಲ್ಲಿ ಇಂಚಿಂಚು ಬಯಲಾಗುತ್ತಿದೆ.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ಆರೋಪದ ಮೇಲೆ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್ನನ್ನು ಎಸ್ಐಟಿ ವಿಚಾರಣೆ ನಡೆಸಿದೆ. ಈ ಮಧ್ಯೆ ಬುರುಡೆ ಕಥೆಯನ್ನು ಕೇರಳಕ್ಕೆ ಹಬ್ಬಿಸಿದ್ದ ಕೇರಳ ಮೂಲದ ಯೂಟ್ಯೂಬರ್ ಮನಾಫ್ಗೂ ಎಸ್ಐಟಿ ನೋಟಿಸ್ ನಿಡಿದೆ.
ಮನಾಫ್ ಶಿರೂರ್ ನಲ್ಲಿ ಗುಡ್ಡ ಕುಸಿತದಲ್ಲಿ ಕಾಣೆಯಾಗಿದ್ದ ಲಾರಿಯ ಮಾಲೀಕ. 2024 ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ ಬರೋಬ್ಬರಿ 11 ಮಂದಿ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಿದ್ದ. ಬಳಿಕ ಈತ ಯೂಟ್ಯೂಬ್ ಚಾನೆಲ್ ಮಾಡಿ ಲಾರಿ ಚಾಲಕನ ಉಳಿವಿಗಾಗಿ ೧ ತಿಂಗಳ ವರೆಗೆ ಶಿರೂರಿನಲ್ಲೇ ಬೀಡುಬಿಟ್ಟಿದ್ದು ಯೂಟ್ಯೂಬ್ ಮೂಲಕ ಹಣ ಗಿಟ್ಟಿಸಿಕೊಂಡಿದ್ದ.ಬಳಿಕ ಧರ್ಮಸ್ಥಳದ ವಿಡಿಯೋ ಕೇರಳದಲ್ಲಿ ಹರಿಯಬಿಟ್ಟಿದ್ದ.


