ಮಂಗಳೂರು : ಬಿಜೆಪಿ ಹಿರಿಯ ನಾಯಕರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿ 2022 ರಲ್ಲಿ ಆರಂಭವಾದ ಕುಡ್ಲದ ಪಿಲಿವರ್ಬಕ್ಕೆ ಈ ಬಾರಿ ನಾಲ್ಕನೇ ವರ್ಷದ ಸಂಭ್ರಮ ಸೆ.30 ರಂದು ಕೇಂದ್ರ ಮೈದಾನ ಮಂಗಳೂರಿನಲ್ಲಿ ನಡೆಯಲಿದೆ.
ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದ್ದು ಇದು ನಮ್ಮ ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲೆಯಾಗಿದ್ದು ಅದನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿ ಈ ನೆಲದ ಮಕ್ಕಳಾಗಿ ನಮ್ಮ ಮೇಲಿದೆ ಎಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ದ ಅಧ್ಯಕ್ಷರಾದ ಗಿರಿಧರ್ ಶೆಟ್ಟಿಯವರು ತಿಳಿಸಿದರು.
ಕಳೆದ ಬಾರಿ ತೀವ್ರ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಮುಳಿಹಿತ್ತು ಫ್ರೆಂಡ್ಸ್ ಸರ್ಕಲ್ ಇವರ ಮುಡಿಗೇರಿದ ಕುಡ್ಲದ ಪಿಲಿಪರ್ಬ ಕಿರೀಟವು ಈ ಬಾರಿ ಯಾರ ಮುಡಿಗೇರಲಿದೆ ಎಂಬುದು ಸಮಸ್ತ ತುಳುನಾಡಿನ ಕುತೂಹಲವಾಗಿದೆ ಎಂದರು.
ಈ ಹಿಂದಿನ ಎಲ್ಲಾ ಆವೃತ್ತಿಗಳಲ್ಲೂ ಪಿಲಿಪರ್ಬಕ್ಕೆ ಇಡೀ ತುಳುನಾಡಿನ ಜನತೆಯಿಂದ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದು ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರು ಗಿರಿಧರ್ ಶೆಟ್ಟಿ, ಮಾಜಿ ಮೇಯರ್ ದಿವಾಕರ್, ಜಗದೀಶ್ ಪಾಂಡೆಶ್ವರ ,ಅಶ್ವಿತ್ ಕೊಟ್ಟಾರಿ,ಚೇತನ್ ಕಾಮತ್,ಶಾನ್,ನವೀನ್ ಮೆಂಡನ್ ರವರು ಉಪಸ್ಥಿತರಿದ್ದರು.