Saturday, January 17, 2026
Flats for sale
Homeಜಿಲ್ಲೆಮಂಗಳೂರು : ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ದ.ಕ ಜಿಲ್ಲೆಯ ವತಿಯಿಂದ ಧರ್ಮ ಜಾಗೃತಿ ಸಭೆ…!

ಮಂಗಳೂರು : ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ದ.ಕ ಜಿಲ್ಲೆಯ ವತಿಯಿಂದ ಧರ್ಮ ಜಾಗೃತಿ ಸಭೆ…!

ಮಂಗಳೂರು ; ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ದ.ಕ ಜಿಲ್ಲೆಯ ವತಿಯಿಂದ ” ಧರ್ಮ ತೇಜೋ ಬಲಂ ಬಲಂ ” ಎಂಬ ವೇದವಾಕ್ಯದೊಂದಿಗೆ ಧರ್ಮಜಾಗ್ರತಿ ಸಭೆ ಇಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು .ಕಾರ್ಯಕ್ರಮದ ಚಾಲನೆಯನ್ನು 108 ಬಾರಿ ಶಿವ ಸ್ತೋತ್ರ ಪಠಿಸುತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದು ಧರ್ಮಸ್ಥಳ ಕ್ಷೇತ್ರ ಕ್ಕೆ ಮಾಡಿದ ಅವಮಾನ,ಅಪಪ್ರಚಾರ,ಕ್ರೀಮಿನಲ್ ಮಾಡಲು ತುಂಬಾ ಸಮಯಬೇಕು ಆದರಿಂದ ಇದು ಒಂದು ಟಾರ್ಗೆಟ್,ಈ ಹಿಂದೆ ಕಟೀಲು ಕ್ಷೇತ್ರಕ್ಕೆ ಈ ರೀತಿ ಅವಮಾನ ಮಾಡಿದ್ದರು,ಹಿಂದೂ ಧರ್ಮಸ್ಥಳದಲ್ಲಿರುವ ಸ್ವಚ್ಚತೆಯ ಕ್ಷೇತ್ರ ಅಂದರೆ ಧರ್ಮಸ್ಥಳ, ಸ್ಥಾನವಾಗಿ ಮಂಜುನಾಥ ಕುಳಿತುಕ್ಕೊಂಡಿದ್ದಾರೆ ಅದೇ ರೀತಿ ಡಾ.ವಿರೇಂದ್ರ ಹೆಗ್ಗಡೆಯವರು ಕುಳಿತಿದ್ದಾರೆವೆಂದರು ಈ ಬಾರಿಯ ಕುಂಭಮೇಳಕ್ಕೆ ೬೫ ಕೋಟಿ ಜನ ಸೇರಿದ್ದರು .ಆದರಿಂದ ಮುಂದಿನ ಕುಂಭಮೇಳಕ್ಕೆ ೧೦೦ ಕೋಟಿ ಯಷ್ಟು ಜನ ಒಟ್ಟಾಗಿ ನಾವು ಧರ್ಮಕ್ಕಾಗಿ ಮುಂದಿನ ದಿನಗಳಲ್ಲಿ ಹೋರಾಡೊಣ ಎಂದು ಕಟೀಲು ಕ್ಷೇತ್ರದ ಹರಿನಾರಾಯಣ ಅಶ್ರಣ್ಣರು ಹೇಳಿದರು. ಬಳಿಕ ಮಾತನಾಡಿದ ಹರಿಕೃಷ್ಣ ಬಂಟ್ವಾಳ ಸಜ್ಜನರು ಯಾವಾಗ ನಿರ್ಭೀತಿಯಾಗಿ ಈ ಮಣ್ಣಿನಲ್ಲಿ ಹೋರಾಡುತ್ತಾರೊ ಅವಾಗ ಮಾತ್ರ ಧರ್ಮ ಉಳಿಯುತ್ತದೆ ಎಂದರು.೮೦೦ ವರ್ಷ ಆಳಿದ ಮೊಘಲರು ದೇವಸ್ಥಾನ ,ಮಂದಿರ ಹಿಂದೂ ಧರ್ಮ ನಾಶ ಮಾಡಲು ಹೊರಟಿದ್ದರು ಆದರೆ ಇವಾಗ ಇಲ್ಲಿಯವರೆ ದಾಳಿ ನಡೆಸುವುದು ಕಂಡನೆ ಎಂದು “ಎರು ಜಾತಿಗೆ ಬಡು ಜಾತಿ” ಎಂಬ ಗಾದೆಯ ಮಾತಂತೆ ನಾವು ಕೂಡ ಎಲ್ಲದಕ್ಕೂ ತಯಾರಿಯಾಗಬೇಕು ಎಂದರು.

ವೇದಿಕೆಯಲ್ಲಿ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್,ಹರಿಕೃಷ್ಣ ಬಂಟ್ವಾಳ,ದುಗ್ಗಣ್ಣ ಸಾವಂತ, ಎಂ.ಬಿ,ರಾಘವೇಂದ್ರ ಶಾಸ್ತ್ರಿ, ಪುರಾಣಿಕ್,ಕಟೀಲ್ ಕ್ಷೇತ್ರದ ಹರಿನಾರಾಯಣ ಅಶ್ರಣ್ಣ,ಮಹಾಬಲೇಶ್ವರ ಬಿಲ್ಡಲ್ ನ ಕೆ.ಸಿ ನಾಯಕ್,ಶ್ರೀ ರಾಜೇಂದ್ರ ಗುರಿಕಾರ,ಬಿರುವೆರ್ ಕುಡ್ಲದ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್,ಮಾಜಿ ಸಚಿವ ನಾಗರಾಜ್ ಶೆಟ್ಟಿ, ಎ.ಸಿ ಭಂಡಾರಿ,ವಿಶ್ವ ಹಿಂದೂ ಪರಿಷತ್ ನ ಪುರುಷೋತ್ತಮ್,ರತ್ನಾಕರಚಜೈನ್,ಶರಣ್ ಪಂಪ್ ವೆಲ್,ಹರಿಕೃಷ್ಣ ಪುನರೂರು,ಸತೀಶ್ ಕುಂಪಾಲ,ಭಾಸ್ಕರಚಂದ್ರ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular