Thursday, September 18, 2025
Flats for sale
Homeಜಿಲ್ಲೆಬೆಳ್ತಂಗಡಿ : ಧರ್ಮಸ್ಥಳದಲ್ಲಿ ಕಾಣೆಯಾಗಿರುವ ಅನನ್ಯ ಭಟ್ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ :...

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಕಾಣೆಯಾಗಿರುವ ಅನನ್ಯ ಭಟ್ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ : ದೂರು ನೀಡಿದ ಸುಜಾತಾ ಭಟ್ ಗೆ ಮಕ್ಕಳೇ ಇಲ್ಲವಂತೆ : ಎಸ್​ಐಟಿ ತನಿಖೆಯಿಂದ ಸ್ಪೋಟಕ ಅಂಶ ಬೆಳಕಿಗೆ..!

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆ ತೀವ್ರಗೊಂಡಿದ್ದು ಸುಜಾತ್ ಭಟ್ ನೀಡಿದ್ದ ಮಗಳು ಅನನ್ಯಾ ಭಟ್ ನಾಪತ್ತೆ ಪ್ರಕರಣ ದೊಡ್ಡ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಸುಜಾತ ಭಟ್ ಮಾಡಿದ್ದ ಆರೋಪ,ದೂರುಗೆ ಸಂಬಂಧಿಸಿ ಪ್ರಮುಖವಾಗಿ ಅನನ್ಯಾ ಭಟ್ ಫೋಟೋ ಎಲ್ಲಿ ಅನ್ನೋ ಪ್ರಶ್ನೆ ಎದ್ದಿತ್ತು. ಬಳಿಕ ತಾಯಿ ಸುಜಾತ್ ಭಟ್, ಕಾಣೆಯಾಗಿರುವ ತನ್ನ ಮಗಳು ಸುಜಾತ್ ಭಟ್ ಫೋಟೋ ಬಹಿರಂಗಪಡಿಸಿದ್ದರು.

ಧರ್ಮಸ್ಥಳದಲ್ಲಿ ಕಾಣೆಯಾಗಿರುವ ಅನನ್ಯ ಭಟ್ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ ತಾಯಿ ಸುಜಾತಾ ಭಟ್ ಗೂ ಶಿವಮೊಗ್ಗದ ರಿಪ್ಪನಪೇಟೆಗೂ ಲಿಂಕ್ ಆಗಿದೆ. ಸುಜಾತಾ ಭಟ್ ನೀಡಿದ ದೂರಿನ ಮೇರೆಗೆ ಎಸ್​ಐಟಿ ಅಧಿಕಾರಿಗಳು ಅನನ್ಯ ಭಟ್ ಕೇಸಿನ ಹಿಂದೆ ಬದ್ದಿದ್ದು, ಕೆಲವೊಂದಿಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ. ಇನ್ನು ಸುಜಾತಾ ಭಟ್ ಮದುವೆಯಾಗದೇ ಪ್ರಭಾಕರ್ ಬಾಳಿಗ ಎನ್ನುವರ ಜೊತೆ ಲಿವ್ ಇನ್​ ರಿಲೇಶನ್ ಶಿಪ್​ ನಲ್ಲಿದ್ದರು. ಆದ್ರೆ ಇಬ್ಬರಿಗೆ ಯಾವುದೇ ಮಗು ಸಹ ಆಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಅನನ್ನ ಭಟ್ ಇದ್ದಳೋ ಇಲ್ವೋ ಎನ್ನುವುದೇ ನಿಗೂಢವಾಗಿದೆ. ಒಮ್ಮಿಂದಲೇ ಒಮ್ಮೆಗೆ ಸುಜಾತಾ ಭಟ್ ಎಲ್ಲಿಂದ ಪ್ರತ್ಯಕ್ಷ ಆಗಿದ್ದು ಈ ಬಗ್ಗೆ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಈ ನಡುವೆ ಸುಜತಾ ಭಟ್ ತನ್ನ ಮಗಳ ಮಿಸ್ಸಿಂಗ್ ಪ್ರಕರಣವನ್ನು ಮುನ್ನಲೆಗೆ ತಂದಿದ್ದು, ಈ ಸಂಬಂಧ ಎಸ್ ಐಟಿ ಮುಂದೆ ಮಗಳ ಅನನ್ಯ ಭಟ್ ಮಿಸ್ಸಿಂಗ್ ಕೇಸ್ ಕುರಿತು ಮತ್ತೆ ದೂರು ನೀಡಿದ್ದಾರೆ. ನನ್ಯ ಭಟ್ ಧರ್ಮಸ್ಥಳದಲ್ಲಿ ಮಿಸ್ಸಿಂಗ್ ಬಳಿಕ ಏನಾದಳು ಎನ್ನುವುದು ನಿಗೂಢವಾಗಿತ್ತು. ಎಲ್ಲರಿಗೂ ಅನನ್ಯ ಭಟ್ ಮೆಡಿಕಲ್ ಓದಲು ಹೋಗಿ ವಾಪಸ್ ಜೀವಂತ ಬರಲಿಲ್ಲ ಎನ್ನುವಂತಾಗಿತ್ತು. ಈ ನಡುವೆ ಎಸ್ ಐಟಿ ಅಧಿಕಾರಿಗಳು ತನಿಖೆಯ ಚುರುಕುಗೊಳಿಸಿದ್ದು, ಸುಜತಾ ಭಟ್ ನೀಡಿರುವ ದೂರು ಮತ್ತು ಆಕೆಯ ಹಿನ್ನಲೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.ಸುಜಾತಾ ಭಟ್ ಲಿಂಕ್ ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನಪೇಟೆಗೆ ನಂಟು ಇರುವುದು ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಎಸ್ ಐಟಿ ತಂಡವು ರಿಪ್ಪನಪೇಟೆಗೆ ಬಂದು ವಿಚಾರಣೆ ಮಾಡಿ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಸ್ ಐಟಿ ತಂಡದ ಅಧಿಕಾರಿಗಳು ಸುಜಾತ ಭಟ್ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿದ್ದಾರೆ.

ಸುಜಾತಾ ಭಟ್ ಮದುವೆಯಾಗದೇ ಪ್ರಭಾಕರ್ ಬಾಳಿಗ ಎನ್ನುವರ ಜೊತೆ ಲಿವ್ ಇನ್​ ರಿಲೇಶನ್ ಶಿಪ್​ ನಲ್ಲಿದ್ದರು. ಆದ್ರೆ ಇಬ್ಬರಿಗೆ ಯಾವುದೇ ಮಗು ಸಹ ಆಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಮದುವೆಯಾಗದೇ ಅವರ ಪ್ರಭಾಕರ್ ಹಾಗೂ ಸುಜಾತಾ ಭಟ್ ಪತಿ- ಪತ್ನಿಯಾಗಿದ್ದರು. ಇದಕ್ಕೆ ಪೂರಕವೆಂಬಂತೆ ಸುಜಾತಾ ಭಟ್ ರಿಪ್ಪನಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2004 ರಲ್ಲಿ ತೇಜಸ್ವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯತ್ವ ಪಡೆದಿದ್ದಳು. ರಜಿಸ್ಟರ್ ನಲ್ಲಿ ಸುಜಾತಾ ಬಾಳಿಗ ಹೆಸರಿನಲ್ಲಿ ಹಸ್ತಾಕ್ಷರ ಕಂಡುಬಂದಿದೆ. ಇದರ ನಂತರ 2007 ರ ನಂತರ ಸೊಸೈಟಿಯಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರಲಿಲ್ಲ. ಸಂಘದ ಹೆಸರಿನಲ್ಲಿ ಒಂದಿಷ್ಟು ಸಾಲ ಪಡೆದಿದ್ದಳು. ಅದನ್ನು ವಾಪಸ್ ಕಟ್ಟಿರಲಿಲ್ಲ ಎಂಭ ಮಾಹಿತಿ ದೊರೆತಿದೆ.

ಸೌಜನ್ಯ ನಾಪತ್ತೆ ಬಳಿಕ ಈಗ ಅನನ್ಯ ಭಟ್ ನಾಪತ್ತೆ ಕೇಸ್ ಕುರಿತು ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಧರ್ಮಸ್ಥದಲ್ಲಿ ನಾಪತ್ತೆ ಆಗಿರುವುದು ನಿಜವೋ ಅಥವಾ ಸುಳ್ಳೋ ಎನ್ನುವುದರ ಹಿಂದೆ ಎಸ್ ಐಟಿ ಅಧಿಕಾರಿಗಳು ಬಿದ್ದಿದ್ದಾರೆ.ಒಟ್ಟಿನಲ್ಲಿ ಧರ್ಮಸ್ಥಳದ ಬುರುಡೆ ಪ್ರಕರಣ ದಿನಕ್ಕೊಂದು ತಿರುವುದು ಪಡೆಯುತ್ತಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.ಹೀಗಾಗಿ ಎಫ್​ಎಸ್​ಎಲ್‌ನಿಂದ ವರದಿ ಬರವರೆಗೆ ತಾತ್ಕಾಲಿಕವಾಗಿ ಶೋಧಕಾರ್ಯ ಸ್ಥಗಿತ ಮಾಡಲು ಎಸ್​ಐಟಿ ನಿರ್ಧಾರ ಮಾಡಿದೆ. ವರದಿ ಬಂದ ಬಳಿಕ ತನಿಖೆ ಮುಂದುವರಿಯುತ್ತದೆ ಎಂದು ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular