Tuesday, October 21, 2025
Flats for sale
Homeಜಿಲ್ಲೆಮಂಗಳೂರು : ತಲಪಾಡಿಯ ಸ್ವಾಮಿ ಕೃಪಾ ಶ್ರೀ ವೀರಾಂಜನೇಯ ವ್ಯಾಯಾಮಶಾಲೆ (ರಿ) ಹಾಗೂ ಹ್ಯೂಮನ್ ವೆಲ್ಫೇರ್...

ಮಂಗಳೂರು : ತಲಪಾಡಿಯ ಸ್ವಾಮಿ ಕೃಪಾ ಶ್ರೀ ವೀರಾಂಜನೇಯ ವ್ಯಾಯಾಮಶಾಲೆ (ರಿ) ಹಾಗೂ ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸ್ವಾತಂತ್ರೋತ್ಸವದ ಆಚರಣೆ..!

ಮಂಗಳೂರು : ತಲಪಾಡಿಯ ಸ್ವಾಮಿ ಕೃಪಾ ಶ್ರೀ ವೀರಾಂಜನೇಯ ವ್ಯಾಯಾಮಶಾಲೆ (ರಿ) ಹಾಗೂ ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ತಲಪಾಡಿ ಇದರ ಜಂಟಿ ಆಶ್ರಯದಲ್ಲಿ ತಲಪಾಡಿಯ ದಿವಂಗತ ಐತಪ್ಪ ರೈ ವೇದಿಕೆಯಲ್ಲಿ 79 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು. ಧ್ವಜಾರೋಹಣವನ್ನು ನಿವೃತ್ತ ಸೇನಾನಿ ಕ್ಯಾಪ್ಶನ್ ಮಾಧವ ಶೆಟ್ಟಿ ತಲಪಾಡಿ ನೆರೆವೇರಿಸಿದರು.

ಮುಖ್ಯ ಅತಿಥಿ ಗಳಾಗಿ ತಲಪಾಡಿ ವ್ಯಾಯಾಮ ಶಾಲಾ ಅಧ್ಯಕ್ಷರಾದ ಅಶೋಕ್ ಕೆ ,ಸಿ ರೋಡ್ ,ಹ್ಯೂಮನ್ ವೆಲ್ಫೇರ್ ತಲಪಾಡಿಯ ಅಧ್ಯಕ್ಷ ಸಂಶುದ್ದೀನ್ ತಲಪಾಡಿ ,ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ಖದರ್ ಬಿ.ಎಸ್ ,ಇಸ್ಮಾಯಿಲ್ ತಲಪಾಡಿ,ಗಡಿ ನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿದ್ದಿಕ್ ತಲಪಾಡಿ,ದುಬೈ ಉದ್ಯಮಿ ಮಾಮೊಹಮ್ಮೆದ್ ಹಸ್ಸನ್, ಶ್ರೀ ಮಾತಾ ಮಹಿಳಾ ಮಂಡಳಿ ತಲಪಾಡಿ ಇದರ ಅಧ್ಯಕ್ಷೆ ಶ್ರೀಮತಿ ಶ್ವೇತ ಕಿರಣ್ ,ಮಹಿಳಾ ಮಂಡಳಿ ಮಾಜಿ ಅಧ್ಯಕ್ಷೆ ಶ್ರೀಮತಿ ಶೋಭಾ ಶೇಖರ್ ಶೆಟ್ಟಿ ವ್ಯಾಯಾಮಶಾಲಾ ಮಾಜಿ ಅಧ್ಯಕ್ಷರುಗಳಾದ ಯಥೀರಾಜ್ ಶೇಣವ ದೊಡ್ಡಮನೆ ,ರಾಜೇಶ್ ಕೊಟ್ಟಾರಿ ,ಸತೀಶ್ ಕುದ್ರು ತಲಪಾಡಿ ಇವರುಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರವಾಗಿ ಎಸ್.ಎಸ್.ಎಲ್ ಸಿ ಪರಿಖೆಯಲ್ಲಿ ತಲಪಾಡಿ ಪಟ್ನಾ ಪ್ರೌಢ ಶಾಲೆಯಲ್ಲಿ ಅತಿ ಹೆಚ್ಚಿನ ಅಂಕ 93 % ಪಡೆದ ಸಫಿಯತ್ ಫಾಝೀಲಾ ಹಾಗೂ ಕೆ ಸಿ ನಗರ ಫಲಾಹಾ ಪ್ರೌಢ ಶಾಲೆಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿದ 96% ಖತೀಜತ್ ತಂಜೀಯಾ ಇವರುಗಳನ್ನು ಗೌರವಿಸಲಾಹಿತು ಈ ಕಾರ್ಯಕ್ರಮವನ್ನು ತಲಪಾಡಿ ವ್ಯಾಯಾಮಶಾಲೆಯ ಮಾಜಿ ಅಧ್ಯಕ್ಷ ವಸಂತ ದೇವಾಡಿಗ ನಿರ್ವಹಿಸಿ ವಂದನಾರ್ಪಣೆ ಗೈದರು.

RELATED ARTICLES

LEAVE A REPLY

Please enter your comment!
Please enter your name here

Most Popular