Wednesday, November 5, 2025
Flats for sale
Homeಜಿಲ್ಲೆಮಂಗಳೂರು : ಆಗಸ್ಟ್ 15 ರಂದು ಇಸ್ಕಾನ್ ಪಿವಿಎಸ್ ಕಲಾಕುಂಜ ಕೋಡಿಯಲ್ ಬೈಲ್ ನಲ್ಲಿ ಶ್ರೀ...

ಮಂಗಳೂರು : ಆಗಸ್ಟ್ 15 ರಂದು ಇಸ್ಕಾನ್ ಪಿವಿಎಸ್ ಕಲಾಕುಂಜ ಕೋಡಿಯಲ್ ಬೈಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅದ್ದೂರಿ ಸಂಭ್ರಮಾಚರಣೆ…!

ಮಂಗಳೂರು : ಪ್ರಪ್ರಥಮ ಬಾರಿಗೆ ಇಸ್ಕಾನ್ ಮಂಗಳೂರು ಶ್ರೀ ಕೃಷ್ಣ ಬಲರಾಮ ಮಂದಿರ ಪಿ.ವಿ.ಎಸ್ ಕಲಾಕುಂಜ ಕೊಡಿಯಾಲ್‌ ಬೈಲ್ ಇವರು ಮಂಗಳೂರಿನಲ್ಲಿ ಅದ್ದೂರಿಯಾದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಮಾಡುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಗುಣಕರ ರಾಮದಾಸ್ ರವರು ತಿಳಿಸಿದ್ದಾರೆ.

ಆಧ್ಯಾಯ 1 – ಭಗವಾನ್ ಶ್ರೀಕೃಷ್ಣನ ದೈವಸ್ವರೂಪ ಅವತಾರಕ್ಕೆ ಸಮರ್ಪಿತ ಎರಡು ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಮ್ಮಿಲಿತವಾದ ಹಬ್ಬ. ಭಕ್ತಿ, ಸಂಸ್ಕೃತಿ ಮತ್ತು ಕ್ರಿಯಾತ್ಮತೆಯ ಮೂಲಕ ಮಂಗಳೂರ ಜನತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಮಗಾ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಗರದಲ್ಲಿ ಶ್ರೀಕೃಷ್ಣ ಪ್ರಜ್ಞೆಯನ್ನು ಪಸರಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ವಿನೋದಾವಳಿಗಳು, ಸ್ಪರ್ಧೆಗಳು, ಡಿಜಿಟಲ್ ಪ್ರಚಾರ, ಪವಿತ್ರ ಆಚರಣೆಗಳು ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಗಳ ವಿವರ:

15 ಆಗಸ್ಟ್, ಬೆಳಿಗ್ಗೆ 9.00 ರಿಂದ ರಾತ್ರಿ 9.00 ರವರೆಗೆ.

ಸ್ಥಳ : ಇಸ್ಕಾನ್ ಮಂಗಳೂರು – ಶ್ರೀಕೃಷ್ಣ ಬಲರಾಮ ಮಂದಿರ, ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್‌ ಬೈಲ್.

ಈ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಮಹಾಭಿಷೇಕ, ಭಜನೆ, ಆಧ್ಯಾತ್ಮಿಕ ಪ್ರವಚನ ಹಾಗೂ ಸಮುದಾಯದ ಕೊಡುಗೆ ಇವುಗಳು ಸಮರ್ಪಿತಗೊಂಡಿದೆ.

16 ಆಗಸ್ಟ್ / ಬೆಳಿಗ್ಗೆ 9.00 ರಿಂದ 1.00 ಗಂಟೆಯವರೆಗೆ.

ಸ್ಥಳ: ಶಾರದಾ ವಿದ್ಯಾಲಯ ಮೈದಾನ. ಕೊಡಿಯಾಲ್ ಬೈಲ್.

ಈ ದಿನದ ಅಮೋಘ ಸಂಜೆಯು ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬದ ಫುಡ್ ಸ್ಟಾಲ್, ಭಕ್ತಿಗೀತೆ ರಸಮಂಜರಿ, ಹಾಗೂ ಆತ್ಮಸ್ಪೂರ್ತಿದಾಯಕವಾದ ಮಧ್ಯರಾತ್ರಿ ಆರತಿ ಒಳಗೊಂಡಿವೆ.

ಕಾರ್ಯಕ್ರಮದ ಮುಖ್ಯಾಂಶಗಳು:

  1. ಶ್ರೀಕೃಷ್ಣ ವೈಭವಮ್:

ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಸ್ತುತ ಪಡಿಸಲಿರುವ ಶ್ರೀಕೃಷ್ಣನ ಬಾಲಲೀಲೆ ಒಳಗೊಂಡ ನೃತ್ಯ ಸಂಗೀತ ಮತ್ತು ನಾಟಕ ರೂಪಾಂತರ

  1. “ಬ್ಲಾಗ್ ಫಾ‌ರ್ ಕೃಷ್ಣ”

ಒಂದು ನಾವಿನ್ಯತೆ ಉಪಕ್ರಮವಾಗಿ ಯುವಕರು ಮತುತ ವಿಷಯ ಸೃಷ್ಟಿಕರ್ತರು (Content creator) ಶ್ರೀಕೃಷ್ಣಾ ಜನ್ಮಾಷ್ಟಮಿ ಆಚರಣೆಯ ಬಗ್ಗೆ ತಮ್ಮ ಬ್ಲಾಗ್, ರೀಲ್ಸ್ ಮತ್ತು ಸೃಜನಾತ್ಮಕ ರೂಪಣೆಯನ್ನು ಪ್ರಸ್ತುತ ಪಡಿಸಲಿರುವರು.

  1. ಸಾಂಸ್ಕೃತಿಕ ಸ್ಪರ್ಧೆಗಳು

ಮಕ್ಕಳು ಮತ್ತು ಎಲ್ಲಾ ವಯಸ್ಸಿನವರಿಗಾಗಿ ವಿವಿಧ ಫ್ಯಾನ್ಸಿ ಡ್ರೆಸ್, ಕೃಷ್ಣನ ವಿಷಯಾಧಾರಿತ ಚಿತ್ರಕಲೆ, ಕ್ವಿಜ್ ಇವುಗಳನ್ನು ಆಯೋಜಿಸಲಾಗಿದ್ದು ಆಧ್ಯಾತ್ಮವನ್ನು ವಿವಿಧ ವಿನೋದಾವಳಿಗಳ ಮೂಲಕ ವೃದ್ಧಿಪಡಿಸುವುದು. ತಮ್ಮ ಹೆಸರು ನೋಂದಾವಣೆಗಾಗಿ ಸಂಪರ್ಕಿಸಬೇಕಾದ ಮೊಬೈಲ್ ನಂ. 7259862303 / 9741932183 ಸಂದರ್ಶಿಸಿರಿ:

bit.ly/40Mr6zU

  1. ಫುಡ್ ಸ್ಟಾಲ್ ಗಳು:

ಹಬ್ಬದ ಆಚರಣೆಯನ್ನು ಪಾಕಶಾಲೆಯ ರುಚಿಯೊಂದಿಗೆ ಉಣಬಡಿಸಲು ಮಂಗಳೂರಿನ ಸುಪ್ರಸಿದ್ಧ ಫುಡ್ ಬ್ರಾಂಡ್‌ಗಳು ಅಧಿಕೃತವಾದ ಪ್ರಸಾದಮ್ ಮತ್ತು ರುಚಿಕರ ತಿಂಡಿ ತಿನಿಸುಗಳೊಂದಿಗೆ ತಯಾರಾಗಿದ್ದಾರೆ.

  1. ಅನನ್ಯವಾದ ಮಧ್ಯರಾತ್ರಿ ಆರತಿ:

ಒಂದು ಶಕ್ತಿದಾಯಕವಾದ ಅಧ್ಯಾತ್ಮದ ಅನುಭೂತಿ ನೀಡುವ ಶ್ರೀಕೃಷ್ಣನ ಜನ್ಮವನ್ನು ಪುನರ್‌ಬಿಂಬಿಸುವ ದೈವೀಕವಾದ ಜನ್ಮ ಆರತಿಯು ನಿಖರವಾಗಿ ಮಧ್ಯರಾತ್ರಿ ವೇಳೆ ಜರಗಲಿದ್ದು ಭಕ್ತಾಧಿಗಳು ಇದರಲ್ಲಿ ಭಾಗಿಯಾಗಿರಿ.

  1. ಮಹಾಭಿಷೇಕ

ತಮ್ಮೆಲ್ಲರ ಹೃದಯವನ್ನು ಭಕ್ತಿಯೊಂದಿಗೆ ಸಮ್ಮಿಳಿಸಿ ದೇವರ ಅನುಗ್ರಹ ಮತ್ತು ಆಶೀರ್ವಾದ ಆವಾಹನೆಗೊಳಿಸುವ ಪವಿತ್ರವಾದ ವೈದಿಕ ಮಂತ್ರೋಚ್ಛಾರಣೆ ಮತ್ತು ವಿಧಿವಿಧ ಸುಸಂದರ್ಭವಾಗಲಿಗೆ ಶ್ರೀಕೃಷ್ಣನ ಮಹಾಭಿಷೇಕ ಸಂಪನ್ನಗೊಳ್ಳಲಿದೆ.

ಈ ಜನ್ಮಾಷ್ಟಮಿಯನ್ನು ಕೇವಲ ಆಚರಣೆಯಾಗದೆ ಚಳುವಳಿಯಾಗಿ ಮಾರ್ಪಡಿಸಿ – ಇಲ್ಲಿ ಭಕ್ತಿಯು ಸಂಸ್ಕೃತಿ, ಆಚರಣೆ ನಾವೀನ್ಯತೆಯೊಂದಿಗೆ ಸಾಗುತ್ತಾ ಮಂಗಳೂರು ಜನತೆ ಶ್ರೀಕೃಷ್ಣನ ಭಕ್ತಿಯ ಗೌರವದೊಂದಿಗೆ ಒಟ್ಟುಗೂಡುವ ಸುಸಂದರ್ಭವಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಗಣ್ಯರು ಶ್ರೀ ಸನಂದನ ದಾಸ, ಉಪಾಧ್ಯಕ್ಷರು, ಇಸ್ಕಾನ್, ಶ್ರೀ ಸುಂದರ ಗೌರ ದಾಸ, ಸಂಚಾಲಕರು, ಇಸ್ಕಾನ್ ,ಶ್ರೀ ಮನು, ಸಂಚಾಲಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular