Wednesday, September 17, 2025
Flats for sale
Homeಗ್ಯಾಜೆಟ್ / ಟೆಕ್ಬೆಂಗಳೂರು : ನವೆಂಬರ್ 18 ರಿಂದ 20 ರ ವರೆಗೆ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ..!

ಬೆಂಗಳೂರು : ನವೆಂಬರ್ 18 ರಿಂದ 20 ರ ವರೆಗೆ ಬೆಂಗಳೂರು ತಂತ್ರಜ್ಞಾನ ಶೃಂಗ ಸಭೆ..!

ಬೆಂಗಳೂರು : ಬೆಂಗಳೂರು ತಂತ್ರ ಜ್ಞಾನ ಶೃಂಗಸಭೆ ಇದೇ ನವೆಂಬರ್ 18 ರಿಂದ 20 ರ ವರೆಗೆ ನಡೆಯಲಿದೆ. ಕರ್ನಾಟಕ ರಾಜ್ಯ ಸರ್ಕಾರ ಆಯೋಜಿಸಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ 28ನೇ ಆವೃತ್ತಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ವಿವರ ನೀಡಿದ ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು, ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ೨೮ನೇ ಆವೃತ್ತಿ ಬರುವ ನವೆಂಬರ್ 18 ರಿಂದ 20 ರ ವರೆಗೂ ನಡೆಯಲಿದೆ ಎಂದರು.

ಬೆಂಗಳೂರು ನಗರ ಮತ್ತೊಮ್ಮೆ ಜಾಗತಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಸಹಭಾಗಿತ್ವದ ಮುಂಚೂಣಿ ಸ್ಥಾನದಲ್ಲಿ ನಿಲ್ಲಲಿದೆ ಎಂದು ಹೇಳಿದರು.
ಬೆಂಗಳೂರಿನ ಅಂತಾರಾಷ್ಟಿçÃಯಪ್ರದರ್ಶನ ಕೇಂದ್ರದಲ್ಲಿ ಈ ಶೃಂಗಸಭೆ ನಡೆಯಲಿದ್ದು, ಶೃಂಗಸಭೆಯಲ್ಲಿ 20 ಸಾವಿರಕ್ಕೂ ಹೆಚ್ಚು ಸಾರ್ಟಪ್‌ಗಳ ಸಂಸ್ಥಾಪಕರುಗಳು,ಸಾವಿರಕ್ಕೂ ಹೆಚ್ಚು ಹೂಡಿಕೆದಾರರು, 15 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು, ತಂತ್ರಜ್ಞಾನ ಕ್ಷೇತ್ರದ 6೦೦ಕ್ಕೂ ಹೆಚ್ಚು ಪರಿಣಿತರು ಭಾಷಣ, ಉಪನ್ಯಾಸ ನೀಡುವರು ಎಂದು ಹೇಳಿದರು.

ಈ ಬೆಂಗಳೂರು ತಂತ್ರಜ್ಞಾನ ಸಭೆಯಲ್ಲಿ 1200 ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗಲಿದ್ದು, 1 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು. ಈ ತಂತ್ರಜ್ಞಾನ ಶೃಂಗಸಭೆಯಲ್ಲಿ 100ಕ್ಕೂ ಹೆಚ್ಚು ಜ್ಞಾನಾಧಾರಿತ ಉಪನ್ಯಾಸಗಳು,5 ಸಾವಿರಕ್ಕೂ ಹೆಚ್ಚು ಕ್ಯೂರೇಟೆಡ್ ಸಭೆಗಳು ನಡೆಯಲಿದ್ದು, 60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿಯಾಗುವರು ಎಂದರು.

ಈ ಬಾರಿಯ ಪ್ರದರ್ಶನವು ಎಂದಿಗಿAತಲೂ ದೊಡ್ಡಮಟ್ಟದಲ್ಲಿ ಇರಲಿದ್ದು, ಹಲವಾರು ಪೆವಿಲಿಯನ್‌ಗಳಲ್ಲಿ ನಾವೀನ್ಯತೆ, ಸಹಭಾಗಿತ್ವ, ವಾಣಿಜ್ಯ
ವಲಯಗಳಲ್ಲಿನ ಆವಿಷ್ಕಾರಗಳ ಪ್ರದರ್ಶನವಾಗಲಿದೆ ಎಂದರು. ಈ ಬೆಂಗಳೂರು ತಂತ್ರಜ್ಞಾನ ಶೃAಗಸಭೆಯ ಅಂಗವಾಗಿ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ೨೦೦ಕ್ಕೂ ಹೆಚ್ಚು ಉನ್ನತ ಮಟ್ಟದ ಸಂಸ್ಥೆಗಳ ಸಿಇಓಗಳೊAದಿಗೆ ಉಪಹಾರ ಸಭೆಯನ್ನು ನಡೆಸಿ, ಬೆಂಗಳೂರು ಟೆಕ್ ಶೃಂಗಸಭೆ-2025 ನ್ನು ಔಪಚಾರಿಕವಾಗಿ ಘೋಷಣೆ ಮಾಡಲು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ ತನ್ನ ನಾಯಕತ್ವ ಸ್ಥಾನವನ್ನು ಮುಂದುವರೆಸಲು ತೆಗೆದುಕೊಳ್ಳಬೇಕಾದ ಅಗತ್ಯ ಪ್ರಮುಖ ಕಾರ್ಯತಂತ್ರಗಳು ಮತ್ತು ಉಪಕ್ರಮಗಳ ಕುರಿತು ಚರ್ಚೆ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular