Thursday, September 18, 2025
Flats for sale
Homeಜಿಲ್ಲೆಮಂಗಳೂರು : ಪ್ರೀತಿಸಿ ಮದುವೆಯಾಗುತ್ತೆನೆಂದು ನಂಬಿಸಿ ಗರ್ಭಿನಿಯಾಗಿಸಿದ ಪ್ರಕರಣ ; ಬೆದರಿಕೆಯ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ...

ಮಂಗಳೂರು : ಪ್ರೀತಿಸಿ ಮದುವೆಯಾಗುತ್ತೆನೆಂದು ನಂಬಿಸಿ ಗರ್ಭಿನಿಯಾಗಿಸಿದ ಪ್ರಕರಣ ; ಬೆದರಿಕೆಯ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ಕೋರಿ ಮಹಿಳೆ ಮನವಿ..!

ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣಾ ಪೊಲೀಸರು ಮೈಸೂರಿನ ಟಿ.ನರಸಿಪುರದಲ್ಲಿ ವಶಕ್ಕೆ ಪಡೆದುಕೊಂಡಿದ್ದರು.

ಆರೋಪಿ ಶ್ರೀ ಕೃಷ್ಣ ಜೆ. ರಾವ್​(21) ಎಂಬಾತನನ್ನು ಜುಲೈ 04ರಂದು ರಾತ್ರಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಜುಲೈ 5ರಂದು ಆರೋಪಿಯನ್ನು ಬಂಧನ​ ಮಾಡಲಾಗಿದೆ. ಜೂನ್​ 24ರಂದು ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾರೆ. ನಾನು ಮತ್ತು ಶ್ರೀ ಕೃಷ್ಣ ಜಿ. ರಾವ್ ಒಂದೇ ಊರಿನವರಾಗಿದ್ದು, 9ನೇ ತರಗತಿಯಿಂದ ಪ್ರೀತಿಸುತ್ತಿದ್ದು, ನನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಗರ್ಭಿಣಿಯಾಗಿಸಿ, ನಂತರ ಅವರ ಮನೆಯವರು (ಅಪ್ಪ-ಅಮ್ಮ) ನಮ್ಮಿಬ್ಬರಿಗೂ ಮದುವೆ ಮಾಡಿಸುತ್ತೇವೆಂದು ಹೇಳಿ ದಿನ ಕಳೆದಂತೆ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ನನಗೆ ಬೇರೆ ದಾರಿ ಕಾಣದೇ ದಿನಾಂಕ 24.06.2025 ರಂದು ಅವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದೆ ಎಂದು ಹೇಳಿದ್ದಾರೆ.

ಆಗ ಶ್ರೀ ಕೃಷ್ಣ ಜಿ. ಲಾವ್ ರವರ ತಂದೆ ಶ್ರೀ ಜಗನ್ನಿವಾಸರವರು ಪೊಲೀಸ್ ಠಾಣೆಗೆ ಬಂದು ಆದಷ್ಟು ಬೇಗ ಮದುವೆ ಮಾಡಿಸುತ್ತೇನೆ, ಹೆರಿಗೆ ಸಮಯದಲ್ಲಿ ಮಗುವಿನ ತಂದೆಯ ಹೆಸರನ್ನು ಶ್ರೀ ಕೃಷ್ಣ ಜಿ. ರಾವ್ ಎಂದು ಬರೆಯಿರಿ ಎಂದು ಮುಚ್ಚಳಿಕೆ ಬರೆದುಕೊಟ್ಟರು. ಸ್ವಲ್ಪ ದಿನ ಕಳೆದ ನಂತರ ಮದುವೆ ಯಾವಾಗ ಮಾಡಿಸುವಿರಿ, ಹೆಸರಿಗೆ ಸಮಯ ಹತ್ತಿರ ಬರುತ್ತಿದೆ ಎಂದಾಗ ಶ್ರೀ ಜಗನ್ನಿವಾಸರವರು “ನನ್ನ ಮಗ ಈಗ ಮೇಜರ್ ಆಗಿದ್ದಾನೆ. ಅವನು ನಿನ್ನನ್ನು ಒಪ್ಪುತ್ತಿಲ್ಲ, ನಾನೂ ಕೂಡ ಈಗ ಒಪ್ಪುವುದಿಲ್ಲ” ಎಂದು ಹೇಳಿದರು. ಮತ್ತೆ ನಾನು ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ಕೂಡ ದಾಖಲಾಗಿದ್ದು ಕೂಡ ಅದರಂತೆ ಕೃಷ್ಣ ಜಿ. ರಾವ್‌ರವರನ್ನು ಬಂಧಿಸಲಾಗಿತ್ತು. ನಂತರ ಮಾನ್ಯ ನ್ಯಾಯಾಲಯವು ಅವರ ಜಾಮೀನನ್ನು ಕೂಡ ರದ್ದುಗೊಳಿಸಿತ್ತು. ಇದೀಗ ಬೆದರಿಕೆ ಹಿನ್ನೆಲೆ ಮಗು ಹಾಗೂ ತಾಯಿಯ ಜೀವ ಬೆದರಿಕೆ ಇದೆ ಎಂದು ಪೋಲಿಸ್ ವರಿಷ್ಠ ಅಮೀತ್ ಸಿಂಗ್ ರವರಿಗೆ ಮನವಿಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular