Wednesday, October 22, 2025
Flats for sale
Homeದೇಶನವದೆಹಲಿ : ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುಬಲಕ್ಕೆ ಭಾರೀ ಹೊಡೆತ, ಪಾಕ್‌ನ 6 ಫೈಟರ್...

ನವದೆಹಲಿ : ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುಬಲಕ್ಕೆ ಭಾರೀ ಹೊಡೆತ, ಪಾಕ್‌ನ 6 ಫೈಟರ್ ಜೆಟ್ ನಾಶ : ಸೇನೆ.!

ನವದೆಹಲಿ : ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯ ನಂತರ ಮೇ 7ರಂದು ನಡೆದಿದ್ದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಲ್ಲಿ ಪಾಕಿಸ್ತಾನದ ವಾಯುಬಲಕ್ಕೆ ಭಾರೀ ಹೊಡೆತ ಬಿದ್ದಿದ್ದು, ಒಟ್ಟು 6 ಪಾಕ್ ಯುದ್ಧ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ ಎಂದು ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಹೇಳಿದ್ದಾರೆ.

ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯ ನಂತರ ಮೇ 7 ರಂದು ನಡೆದಿದ್ದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುಬಲಕ್ಕೆ ಭಾರೀ ಹೊಡೆತ ಬಿದ್ದಿದೆ. ಒಟ್ಟು ಆರು ವಿಮಾನಗಳನ್ನು ಅದು ಕಳೆದುಕೊಂಡಿದೆ. ಆರು ವಿಮಾನಗಳ ಪೈಕಿ ಐದು ಯುದ್ಧವಿಮಾನಗಳಾದರೆ, ಮತ್ತೊಂದು ಭಾರೀ ದೊಡ್ಡ ವಿಮಾನವೆಂದು ಭಾರತೀಯ ವಾಯುಪಡೆ ಘೋಷಿಸುವ ಮೂಲಕ ವೈರಿ ದೇಶಕ್ಕಾಗಿರುವ ಹಾನಿಯನ್ನು ಇದೇ ಮೊದಲ ಬಾರಿ ಬಹಿರಂಗಪಡಿಸಿದೆ.

ಜಾಕೋಬಾಬಾದ್‌ನಲ್ಲಿ ನಿಲ್ಲಿಸಿದ್ದ ಕೆಲವು ಎಫ್-16 ವಿಮಾನಗಳು ಭಾರತದ ದಾಳಿಗೆ ಧೂಳಿಪಟವಾದರೆ, ಭೋಲಾರಿಯಲ್ಲಿ ನಿಲ್ಲಿಸಲಾಗಿದ್ದ ಎಇಡಬ್ಲೂö್ಯಎಂಡ್ ಸಿ ವಿಮಾನಗಳು ಉರುಳಿಬಿದ್ದವು. ಈ ಆರು ವಿಮಾನಗಳಲ್ಲದೆ, ಪಾಕಿಸ್ತಾನ ವೈಮಾನಿಕ ನೆಲೆಗಳೂ ಭಾರೀ ನಷ್ಟ ಅನುಭವಿಸಿವೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಎ.ಪಿ.ಸಿಂಗ್ಬೆ Aಗಳೂರಿನಲ್ಲಿ ನಡೆದ ವಾರ್ಷಿಕ 16 ನೇ ಏರ್‌ಚೀಫ್ ಮಾರ್ಷಲ್ ಎಲ್.ಎಂ.ಕತ್ರೆ ವಿಚಾರಸಂಕಿರಣದಲ್ಲಿ ದೃಢಪಡಿಸಿದರು.

ದಾಳಿಯ ಸಮಯದಲ್ಲಿ ಒಂದು ಹ್ಯಾಂಗರ್‌ನಲ್ಲಿ ಕನಿಷ್ಟ ಎಡಬ್ಲೂö್ಯಎಂಡ್‌ಸಿ ಇದ್ದರೆ ಮತ್ತೊಂದರಲ್ಲಿ ಕೆಲವು ಎಫ್-16 ವಿಮಾನಗಳಿದ್ದವು. ಅವುಗಳನ್ನೆಲ್ಲವನ್ನೂ ಹೊಡೆದುರುಳಿಸಿರುವ ಸೂಚನೆಗಳಿವೆ. ಅತಿದೊಡ್ಡ ವಿಮಾನವನ್ನು 300 ಕಿ.ಮೀ ದೂರದಿಂದಲೇ ಹೊಡೆದುರುಳಿಸಲಾಗಿದೆ ಎಂದರು.

ಈ ವಿಮಾನಗಳ ಹೊರತಾಗಿ ಹೆಚ್ಚಿನ ಸಂಖ್ಯೆಯ ಯುಎವಿ ಹಾಗೂ ಡ್ರೋನ್‌ಗಳಿದ್ದವು. ಅವುಗಳಲ್ಲಿ ಕೆಲವು ಕ್ಷಿಪಣಿಗಳು ನಮ್ಮ ಪ್ರದೇಶದಲ್ಲಿ ಬಿದ್ದಿವೆ. ಅವುಗಳನ್ನು ವಶಪಡಿಸಿಕೊಂಡು ಅಧ್ಯಯನ ಮಾಡುತ್ತಿದ್ದೇವೆ. ಎಲ್ಲಿಂದ ಉಡಾಯಿಸಲಾಯಿತು? ಯಾವ ಮಾರ್ಗದಲ್ಲಿ ಹಾರಿಸಲಾಯಿತು? ಅವು ಯಾವ ರೀತಿಯ ವ್ಯವಸ್ಥೆಗಳು ಮತ್ತು ಯಾವ ಮಾದರಿಗೆ ಸೇರಿದ್ದು ಮತ್ತು ಯಾವ ರೀತಿಯ ವೈಶಿಷ್ಟö್ಯಗಳನ್ನು ಹೊಂದಿದ್ದವು ಎಂಬುದನ್ನು ಕAಡುಹಿಡಿಯುತ್ತಿದ್ದೇವೆ ಎಂದರು.

ರಷ್ಯನ್ ನಿರ್ಮಿತ ಎಸ್-4೦೦ ವ್ಯವಸ್ಥೆ ಅದ್ಭುತ ರೀತಿಯಲ್ಲಿ ಕೆಲಸ ಮಾಡಿತು. ಗೇಮ್ ಚೆಂಬರ್ ರೀತಿಯಲ್ಲಿ ಕೆಲಸ ಮಾಡಿವೆ ಎಂದು ಬಣ್ಣಿಸಿದರು. “ನಮ್ಮಲ್ಲಿ ಯಾವುದೇ ನಿರ್ಬಂಧಗಳಿದ್ದರೂ ಅವು ಸ್ವಯಂ ನಿರ್ಮಿತವಾಗಿದ್ದವು. ದಾಳಿಯನ್ನು ಎಷ್ಟು ಹೆಚ್ಚಿಸಬೇಕೆಂಬುದನ್ನು ನಾವೇ ನಿರ್ಧರಿಸಿದ್ದೇವೆ. ಯೋಜನೆ ಮತ್ತು ಕಾರ್ಯಗತಗೊಳಿಸುವ ವಿಷಯದಲ್ಲಿ ನಮಗೆ ಸಂಪೂರ್ಣ ಸ್ವಾತಂತ್ರö್ಯ ಇತ್ತು. ನಾವು ಅದರ ಬಗ್ಗೆ ಪ್ರಬುದ್ಧರಾಗಿರಲು ಬಯಸಿದ್ದರಿಂದ ನಮ್ಮ ದಾಳಿಗಳ ಬಗ್ಗೆ ಮೌಲ್ಯಾಂಕನ ಮಾಡಲಾಯಿತು. ಮೂರು ಪಡೆಗಳ ಮಧ್ಯೆ ಹೊಂದಾಣಿಕೆಯೂ ಏರ್ಪಟ್ಟಿತ್ತು ಎಂದವರು ವಿವರಿಸಿದರು. ಇದೇ ಭಾಷಣದ ಸಮಯದಲ್ಲಿ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿ ಮತ್ತು ಮುಯಿಕೆಯಲ್ಲಿರುವ ಎಲ್‌ಇಟಿ ಪ್ರಧಾನ ಕಚೇರಿಗೆ ಹಾನಿಯಾಗುವ ಮೊದಲಿನ ಹಾಗೂ ಆನಂತರದ ಚಿತ್ರಗಳನ್ನೂ ಹಂಚಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

Most Popular