Tuesday, October 21, 2025
Flats for sale
Homeರಾಜ್ಯಮೈಸೂರು : ಕೆಆರ್​ಎಸ್ ಡ್ಯಾಂ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು : ಸಚಿವ ಎಚ್.ಸಿ ಮಹದೇವಪ್ಪ...

ಮೈಸೂರು : ಕೆಆರ್​ಎಸ್ ಡ್ಯಾಂ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು : ಸಚಿವ ಎಚ್.ಸಿ ಮಹದೇವಪ್ಪ ಹೇಳಿಕೆಗೆ ಇತಿಹಾಸ ತಜ್ಞರು ಆಕ್ರೋಶ..!

ಮೈಸೂರು : ಕೆಆರ್‌ಎಸ್ ಅಣೆಕಟ್ಟು ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೃಷ್ಣ ರಾಜ ಸಾಗರ ಅಣೆಕಟ್ಟು, ಕಾವೇರಿ ನದಿ ಮತ್ತು ಅದರ ಉಪನದಿಗಳಾದ ಹೇಮಾವತಿ ಮತ್ತು ಲಕ್ಷ್ಮಣ ತೀರ್ಥಕ್ಕೆ ಕಟ್ಟಲಾಗಿದೆ. ಅಣೆಕಟ್ಟಿಗೆ ಹೊಂದಿಕೊಂಡಿರುವ ಕೆಆರ್‌ಎಸ್ ಅಣೆಕಟ್ಟು ಮತ್ತು ಅಲಂಕಾರಿಕ ಉದ್ಯಾನ, ಬೃಂದಾವನ ಉದ್ಯಾನಗಳು ಮೈಸೂರಿನಲ್ಲಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಅಣೆಕಟ್ಟನ್ನು ನೂರು ವರ್ಷಗಳ ಹಿಂದೆ ಸಾಂಪ್ರದಾಯಿಕ ವಸ್ತುಗಳು ಮತ್ತು ತಂತ್ರಗಳನ್ನು ಬಳಸಿ ಯೋಜಿಸಿ ನಿರ್ಮಿಸಲಾಯಿತು. ತೀವ್ರ ಬರಗಾಲದ ಸಮಯದಲ್ಲಿ ರಾಜ್ಯದ ಜನರಿಗೆ ಸಹಾಯ ಮಾಡಲು ಮಹಾರಾಜ ನಲ್ವಾಡಿ ಕೃಷ್ಣರಾಜ ಒಡೆಯರ್ IV ಅಣೆಕಟ್ಟನ್ನು ನಿರ್ಮಿಸಿದರು. ಮೈಸೂರಿನ ಮುಖ್ಯ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರು ಯೋಜಿಸಿದ ಕೆಆರ್‌ಎಸ್ ಅಣೆಕಟ್ಟು ಸ್ವಯಂಚಾಲಿತ ಕ್ರೆಸ್ಟ್ ಗೇಟ್‌ಗಳನ್ನು ಸ್ಥಾಪಿಸಿದ ಮೊದಲ ಅಣೆಕಟ್ಟು. ಈ ಅಣೆಕಟ್ಟು ಇನ್ನೂ ಜನರಿಗೆ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ ಮತ್ತು ಮಂಡ್ಯ, ಮೈಸೂರು ಮತ್ತು ಬೆಂಗಳೂರಿನಲ್ಲಿ ನೀರಾವರಿಯನ್ನು ಒದಗಿಸುತ್ತದೆ.

ಈ ರಾಜಕಾರಣಿಗಳೇ ಇಷ್ಟೇ ತಮ್ಮ ಬೆಳೆ ಬೇಹಿಸಿಕೊಳ್ಳಲ್ಲು ಎಲುಬಿಲ್ಲದ ನಾಲಗೆಯಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಬೊಗಳುತ್ತಿರುವುದು ಕೆದಕರ. ಅದರಂತೆಯೇ ಕೆಆರ್​ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂಬ ಸಚಿವ ಮಹದೇವಪ್ಪ ಹೇಳಿಕೆ ಈಗ ವಿವಾದಕ್ಕೆ ಗ್ರಾಸವಾಗಿದೆ.

ಜೀವ ನದಿ ಕಾವೇರಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂಬ ಸಚಿವ ಮಹದೇವಪ್ಪ ಹೇಳಿಕೆ ಈಗ ಕರ್ನಾಟಕದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ರಾಜಕೀಯವಾಗಿ ಈ ಹೇಳಿಕೆಗೆ ಬಂದಿರುವ ಆಕ್ಷೇಪಗಳು ಒಂದೆಡೆಯಾದರೆ, ಇತಿಹಾಸ ತಜ್ಞರಿಂದಲೂ ಸಚಿವರ ಮಾತಿಗೆ ವಿರೋಧ ವ್ಯಕ್ತವಾಗಿದೆ. ಹಾಗೆಂದು, ಟಿಪ್ಪು ಕಾಲದಲ್ಲಿ ಬರೆದ ಮೂರು ಶಿಲಾನ್ಯಾಸದ ಕಲ್ಲುಗಳು ಕೆಆರ್​ಎಸ್ ಡ್ಯಾಂ ಆವರಣದಲ್ಲಿರುವುದು ನಿಜ. ಹಾಗಾದರೆ ಅವುಗಳು ಎಲ್ಲಿಂದ ಬಂದವು? ಇತಿಹಾಸದ ಪ್ರಕಾರ, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅಂದರೆ, 1911 ರಲ್ಲಿ ಕೆಆರ್​ಎಸ್ ಡ್ಯಾಂ ಕಾಮಗಾರಿ ಶುರುವಾಗಿ 1932ರಲ್ಲಿ ಲೋಕಾರ್ಪಣೆಯಾಗಿದೆ. ಹಾಗಾದರೆ, 117 ವರ್ಷದ ಮುಂಚಿತವಾಗಿಯೇ ಅಡಿಗಲ್ಲು‌ ಹಾಕಲಾಗಿತ್ತೇ? ಇಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು.

ಕೃಷ್ಣರಾಜಸಾಗರ ಅಣೆಕಟ್ಟನ್ನು (KRS ಡ್ಯಾಂ) ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಇದರ ನಿರ್ಮಾಣ ಕಾರ್ಯವು 1911 ರಲ್ಲಿ ಪ್ರಾರಂಭವಾಗಿ 1932 ರಲ್ಲಿ ಪೂರ್ಣಗೊಂಡಿತು. ಈ ಯೋಜನೆಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಪ್ರಮುಖ ಪಾತ್ರ ವಹಿಸಿದ್ದರು, ಮತ್ತು ಅನೇಕ ಇಂಜಿನಿಯರ್ ಗಳು ಹಾಗೂ ಕಾರ್ಮಿಕರು ಈ ಯೋಜನೆಗಾಗಿ ಶ್ರಮಿಸಿದರು.

ಕೆಆರ್​ಎಸ್ ಡ್ಯಾಂನ ನಿರ್ಮಾಣದ ವಿವರಗಳು:
ಯೋಜನೆಯ ಆರಂಭ : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಯೋಜನೆಯನ್ನು ಪ್ರಾರಂಭಿಸಿದರು.

ನಿರ್ಮಾಣ ಅವಧಿ:
1911 ರಿಂದ 1932 ರವರೆಗೆ ಅಣೆಕಟ್ಟಿನ ನಿರ್ಮಾಣ ನಡೆಯಿತು.

ಮುಖ್ಯ ಇಂಜಿನಿಯರ್:
ಸರ್ ಎಂ. ವಿಶ್ವೇಶ್ವರಯ್ಯ ಅವರು ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು.

ಇತರ ಪ್ರಮುಖ ವ್ಯಕ್ತಿಗಳು:
ಮ್ಯಾಕ್ ಹಚ್, ಕ್ಯಾ. ಡೇವಿಸ್, ಸರ್ದಾರ್ ಎಂ. ಕಾಂತರಾಜ ಅರಸ್, ಆಲ್ಬಿಯನ್ ರಾಜಕುಮಾರ್ ಬ್ಯಾನರ್ಜಿ, ಎಂ. ಇಸ್ಮಾಯಿಲ್, ಕರ್ಪೂರ ಶ್ರೀನಿವಾಸರಾವ್, ಕೆ. ಕೃಷ್ಣ ಅಯ್ಯಂಗಾರ್, ಬಿ. ಸುಬ್ಬಾರಾವ್, ಸಿ. ಕಡಾಂಬಿ, ಜಾನ್ ಬೋರ್, ಕೆ. ಆರ್. ಶೇಷಾಚಾರ್, ಮತ್ತು ಎಚ್. ಪಿ. ಗಿಬ್ಸ್ ಮುಂತಾದವರು ಈ ಯೋಜನೆಗೆ ಕೊಡುಗೆ ನೀಡಿದರು.

ಕಾರ್ಮಿಕರು:
ಸುಮಾರು 10,000 ಕ್ಕೂ ಹೆಚ್ಚು ಕಾರ್ಮಿಕರು ಅಣೆಕಟ್ಟಿನ ನಿರ್ಮಾಣದಲ್ಲಿ ಭಾಗವಹಿಸಿದ್ದರು.

ಪ್ರಯೋಜನಗಳು:
ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಮುಂತಾದ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ಕೃಷಿ ಭೂಮಿಗೆ ನೀರಾವರಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಕೃಷ್ಣರಾಜಸಾಗರ ಅಣೆಕಟ್ಟು ಕರ್ನಾಟಕದ ಒಂದು ಪ್ರಮುಖ ಹೆಗ್ಗುರುತಾಗಿದ್ದು, ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಟಿಪ್ಪು ಸುಲ್ತಾನ್​​​ಗಿಂತಲೂ ಮೊದಲೇ ಗಂಗರ ಆಡಳಿತ ಕಾಲದಲ್ಲಿ ಕಾವೇರಿ ನದಿಗೆ 2 ಚಿಕ್ಕ ಡ್ಯಾಂಗಳನ್ನು ನಿರ್ಮಿಸಲಾಗಿತ್ತು ಎಂದು ಸಂಶೋಧಕ ಹಾಗೂ ಇತಿಹಾಸ ತಜ್ಞರಾಗಿರುವ ತಲಕಾಡು ಚಿಕ್ಕರಂಗೇಗೌಡ ತಿಳಿಸಿದ್ದಾರೆ. ಮೂರನೇ ಡ್ಯಾಂ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಕಾಲದಲ್ಲಿ ಚಿಂತನೆ ನಡೆಸಲಾಗಿತ್ತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. 1791ರಲ್ಲಿ ಟಿಪ್ಪು ಸುಲ್ತಾನ್ ಒಂದು ಯೋಜನೆಯನ್ನು ಅಂದಿನ ನೀರಾವರಿ ತಂತ್ರಜ್ಞರಿಂದ ಸಿದ್ಧಪಡಿಸಿದ್ದರು. ಸುಮಾರು 70 ಅಡಿಗಳ ಎತ್ತರದ ಡ್ಯಾಂ ಅನ್ನು ಕಾವೇರಿ ನದಿಗೆ ಕಟ್ಟಬೇಕು ಎಂಬ ಯೋಜನೆ ಸಿದ್ಧಮಾಡಿಸಿದ್ದರು. ಆ ಡ್ಯಾಂ ನಿರ್ಮಾಣಕ್ಕೆ ದುಡ್ಡು ಕೂಡ ಮೀಸಲಿಟ್ಟಿದ್ದರು. ನಂತರ ಅದಕ್ಕೆ ಶಂಕುಸ್ಥಾಪನೆಯನ್ನು ಕೂಡ ಮಾಡಿದ್ದರು ಎಂಬುದಕ್ಕೆ ದಾಖಲೆಗಳಿವೆ ಎಂದು ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈಗಿನ ಕೆಆರ್​​ಎಸ್ ಡ್ಯಾಂ ಇರುವ ಜಾಗದಲ್ಲೇ ಅಣೆಕಟ್ಟೆ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಮುಂದಾಗಿದ್ದರೇ ಎಂಬುದಕ್ಕೆ ಪುರಾವೆಗಳಿಲ್ಲ. ಅಷ್ಟಕ್ಕೂ, ಟಿಪ್ಪು ನಿರ್ಮಾಣ ಮಾಡಲು ಉದ್ದೇಶಿಸಿದ್ದು 70 ಅಡಿ ಎತ್ತರದ ಡ್ಯಾಂ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.

ಕೆಆರ್​ಎಸ್ ಡ್ಯಾಂಗಾಗಿ ತಾಯಿ, ಪತ್ನಿಯ ಒಡವೆ ಮಾರಿದ್ದ ನಾಲ್ವಡಿ ಒಡೆಯರ್!
ಕನ್ನಂಬಾಡಿ ಅಣೆಕಟ್ಟೆಯ ಪ್ರಸ್ತಾವ ಮೊದಲು ಬಂದಾಗ ಅದಕ್ಕೆ ವಿಪರೀತ ಖರ್ಚಾಗುತ್ತದೆ ಎಂದು ಅಂದಿನ ಹಣಕಾಸು ಸಚಿವರು ತಿರಸ್ಕರಿಸುತ್ತಾರೆ. ಮೈಸೂರಿನ ಅಂದಿನ ಮೂರು ವರ್ಷದ ಆದಾಯದ ದುಡ್ಡು ಬೇಕಾಗುತ್ತದೆ ಎಂಬ ಕಾರಣಕ್ಕೆ ಪ್ರಸ್ತಾವನೆ ತಿರಸ್ಕರಿಸಲ್ಪಡುತ್ತದೆ. ಆಗ ನಾಲ್ವಡಿ ಒಡೆಯರ್ ಅವರ ತಾಯಿ ಕೆಂಪ ನಂಜಮ್ಮ ಮತ್ತು ಪತ್ನಿ ಪ್ರತಾಪ ಕುಮಾರಿ ತಮ್ಮಲ್ಲಿದ್ದ ಒಡವೆಗಳನ್ನೆಲ್ಲ ಒಡೆಯರ್​​ಗೆ ಕೊಡುತ್ತಾರೆ. ಅವರು ಅದನ್ನು ಬಾಂಬೆಯಲ್ಲಿ ಮಾರಾಟ ಮಾಡಿ ಒಂದಷ್ಟು ದುಡ್ಡು ಹೊಂದಿಸಿ ಡ್ಯಾಂಗೆ ಅನುಮೋದನೆ ದೊರೆಯಲು ವ್ಯವಸ್ಥೆ ಮಾಡಿಕೊಟ್ಟಿದ್ದರು ಎಂದೂ ತಲಕಾಡು ಚಿಕ್ಕರಂಗೇಗೌಡ ಮಾಹಿತಿ ನೀಡಿದ್ದಾರೆ.

ಮೈಸೂರಿಗೆ ಟಿಪ್ಪು ಸುಲ್ತಾನ್ ಕೊಡುಗೆ ಇದ್ದೇ ಇದೆ, ಇಲ್ಲವೆನ್ನಲಾಗದು. ಹಾಗೆಂದು ಆತನೇ ಕೆಆರ್​​ಎಸ್​​ಗೆ ಅಡಿಗಲ್ಲು ಹಾಕಿದ್ದ ಎನ್ನುವುದು ಸರಿಯಲ್ಲ. ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಲು ಆತ ಕನಸು ಕಂಡಿದ್ದ ಎಂಬುದನ್ನಷ್ಟೇ ಆಧಾರವಾಗಿ ಕೆಆರ್​ಎಸ್​​ಗೆ ಆತ ಅಡಿಗಲ್ಲು ಹಾಕಿದ್ದ ಎನ್ನುವುದಾದರೆ ಅದಕ್ಕಿಂತಲೂ ಮೊದಲು 2 ಅಣೆಕಟ್ಟೆ ನಿರ್ಮಾಣ ಮಾಡಿದ್ದ ಗಂಗರನ್ನು ನೆನೆಯಬೇಕಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಇತಿಹಾಸದ ಮತ್ತು ದಾಖಲೆಗಳ ಪ್ರಕಾರ ಕೃಷ್ಣರಾಜಸಾಗರ ಜಲಾಶಯದ ಸಂಪೂರ್ಣ ಶ್ರೇಯ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರಿಗೇ ಸೇರಬೇಕು ಎಂದಿದ್ದಾರೆ.ಟಿಪ್ಪು ಸುಲ್ತಾನ್ ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಬೇಕೆಂದು ಕನಸು ಕಂಡಿದ್ದು ನಿಜ. ಆದರೆ, ಅದು ಕೆಆರ್​​ಎಸ್ ಎನ್ನುವುದಕ್ಕೆ ಮತ್ತು ಕೆಆರ್​ಎಸ್ ಡ್ಯಾಂಗೆ ಆತನೇ ಅಡಿಗಲ್ಲು ಹಾಕಿದ್ದ ಎಂಬುದಕ್ಕೆ ಇತಿಹಾಸದಲ್ಲಿ ಯಾವುದೇ ಪುರಾವೆ ಇಲ್ಲ. ಹೀಗಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಮಹದೇವಪ್ಪ ಸ್ಪಷ್ಟ ಮಾಹಿತಿ, ಪುರಾವೆ ಇಲ್ಲದೆ ಅಂಥ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ತಲಕಾಡು ಚಿಕ್ಕರಂಗೇಗೌಡ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular