ಯಾದಗಿರಿ : ಮೂರು ಜನ ಯುವಕರೂ ಕುಡಿದ ನಶೆಯಲ್ಲಿ ಹೋಗಿ ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ನಾಗೇಶ್, ಕುಮಾರ್ ಹಾಗೂ ಸಂಜಯ್ಯ ಕುಡಿದು ಮಕ್ಕಳ ಮೇಲೆ ಹಲ್ಲೆ ಮಾಡಿದ ಯುವಕರು.
ಹಲ್ಲೆ ಮಾಡಿದವರ ವಿರುದ್ಧ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಹಲ್ಲೆ ಮಾಡಿದ ಮೂವರಲ್ಲಿ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಮಧ್ಯಾಹ್ನದ ವೇಳೆ ಈ ಪುಂಡರು ಶಾಲೆಗೆ ಹೋಗಿ ಸಿಕ್ಕ ಸಿಕ್ಕ ಮಕ್ಕಳ ಹೊಡೆದಿದ್ದು ಒಡೆತ ತಾಳದೆ ಅಳುತ್ತ ಪೋಷಕರ ಮುಂದೆ ಮಕ್ಕಳು ಆಕ್ರಂದನ ವ್ಯಕತಪಡಿಸಿದ್ದಾರೆ.ಶಾಲೆಗೆ ಹೋಗಿ ಮೂರು ಜನ ಯುವಕರನ್ನ ಪೋಷಕರು ಹಿಡಿಡಿದ್ದು ಈ ಬಗ್ಗೆ ಪೋಷಕರು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.