ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ದಟ್ಟ ಕಾಡಿನ ಗುಹೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಹಿಂದೂ ಧರ್ಮದಲ್ಲಿ ನಂಬಿಕೆಯುಳ್ಳ ರಷ್ಯಾ ಮೂಲದ ಮಹಿಳೆಯನ್ನು ಅವರ ಇಬ್ಬರು ಚಿಕ್ಕ ಮಕ್ಕಳೊಂದಿಗೆ ರಕ್ಷಿಸಲಾಗಿದೆ.
ಮೋಹಿ (40), ಅವರ ಚಿಕ್ಕ ಮಕ್ಕಳಾದ ಪ್ರಿಯಾ (06) ಮತ್ತು ಅಮಾ (04) ಅವರನ್ನು ರಕ್ಷಿಸಲಾಗಿದೆ. ವ್ಯಾಪಾರ ವೀಸಾದಲ್ಲಿ ರಷ್ಯಾದಿಂದ ಗೋವಾಕ್ಕೆ
ಬಂದ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟಕಾಡಿನಲ್ಲಿರುವ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ
ವಾಸಿಸುತ್ತಿದ್ದರು. ಅವರು ಅಲ್ಲಿ ಒಂದು ಸಣ್ಣ ರುದ್ರ ವಿಗ್ರಹವನ್ನು ಇಟ್ಟುಕೊಂಡು ಪೂಜೆಯಲ್ಲಿ ಸಮಯ ಕಳೆದಿದ್ದಾರೆ. ಸಿಪಿಐ ಶ್ರೀಧರ್ ನೇತೃತ್ವದ ತಂಡವು ಭೂಕುಸಿತದ ಕಾರಣ ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿತ್ತು ಮತ್ತು ಗುಹೆಯಲ್ಲಿ ಯಾರೋ ವಾಸಿಸುತ್ತಿದ್ದಾರೆ ಎಂದು ಅವರು ಯಾರೋ ವಾಸಿಸುತ್ತಿರುವುದನ್ನು ಪತ್ತೆ ಹಚ್ಚಿ ಅವರು ವಿದೇಶಿ ಮಹಿಳೆಯನ್ನು -ಮಕ್ಕಳನ್ನು ರಕ್ಷಿಸಿದ್ದಾರೆ.
ಆಧ್ಯಾತ್ಮಿಕತೆಯ ಬಗ್ಗೆ ಆಳವಾದ ಆಸಕ್ತಿ ಹೊಂದಿರುವ ಈ ರಷ್ಯನ್ ಮಹಿಳೆ, ಪ್ರಕೃತಿಯನ್ನು ಆನಂದಿಸಲು ತನ್ನ ಮಕ್ಕಳೊಂದಿಗೆ ಒಂಟಿಯಾಗಿ ಗುಹೆಗೆ ಹೋಗಿದ್ದರು. ಭೂಕುಸಿತಕ್ಕೆ ಒಳಗಾಗುವ ರಾಮತೀರ್ಥ ಬೆಟ್ಟದ ಗುಹೆಯಲ್ಲಿ ಕತ್ತಲೆಯಲ್ಲಿ ತನ್ನ ಚಿಕ್ಕ ಮಕ್ಕಳೊಂದಿಗೆ ಅವಳು ವಾಸಿಸುತ್ತಿದ್ದಳು.
ಎಸ್.ಪಿ.ಎಂ. ನಾರಾಯಣ್ ಅವರ ಸಲಹೆಯ ಮೇರೆಗೆ, ಸ್ಥಳೀಯ ಸರ್ಕಾರೇತರ ಸಂಸ್ಥೆಯೊAದರ ಮೂಲಕ ತೀವ್ರವಾದ ಸಮಾಲೋಚನೆಯ
ನಂತರ, ಅವಳನ್ನು ಬೆಂಗಳೂರಿಗೆ ಕಳುಹಿಸಲಾಯಿತು ಮತ್ತು ರಷ್ಯಾದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅವಳನ್ನು ತನ್ನ ದೇಶಕ್ಕೆ ಹಿಂತಿರುಗಿಸಲು ವ್ಯವಸ್ಥೆ ಮಾಡಲಾಗಿದೆ.