ನವದೆಹಲಿ : ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 270 ಮಂದಿಯ ಸಾವಿಗೆ ಕಾರಣವಾಗಿರುವ ರಹಸ್ಯ ಬಯಲಾಗಿದೆ. ತಡರಾತ್ರಿ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ವಿಮಾನದ ಇಂಜಿನ್‌ಗಳಿಗೆ ಇAಧನ ಪೂರೈಕೆಯಾಗದೆ ಸ್ಥಗಿತಗೊಂಡಿದ್ದೇ ಪತನಕ್ಕೆ ಕಾರಣ ಎಂದು ವರದಿಯಿಂದ ಸ್ಪಷ್ಟವಾಗಿದೆ.
ಈ ಮೊದಲು ದುರಂತ ಸಂಭವಿಸಿದ ದಿನದಂಡು ವಿಮಾನದ ರೆಕ್ಕೆಗೆ ಹಕ್ಕಿ ಬಡಿದು ಪತನವಾಗಿತ್ತು ಎಂದು ಹೇಳಲಾಗಿತ್ತು. ಆದರೆ, ವಿಮಾನ ಅಪಘಾತ ತನಿಖಾ ಸಂಸ್ಥೆ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ವಿಮಾನದ ರೆಕ್ಕೆಗೆ ಪಕ್ಷಿ ಬಡಿದಿಲ್ಲ ಪ್ರಾಥಮಿಕ ತನಿಖೆಯ 15 ಅಂಶಗಳು ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ದುರಂತದ ಬಗ್ಗೆ ಕಪ್ಪು ಪೆಟ್ಟಿಗೆಯಿಂದ ಸಂಗ್ರಹಿಸಿ ಮಾಹಿತಿಯನ್ನು ತನಿಖಾ ಸಂಸ್ಥೆ ವಿಶ್ಲೇಷಣೆ ನಡೆಸಿ 15 ಅಂಶಗಳನ್ನು ಉಲ್ಲೇಖಿಸಿವೆ.
ಈ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟು 0809 ಯುಟಿಸಿ ಬಳಿ ಜೂನ್ 12 ರಂದು ಮಧ್ಯಾಹ್ನ 1.39ಕ್ಕೆ ಪತನಗೊಂಡಿತು. ಈ ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಯಿತು. ವಿಮಾನದಲ್ಲಿದ್ದ 12 ಸಿಬ್ಬಂದಿ ಹಾಗೂ 229 ಮಂದಿ ಪ್ರಯಾಣಿಕರು ಸಾವನ್ನಪ್ಪಿ ಒಬ್ಬರು ಗಾಯಗೊಂಡರು. ವಿಮಾನ ಪತನ ಗೊಂಡು ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿದ್ದ 19 ಜನ ಮೃತಪಟ್ಟಿದ್ದಾರೆ. ‘ಮೇ ಡೇ’ ಎಂದು ಕೂಗಿದ್ದಾರೆ.ಈ ವೇಳೆ ಪೈಲಟ್‌ಗಳ ನಡುವಿನ ಸಂಭಾಷಣೆಯೂ ದಾಖಲಾಗಿದ್ದು, ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್‌ಗೆ ‘ಏಕೆ ಕಟ್ ಆಪ್ ಮಾಡಿದ್ದೀರಿ” ಎಂದು ಕೇಳಿದ್ದಾರೆ. ಆಗ ಇನ್ನೊಬ್ಬ ಪೈಲಟ್ ನಾನು ಹಾಗೆ ಮಾಡಿಲ್ಲ ಎಂದು ಉತ್ತರಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಸಂಭವಿಸಿದ ಡ್ರೀಮ್ ಲೈನರ್ ವಿಮಾನದಲ್ಲಿ ಏನೆಲ್ಲ ಸಮಸ್ಯೆಗಳಿದ್ದವು ಎಂಬುದನ್ನು ತನಿಖಾ ಸಂಸ್ಥೆ 15 ಪುಟಗಳ ವರದಿಯಲ್ಲಿ ಬಹಿರಂಗಪಡಿಸಿದೆ. ಪೈಲ್‌ಗಳ ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ ಡೇಟಾವನ್ನು ಉಲ್ಲೇಖಿಸಲಾಗಿದೆ.ವಿಮಾನವು ವಾಯು ಪ್ರದೇಶಕ್ಕೆ ತಲುಪಿದ ಕೆಲ ಸೆಕೆಂಡುಗಳಲ್ಲಿ ಇಂಜಿನ್ ಸ್ಥಗಿತಗೊAಡಿರುವುದು ದೃಢಪಟ್ಟಿದೆ. ಕೆಲವು ಸೆಕೆಂಡುಗಳಿಗೆ ಮುನ್ನ ನಡೆದ ಸಂಭಾಷಣೆಯು ಒಂದು ಭಾಗದಲ್ಲಿ ಇದು ಇಳಿದಿದೆ. ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿತ್ತು. ಆದರೆ, ಇಂಜಿನ್‌ಗಳು ಆಪ್ ಆಗಿದ್ದವು. ಈ ಕಾರಣದಿಂದಲೇ ವಿಮಾನ ಏರಲು ಸಾಧ್ಯವಾಗಲಿಲ್ಲ ಎಂದು ತನಿಖಾ ತಂಡ ವರದಿಯಲ್ಲಿ ಉಲ್ಲೇಖಿಸಿದೆ.
ಟೇಕಾಫ್ ಆದ 3 ಸೆಕೆಂಡುಗಳ ಬಳಿಕ 2 ಇಂಜಿನ್‌ಗಳ ಇಂಧನ ಕಂಟ್ರೋಲ್ ಸ್ವಿಚ್‌ಗಳು ರನ್ ವೇಯಿಂದ ಕಟ್ ಆಪ್‌ಗೆ ಬದಲಾಗಿವೆ.ಇದರಿಂದಾಗಿ ಥ್ರಸ್ಟ್ ಏಕಾಏಕಿ ಕಡಿಮೆಯಾಯಿತು. ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕವಾಗಿ ಸ್ವಿಚ್ ಆಫ್ ಆಗಿರಬಹುದು ಎಂದು ತನಿಖಾ ತಂಡ ಶಂಕೆ ವ್ಯಕ್ತಪಡಿಸಿದೆ.
ವಿಮಾನದ ಡೇಟಾ ರೆಕಾರ್ಡರ್ ಪ್ರಕಾರ ಇಂಜಿನ್ ಒಂದನ್ನು ಸ್ವಯಂಚಾಲಿತವಾಗಿ ಮರು ಪ್ರಾರಂಭಿಸಲು ಪ್ರಯತ್ನಿಸಿ ಅದು ಯಶಸ್ವಿಯಾಗಿದೆ. ಆದರೆ, ಇಂಜಿನ್ 2 ನ್ನು ಪುನಾರಂಭಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ರಾಮ್‌ಏರ್ ಟರ್ಬೈನ್‌ನ್ನು ತುರ್ತು ವಿದ್ಯುತ್ ಮೂಲವಾಗಿ ಬಳಸಲಾಗಿತ್ತು. ಇದು ಟೇಕಾಫ್ ಆದ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭವಾಗಿದೆ. ಇದರಿAದಾಗಿ ಅಗತ್ಯ ಸಿಸ್ಟಂಗಳಿಗೆ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ಎಂದು ವರದಿ ತಿಳಿಸಿದೆ. ಜೂ. 12 ರಂದು ಈ ದುರಂತದಲ್ಲಿ ಏರ್ ಇಂಡಿಯಾ ವಿಮಾನ ಸಿಬ್ಬಂದಿ ಪ್ರಯಾಣಿಕರು ಮತ್ತು ವಿಮಾನ ಬಿದ್ದ ಎಂಬಿಬಿಎಸ್ ಹಾಸ್ಟೆಲ್ ಕಟ್ಟಡದಲ್ಲಿರುವವರೂ ಸೇರಿದಂತೆ 270 ಮಂದಿ ಸಾವನ್ನಪ್ಪಿದ್ದರು. ವಿಮಾನ ಟೇಕಾಫ್ ಕೆಲವೇ ಕ್ಷಣಗಳಲ್ಲಿ ಏರ್‌ಇಂಡಿಯಾ-171 ವಿಮಾನವು ಅಹಮದಾಬಾದ್‌ನ ಮೇಘನಿ ನಗರದ ವೈದ್ಯಕೀಯ ಕಾಲೇಜಿನ ಸಂಕಿರಣದ ಮೇಲೆ ಅಪ್ಪಳಿಸಿತ್ತು. ಈ ಘೋರ ದುರಂತದಲ್ಲಿ ಬ್ರಿಟನ್ ಪ್ರಜೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಆತುರದ ತೀರ್ಮಾನ ಬೇಡ : ವಿಮಾನಯಾನ ಸಚಿವ ನಾಯ್ಡು
ಕಳೆದ ತಿಂಗಳು ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ ನೀಡಿದ ವರದಿ ಪ್ರಾಥಮಿಕ ಸಂಶೋಧನೆಗಳನ್ನು ಆಧರಿಸಿದೆ ಮತ್ತು ಅಂತಿಮ ವರದಿ ಬಿಡುಗಡೆಯಾಗುವವರೆಗೆ ಯಾರೂ ತೀರ್ಮಾನಗಳಿಗೆ ಬರಬಾರದು ಎಂದು ಹೇಳಿದ್ದಾರೆ ಏರ್ ಇಂಡಿಯಾ ಅಪಘಾತ ಪ್ರಾಥಮಿಕ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು “ನಾವು ಪೈಲಟ್‌ಗಳ ಕಲ್ಯಾಣ ಮತ್ತು ಯೋಗಕ್ಷೇಮದ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಆದ್ದರಿಂದ ಈ ಹಂತದಲ್ಲಿ ಯಾವುದೇ ತೀರ್ಮಾನಗಳಿಗೆ ಬರಬೇಡಿ ಅಂತಿಮ ವರದಿಗಾಗಿ ಕಾಯೋಣ” ಎಂದು ಅವರು ಹೇಳಿದ್ದಾರೆ ವಿಮಾನ ಅಪಘಾತದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಬಾರದು. ವಿಶ್ವದಲ್ಲೇ ಅತ್ಯಂತ ಅದ್ಭುತವಾದ ಪೈಲಟ್‌ಗಳು ಮತ್ತು ಸಿಬ್ಬಂದಿ ನಮ್ಮಲ್ಲಿದ್ದಾರೆ ಎಂದು ತಿಳಿಸಿದ್ದಾರೆ.