ಮಂಗಳೂರು : ಬಿರುವೆರ್ ಕುಡ್ಲ ಇದೀಗ ಅಶಕ್ತರ ಪಾಲಿನ ಬೆಳಕಾಗಿ ಭರವಸೆ ಮೂಡಿಸಿದ ಸಂಘಟನೆಯಾಗಿ ಬೆಳೆದಿದ್ದು ನಿಂತಿದೆ ಎಂದು ಚಿತ್ರನಟ ರೂಪೇಶ್ ಶೆಟ್ಟಿ ಬಿರುವೆರ್ ಕುಡ್ಲದ ಯುವಕರ ಸಾಧ ನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.




ಬಳ್ಳಾಲ್‍ಬಾಗ್ ಶ್ರೀ ಭ ಗವತಿ ದೇವಸ್ಥಾನದಲ್ಲಿ ಶನಿವಾರ ಬಿರುವೆರ್ ಕುಡ್ಲ -ಕಾರುಣ್ಯಸೇತು ಫೌಂಡೇಷನ್‍ನಿಂದ ಅಶಕ್ತ ಕುಟುಂಬಗಳಿಗೆ ಚಿಕಿತ್ಸೆಗಾಗಿ ಆಯೋಜಿಸಲಾದ ಸ್ಪಂದನಾ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉದಯಪೂಜಾರಿ ಬಳ್ಳಾಲ್‍ಬಾಗ್ ನೇತೃತ್ವದ ಸ್ನೇಹಿತರ ಬಳಗವು ಬಿರುವೆರ್ ಕುಡ್ಲ ಸಂಸ್ಥೆಯ ಸಮಾಜದಲ್ಲಿ ಶಕ್ತಿಯುತವಾಗಿ ಬೆಳೆದು ಆಶಕ್ತರಿಗೆ ಬಲತುಂಬುವ ಕೆಲಸ ಮಾಡುತ್ತಿದೆ ಇದೊಂದು ಸಮಾಜಕ್ಕೆ ದೊಡ್ಡ ಸೇವೆ.ಈ ತಂಡಕ್ಕೆ ಹೆಚ್ಚಿನ ಶಕ್ತಿಯನ್ನು ಜನರೂ ತುಂಬಬೇಕು ಎಂದರು. ಇದರೊಂದಿಗೆ ಸ್ವಸ್ಥಿಕ್ ಆರ್ಯ ಅವರು ಕಾರುಣ್ಯ ಸೇತು ಫೌಂಡೇಷನ್ ಮೂಲಕ ಜತೆಗೂಡಿ ಇದೀಗ ಬಡವರ್ಗದ ನೆರವಿಗೆ `ಧಾ ವಿಸಿರುವುದು ಶ್ಲಾಘನೀಯ ಎಂದರು.
ಬಿಲ್ಲವ ಮುಂದಾಳು ಪದ್ಮರಾಜ್ ಅವರು ಮಾತನಾಡಿ, ಯುವ ಶಕ್ತಿಗಳು ಉತ್ತಮ ಸಮಾಜಕ್ಕಾಗಿ ಕೈಜೋಡಿಸಿದಾಗ ಎಂತಹ ಕೆಲಸವನ್ನಾದರೂ ಮಾಡಿತೋರಿಸಬಹುದು ಎಂಬುದಕ್ಕೆ ಉದಯಪೂಜಾರಿ ನೇತೃತ್ವದ ಬಿರುವೆರ್ ಕುಡ್ಲ ಉದಾಹರಣೆಯಾಗಿದೆ. ಇದರೊಂದಿಗೆ ಸ್ವಸ್ಥಿಕ್ ಆರ್ಯ ಅವರು ಕೈಜೋಡಿಸಿದ್ದು ಮುಂದಿನ ದಿನಗಳಲ್ಲಿ ಈ ಎರಡೂ ಸಂಘಟನೆಗಳು ಆಶಕ್ತರ ಕಣ್ಣೀರು ಒರೆಸುವ ಕೆಲಸ ಮಾಡಲು ಬ್ರಹ್ಮಶ್ರೀ ನಾರಾಯಣಗುರುಗಳು ಶಕ್ತಿ ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ಕುದ್ರೋಳಿ ಕ್ಷೇತ್ರದ ಮಾಜಿ ಅÀ್ಯಕ್ಷ ಸಾಯಿರಾಮ್, ನಮ್ಮಟಿವಿ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ, ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕಾ
À್ಯಕ್ಷ ಉದಯ ಪೂಜಾರಿ ಬಳ್ಳಾಲ್ ಬಾಗ್, ಕಾರುಣ್ಯ ಫೌಂಡೇಷನ್‍ನ ಸ್ವಸ್ಥಿಕ್ ಆರ್ಯ, ಬಿರುವೆರ್ ಕುಡ್ಲ ಅಧ್ಯಕ್ಷರು ರಾಕೇಶ್ ಪೂಜಾರಿ ಬಳ್ಳಾಲ್ಗ್ ಬಾಗ್, ಪ್ರಮೋದ್ ಬಳ್ಳಾಲ್‍ಬಾಗ್,ಲತೀಶ್ ಪೂಜಾರಿ,ಪ್ರವೀಣ್ ಬಗಂಬಿಲ,ಲೋಹಿತ್ ಗಟ್ಟಿ,ರಾಮ್ ಎಕ್ಕೂರು,ಧನ್‍ರಾಜ್ ಪೂಜಾರಿ,ರಾಕೇಶ್ ಚಿಲಿಂಬಿ,ಅಶ್ವಿಥ್ ಚಿಲಿಂಬಿ,ದಿನಿಲ್ ಬಳ್ಳಾಲ್‍ಬಾಗ್, ಮಹೇಶ್ ಅಶೋಕ್‍ನಗರ,ಗಣೇಶ್ ಚಿಲಿಂಬಿ,ಗಿರೀಶ್ ಬತ್ತೇರಿ,ಗೌತಮ್ ಬತ್ತೇರಿ,ಕಿರಣ್ ಬಂಟ್ವಾಳ್, ಕಿಶೋರ್‍ಬಾಬು, ಪ್ರವೀಣ್ ಜೆಪ್ಪು,ರಾಜೇಶ್ ಉರ್ವ,ವಾಝಿ ಪದವಿನಂಗಡಿ, ರಾಜೇಶ್ ಬಳ್ಳಾಲ್ ಬಾಗ್,ಗೌರವ್ ಕದಿ,ರೋಶನ್ ಬಳ್ಳಾಲ್‍ಬಾಗ್,ಸತೀಶ್ ಬಳ್ಳಾಲ್‍ಬಾಗ್,ರೋಹಿದಾಸ್,ಪ್ರವೀಣ್ ಅವಿನಾಶ್,ಪ್ರಕಾಶ್,ಶಿವಾನಂದ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.