ರಿಯೋ ಡಿ ಜನೈರೋ : ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಬ್ರಿಕ್ಸ್ ಒಕ್ಕೂಟದ ಅಮೆರಿಕ ವಿರೋಧಿ ನೀತಿಗಳಿಗೆ ಹೊಂದಿಕೊಳ್ಳುವ ಯಾವುದೇ ದೇಶ ಮೇಲೆ ಶೇ,೧೦ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಜಗತ್ತಿನಲ್ಲಿ ಸಂಘರ್ಷ ಹಾಗೂ ವ್ಯಾಪಾರ ಯುದ್ಧ ಮುಂದುವರಿದಿ ರುವ ಮಧ್ಯೆ ಅಮೆರಿಕ ಮೊದಲು ನೀತಿಯಿಂದ ತೊಂದರೆಗೊಳಗಾಗಿರುವ ಜಿ-20
ಹಾಗೂ ಜಿ-7 ರಂತಹ ಅಂತಾರಾಷ್ಟ್ರೀಯ ಗುಂಪುಗಳು ಬಹುರಾಷ್ಟ್ರೀಯ ರಾಜತಾಂತ್ರಿಕತೆಗೆ ಮುಂದಾಗಿವೆ
ಬ್ರೆಜಿಲ್‌ನ ರಿಯೊ ಡಿಜನೈರೋ ನಗರದಲ್ಲಿ ಭಾನುವಾರ ಆರಂಭವಾದ ಜಿ-7 ಶೃಂಗಸಭೆಯಲ್ಲಿ ತೆರಿಗೆ ಹೆಚ್ಚಳವು ಜಾಗತಿಕ ವ್ಯಾಪಾರಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ ಎನ್ನುವ ಮೂಲಕ ಟ್ರಂಪ್ ಅವರ ತೆರಿಗೆ ನೀತಿಯನ್ನು ತೀವ್ರ ಟೀಕೆ ಮಾಡಲಾಗಿದೆ. ಇದರಿಂದ ವ್ಯಗ್ರರಾದ ಟ್ರಂಪ್ ಅವರು, ಜಿ-7 ಗುಂಪು ಸೇರುವವರನ್ನು ದಂಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬ್ರಿಕ್ಸ್ನ ಅಮೆರಿಕ ನೀತಿ ವಿರೋಧಿಸುವ ನೀತಿಗೆ ಹೊಂದಿಕೊಳ್ಳುವ ಯಾವುದೇ ದೇಶವನ್ನು ಶೇ.1೦ ಹೆಚ್ಚುವರಿ ಸುಂಕದೊAದಿಗೆ ದAಡಿಸಲಾಗುತ್ತದೆ. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಈ ವಿಷಯದಲ್ಲಿ ಗಮನ ಹರಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ರಂಪ್ ತಮ್ಮ ಟ್ರುತ್ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಅವರು ಅಮೆರಿಕ ವಿರೋಧಿ ನೀತಿಯ ಉಲ್ಲೇಖ ಕುರಿತು ಸ್ಪಷ್ಟನೆಯಾಗಲಿ ಅಥವಾ ವಿವರಣೆ ನೀಡಿಲ್ಲ. ೨೦೦೯ರಲ್ಲಿ ಬ್ರೆಜಿಲ್, ಭಾರತ, ಚೀನಾ ರಷ್ಯಾ ದೇಶಗಳು ಬ್ರಿಕ್ಸ್ ಗುಂಪು ರಚಿಸಿದ ನಂತರ ಅದಕ್ಕೆ ದಕ್ಷಿಣ ಆಫ್ರಿಕಾ ಸೇರಿತ್ತು.