Sunday, July 13, 2025
Flats for sale
Homeದೇಶನವದೆಹಲಿ : ಚಂದ್ರಚೂಡ್ ಮನೆ ಖಾಲಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪತ್ರ..!

ನವದೆಹಲಿ : ಚಂದ್ರಚೂಡ್ ಮನೆ ಖಾಲಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪತ್ರ..!

ನವದೆಹಲಿ : ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಡಿ.ವೈ.ಚಂದ್ರಚೂಡ್ ಅವರ ಅಧಿಕಾರಾವಧಿ ಮುಗಿದ ನಂತರವೂ ಅಧಿಕೃತ ನಿವಾಸದಲ್ಲೇ ವಾಸ ಮುಂದುವರಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಆಡಳಿತವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅವರನ್ನು ಅಧಿಕೃತ ನಿವಾಸದಿಂದ ಖಾಲಿ ಮಾಡಿಸುವಂತೆ ಒತ್ತಾಯಿಸಿದೆ.

ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗ್ಲೆ ಸಂಖ್ಯೆ ೫ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ವಾಸಕ್ಕಿರುವ ಅಧಿಕೃತ ನಿವಾಸ. ಆದರೆ ಚಂದ್ರಚೂಡ್ ಅವರ ಸಿಜೆಐ ಅಧಿಕಾರ 2024ರ ಡಿಸೆಂಬರ್ 18 ರಂದು ಅAತ್ಯಗೊAಡಿತ್ತು. ಆದಾಗ್ಯೂ ನಿವೃತ್ತಿ ನಂತರ ಅಧಿಕೃತ ನಿವಾಸದಲ್ಲಿ 2025ರ ಏಪ್ರಿಲ್ 30 ರವರೆಗೆ ವಾಸ್ತವ್ಯ ಮುಂದುವರಿಸಲು ಅವಕಾಶ ಕೋರಿದ್ದರು. ಚಂದ್ರಚೂಡ್ ಅವರು ನಿವೃತ್ತರಾದ ಬಳಿಕ ಸರ್ಕಾರದಿಂದ ಮಂಜೂರಾಗಿರುವ ತುಘಲಕ್ ರಸ್ತೆಯಲ್ಲಿರುವ ಬಂಗ್ಲೆ ಸಂಖ್ಯೆ 14ಕ್ಕೆ ತೆರಳಬೇಕಿತ್ತು. ಆದರೆ ಆ ಬಂಗ್ಲೆಯಲ್ಲಿ ಮಾಲಿನ್ಯ ಸಂಬAಧಿತ ನಿರ್ಮಾಣಕ್ಕೆ ಸಂಬಂದಿಸಿದ ನಿರ್ಬಂಧದಿಂದಾಗಿ ನವೀಕರಣ ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ ಅಧಿಕೃತ ನಿವಾಸದಲ್ಲಿ ವಾಸ್ತವ್ಯ ಮುಂದುವರಿಸಲು ಅವರು ಅವಕಾಶ ಕೋರಿದ್ದರು. ನಿಯಮಾವಳಿಯನುಸಾರ ಕೃಷ್ಣ ಮೆನನ್ ಬಂಗ್ಲೆಯಲ್ಲಿ ಅವರು 6 ತಿಂಗಳಕಾಲ ವಾಸ ಮುಂದುವರಿಸಬಹುದು. ಆರು ತಿಂಗಳ ವಿಸ್ತರಿತ ಅವಧಿ ಕಳೆದ ಮೇ ೧೦ರಂದು ಅಂತ್ಯಗೊAಡಿದ್ದರೂ ಅವರು ಅಲ್ಲೇ ವಾಸ ಮುಂದುವರಿಸಿದ್ದಾರೆ.

ಆದ ಕಾರಣ ಸುಪ್ರೀಂಕೋರ್ಟ್ನ ಅಧಿಕಾರಿಯೊಬ್ಬರು ಕೇಂದ್ರ ವಸತಿ ಮತ್ತು ನಗರಾಡಳಿತ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಅವರನ್ನು ಆ
ನಿವಾಸದಿಂದ ಖಾಲಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಚಂದ್ರಚೂಡ್ ನಿವೃತ್ತರಾದ ನಂತರ ಸಿಜೆಐ ಆಗಿ ಸಂಜೀವ್ ಖನ್ನಾ ಮತ್ತ ಭೂಷಣ್ ಆರ್ ಗವಾಯಿ ಅಧಿಕಾರ ವಹಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular