Monday, July 7, 2025
Flats for sale
Homeಜಿಲ್ಲೆಮಂಗಳೂರು : ಸ್ಮಾರ್ಟ್ ಅಂಗನವಾಡಿಯಾಗಿ ಬಿಜೈ ಕೇಂದ್ರ : ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್...

ಮಂಗಳೂರು : ಸ್ಮಾರ್ಟ್ ಅಂಗನವಾಡಿಯಾಗಿ ಬಿಜೈ ಕೇಂದ್ರ : ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಅರುಣ್‌ಪ್ರಭ ಕೆ.ಎಸ್.!

ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯ ಪ್ರದೇಶ ಆಧಾರಿತ ಅಭಿವೃದ್ಧಿಯಡಿ ನಗರದ ಎಂಟು ವಾರ್ಡ್‌ಗಳ 54 ಶಾಲೆಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಜೈ ಅಂಗನವಾಡಿ ಕೇಂದ್ರವನ್ನು ಸ್ಮಾರ್ಟ್ ಅಂಗನವಾಡಿಯಾಗಿ ಅಭಿವೃದ್ದಿ ಪಡಿಸಲು ಸಹಕರಿಸುವುದಾಗಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಜನರಲ್ ಮ್ಯಾನೇಜರ್ ಅರುಣ್‌ಪ್ರಭ ಕೆ.ಎಸ್.ಹೇಳಿದರು.

ಬಿಜೈ ಅಂಗನವಾಡಿ ಕೇಂದ್ರಕ್ಕೆ ವೈಯಕ್ತಿಕ ನೆಲೆಯಲ್ಲಿ ಎರಡು ಆಹಾರ ಸುರಕ್ಷತಾ ಬಾಕ್ಸ್ ಹಸ್ತಾಂತರಿಸಿ ಮಾತನಾಡಿದ ಅವರು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹಾಗೂ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೆರವಿನಿಂದ ಬಿಜೈ ಅಂಗನವಾಡಿ ಕೇಂದ್ರ ಉತ್ತಮ ಅಭಿವೃದ್ಧಿ ಕಂಡಿದೆ. ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾದರಿ ಅಂಗನವಾಡಿ ಕೇಂದ್ರವಾಗಿ ರೂಪಿಸಲಾಗುವುದು ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಪಿಕಾಡ್ -ಬಿಜೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಸಹಕರಿಸುವಂತೆ ಶಾಲೆಯ ಮುಖ್ಯ ಶಿಕ್ಷಕಿ ಲೀನಾ ಐರಿನ್ ಗೋವಿಯಸ್ ಈ ಸಂದರ್ಭ ವಿನಂತಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಬಿಜೈ ಅಂಗನವಾಡಿ ಕೇಂದ್ರದ ಶಿಕ್ಷಕಿ ನಂದಾ, ಬಿಜೈ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿಸಿಲಿಯ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular