Wednesday, October 22, 2025
Flats for sale
Homeರಾಜ್ಯಬೆಂಗಳೂರು : ಹಠಾತ್ ಹೃದಯಘಾತಕ್ಕೆ ಕೊರೊನಾ ಸೋಂಕು ಕಾರಣ,ಕೊರೊನಾ ಲಸಿಕೆ ಕಾರಣವಲ್ಲ : ತಜ್ಞರ ವರದಿಯಲ್ಲಿ...

ಬೆಂಗಳೂರು : ಹಠಾತ್ ಹೃದಯಘಾತಕ್ಕೆ ಕೊರೊನಾ ಸೋಂಕು ಕಾರಣ,ಕೊರೊನಾ ಲಸಿಕೆ ಕಾರಣವಲ್ಲ : ತಜ್ಞರ ವರದಿಯಲ್ಲಿ ಬಹಿರಂಗ ..!

ಬೆಂಗಳೂರು : ಹೃದಯಘಾತಕ್ಕೆ ಕರೋನಾ ಲಸಿಕೆ ಕಾರಣವಲ್ಲ. ಆದರೆ, ಕರೋನಾ ವೈರಸ್ ಕೊಂಚ ಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ ಎಂದು ವರದಿಯಲ್ಲಿದೆ ತಿಳಿದುಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಠಾತ್ ಹೃದಯಾಘಾತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈ ಕುರಿತು ತಜ್ಞರು ನಡೆಸಿರುವ ವಾಸ್ತವಿಕ ಕಾರಣಗಳ ಅಧ್ಯಯನ ವರದಿ ಶನಿವಾರ(ಜು.5) ಸಲ್ಲಿಕೆಯಾಗುವ ಸಾಧ್ಯತೆ ಇದೆ. ಕರೋನಾ ರೋಗದಿಂದ ಗುಣಮುಖರಾದವರಿಗೆ ಕೊಂಚ ಹೃದಯ ಸಮಸ್ಯೆ ಕಾಡುತ್ತಿದೆ ಎಂದು ತಜ್ಞರು ವರದಿಯಲ್ಲಿ ತಿಳಿದಿದ್ದಾರೆಂದು ಮಾಹಿತಿ ದೊರೆತಿದೆ.

ಹಠಾತ್ ಹೃದಯಾಘಾತ ಬಹುತೇಕ ಕೋವಿಡ್ ಸೋಂಕು ತಗಲಿದ್ದವರಲ್ಲಿಯೇ ಕಂಡು ಬಂದಿದೆ ಎನ್ನಲಾಗಿದೆ. ಆದರೆ ಕೋವಿಡ್ ಲಸಿಕೆ ಇದಕ್ಕೆ ಕಾರಣವಲ್ಲ ಎನ್ನುವ ಪ್ರಮುಖಾಂಶವೂ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರ ನೇತೃತ್ವದಲ್ಲಿ ರಚಿಸಲಾಗಿದ್ದ 12 ಮಂದಿ ತಜ್ಞರ ಸಮಿತಿ ಕೋವಿಡ್ ಲಸಿಕೆ ತೆಗೆದುಕೊಂಡವರ 250 ಮಂದಿ ಮೇಲೆ ಅಧ್ಯಯನ ನಡೆಸಿದೆ. ಈ ವೇಳೆ ಲಸಿಕೆಗೆ ಬದಲಾಗಿ ಯಾರಲ್ಲಿ ಕೋವಿಡ್ ಸೋಂಕಿನಿAದ ಬಳಲಿದ್ದರೋ ಅಂತಹವರಲ್ಲಿಯೇ ಅತಿಹೆಚ್ಚು ಪ್ರಮಾಣದಲ್ಲಿ ಹಠಾತ್ ಹೃದಯಾಘಾತ ಸಂಭವಿಸುತ್ತದೆ ಎನ್ನುವ ಅಂಶ ಬಯಲಾಗಿದೆ ಎಂದು ತಿಳಿದುಬAದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ತಜ್ಞರ ತಂಡ ಕೈಗೊಂಡಿದ್ದ ಅಧ್ಯಯನ ಮುಗಿದಿದ್ದು, ಸರ್ಕಾರಕ್ಕೆ ಇಂದೇ ವರದಿ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ

ವರದಿಯಲ್ಲಿ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆಯೂ ಉಲ್ಲೇಖ ಮಾಡಲು ತಜ್ಞರು ಮುಂದಾಗಿದ್ದಾರೆ. ಕರೋನಾ ಬಂದು ಹೋದ ಮೂರು ವರ್ಷದ ಬಳಿಕ ಹೃದಯ ಸಮಸ್ಯೆ ಕಂಡು ಬರುತ್ತಿದೆ. ಅಲ್ಲದೆ, ಕರೋನಾ ರೋಗದಿಂದ ಗುಣಮುಖರಾದವರಿಗೆ ನಿದ್ರಾಹೀನತೆ, ಸುಸ್ತು, ಉಸಿರಾಟದ ಸಮಸ್ಯೆ ಅತಿಯಾದ ಬೊಜ್ಜು ಕಂಡು ಬರುತ್ತಿದ್ದು, ತಜ್ಞರು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಲು ಮುಂದಾಗಿದ್ದಾರೆ.

ತಜ್ಞರ ಸಲಹೆಗಳೇನು?

ಸಕ್ಕರೆ ಹಾಗು ಉಪ್ಪಿನ ಪ್ರಮಾಣ ಕಡಿಮೆ ಮಾಡಬೇಕು
ಕನಿಷ್ಠ 6 ಗಂಟೆ ನಿದ್ದೆ ಮಾಡಬೇಕು
ಮಕ್ಕಳ ಸ್ಕ್ರೀನಿಂಗ್ ಟೈಮ್ ಕಡಿಮೆ ಮಾಡಬೇಕು
ರಾಜ್ಯದಲ್ಲಿ ಆಗುವ ಪ್ರತಿ ಯುವಕರ ಹಠಾತ್ ಸಾವು ರಿಜಿಸ್ಟರ್ ಆಗಬೇಕು

ಹೃದಯಘಾತದ ಮರಣತ್ತೋರ ಪರೀಕ್ಷೆ ಆಗಬೇಕು
ಒತ್ತಡ ಕಡಿಮೆ ಮಾಡಬೇಕು
ದೈಹಿಕ ಚಟ್ಟುವಟಿಕೆಗಳನ್ನು ಹೆಚ್ಚಿಸಬೇಕು
ಧೂಮಪಾನ ಕಡ್ಡಾಯವಾಗಿ ಬ್ಯಾನ್ ಮಾಡಬೇಕು
18 ವರ್ಷ ಒಳಗಿನವರಿಗೆ ಧೂಮಪಾನ ಮತ್ತು ಮದ್ಯಪಾನ ಮಾರಟಕ್ಕೆ ಕಡಿವಾಣ ಹಾಕಬೇಕು.
ಅಪಾಯಕಾರಿ ಪೇನ್​ ಕ್ಲಿಲ್ಲರ್ ಔಷಧಿಗೆ ಕಡಿವಾಣ ಹಾಕಬೇಕು.
CPR ತರಬೇತಿ ನೀಡುವ ಯೋಜನೆ ಜಾರಿ ಹಾಗೂ ಜಾಗೃತಿ ಮೂಡಿಸಬೇಕು
ಸ್ಟೆಮಿ ಯೋಜನೆಯನ್ನು ಎಲ್ಲ ತಾಲೂಕುಗಳಿಗೆ ವಿಸ್ತರಣೆ ಮಾಡಬೇಕು.
ECG, TMT, ECHO, Lipid Profile ಚಿಕಿತ್ಸಾ ಸೌಲಭ್ಯ
ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ CT Angiogram ಟೆಸ್ಟ್ ವ್ಯವಸ್ಥೆ
ಸಾರ್ವಜನಿಕ ಪ್ರದೇಶಗಳಲ್ಲಿ ಹೃದಯಘಾತದ ಬಗ್ಗೆ ಜಾಗೃತಿ ಮೂಡಿಸುವುದು


ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಇಂದು ಹೃದಯಘಾತದ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹೃದಯಾಘಾತದ ಬಗ್ಗೆ ಸಿದ್ದವಾಗಿರುವ ವರದಿಯ ಬಗ್ಗೆ ತಾಂತ್ರಿಕ ಸಮಿತಿ ಸದಸ್ಯರು ಚರ್ಚಿಸಿದರು. ಅಂತಿಮ ವರದಿಯಲ್ಲಿನ ಸಾಧಕ-ಬಾಧಕಗಳ ಕುರಿತು ಚರ್ಚಿಸಲಾಯಿತು. ತಜ್ಞರು ವರದಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಯಾರೆಲ್ಲ ಕೋವಿಡ್ ಸೋಂಕಿಗೆ ತುತ್ತಾಗಿದ್ದವರಲ್ಲಿಯೇ ಹೃದಯ ಸಮಸ್ಯೆ ಹೆಚ್ಚಾಗಿ ಕಂಡು ಬಂದಿರುವುದನ್ನು ತಜ್ಞರ ಅಧ್ಯಯನ ವರದಿ ಉಲ್ಲೇಖಿಸಿದೆ. ಕೊವಿಡ್ ಬಂದು ಹೋದವರಲ್ಲಿ ಹೃದಯದ ಕಾರ್ಯಕ್ಷಮತೆ ಕ್ಷೀಣಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಜೊತೆಗೆ ನಿದ್ರಾಹೀನತೆ, ಆಯಾಸ, ಹೆಚ್ಚುವರಿ ಕೊಬ್ಬು ಸಂಗ್ರಹವಾಗುತ್ತಿರುವುದು ಗೊತ್ತಾಗಿದೆ. ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಅತಿಯಾಗಿ ಬಳಸದಂತೆ ಎಚ್ಚರಿಸಲಾಗಿದೆ.

ಶಾಲಾಮಟ್ಟದಲ್ಲೇ ಎಚ್ಚರ ಅಗತ್ಯ: ಪ್ರೌಢಶಾಲಾ ಹಂತದಲ್ಲಿ ಕಡ್ಡಾಯವಾಗಿ ಮಕ್ಕಳ ಹೃದಯ ತಪಾಸಣೆಗೆ ತಜ್ಞರು ಗಂಭೀರ ಸಲಹೆ ನೀಡಿದ್ದಾರೆ. ಪ್ರಮುಖವಾಗಿ ಮಕ್ಕಳ ಹೃದಯ ಬಡಿತ ಪರೀಕ್ಷಿಸಬೇಕು. ರಕ್ತದೊತ್ತಡ(ಬಿಪಿ) ಪತ್ತೆ ಹಚ್ಚಬೇಕು. ಹೃದಯದ ಗಂಭೀರ ಸಮಸ್ಯೆ ಅರಿಯಬೇಕು. ಮಕ್ಕಳಿಗೆ ಶಾಲೆಗಳಲ್ಲಿ ಸ್ಕಿçÃನಿಂಗ್ ಮಾಡಿಸುವುದು ಉತ್ತಮ ಎಂಬ ಸಲಹೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular