ಕಡಬ : ಸುಳ್ಯ ತಾಲೂಕಿನಾದ್ಯಂತಾ ಬಾರೀ ಮಳೆಯಿಂದಾಗಿ ಉದನೆ-ಕಲ್ಲುಗುಡ್ಡೆ ಸಮೀಪ ಬೃಹತ್ ಮರ ರಸ್ತೆಗೆ ಬಿದ್ದಹಿನ್ನೆಲೆ ರಸ್ತೆ ಬ್ಲಾಕ್ ಆಗಿ ಸಂಚಾರ ಅಸ್ಥವ್ಯಸ್ಥಗೊಂಡಿದೆ.

ಹಲವೆಡೆ ಚರಂಡಿಗಳು ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ನೆಲ್ಯಾಡಿ ಮಣ್ಣಗುಂಡಿ ಎಂಬಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ.
ಸುಳ್ಯದ ಪೆರಾಜೆ, ಅರಂತೋಡು ತೊಡಿಕಾನ, ಚೆಂಬು ಕಡೆಗಳಲ್ಲಿ ಗಾಳಿ ಬೀಸಿ ಹಲೆವೆಡೆ ಹಾನಿಯಾಗಿದ್ದು ಶೀರಾಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಮಾಹಿತಿಪ್ರಕಾರ ಲಾರಿ ಚಾಲಕನಿಗೆ ಗಾಯಗಳಿದ್ದು ಆಸ್ಪತ್ರೆಗೆ ದಾಖಲಿಸಿದ್ದರೆಂದು ತಿಳಿಸಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಗುಡ್ಡ ಕುಸಿದಿದ್ದು ಹೆದ್ದಾರಿಯಲ್ಲಿ ಮಣ್ಣು ಹಾಗೂ ಮರಗಳಿಂದ ಮುಚ್ಚಿಹೋಗಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಅಗಲೀಕರಣಕ್ಕಾಗಿ ಗುಡ್ಡದ ಕೆಳಭಾಗದಲ್ಲಿ ಅಗೆಯಲಾಗಿದೆ. ಮಳೆಯ ಹಿನ್ನೆಲೆಯಲ್ಲಿ ಮಣ್ಣು ಸಡಿಲಗೊಂಡು ಗುಡ್ಡ ಕುಸಿದು ಬಿದ್ದಿದೆ. ಈ ಭಾಗದಲ್ಲಿ ಇಂತಹ ಗುಡ್ಡ ಕುಸಿತಗಳು ನಡೆಯುತ್ತಿದ್ದರೂ,ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.


