ಕಲಬುರಗಿ : ಆಳಂದ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಅಬ್ದುಲ್ ಆಜಾದ್ ವಸತಿ ಶಾಲೆ ಕಟ್ಟಡ ಕಾಮಗಾರಿಗೆ ತಮ್ಮ ಗಮನಕ್ಕೆ ತಾರದೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಿಂದ 17 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಆಳಂದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಮತ್ತೊಂದು ಸ್ಫೋಟಕ ಮಾಹಿತಿ ಹೊರಗೆಡವಿದ್ದಾರೆ. ಗುದ್ದಲಿ ಪೂಜೆಗೆ ನನಗೆ ಕರೆದಿಲ್ಲ, ಇಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ಆದಾಗ್ಯೂ ಕಾಮಗಾರಿ ಶುರು ಮಾಡಲಾಗಿದೆ‘ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿಆರ್‌ಪಿ ಆರೋಪಕ್ಕೆ ಪೂರಕವಾಗಿ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಜೀವ್ ಗಾಂಧಿ ವಸತಿ ಅಭಿವೃದ್ಧಿ ನಿಗಮದ ವಸತಿ ಯೋಜನೆಯ ಸಂಬAಧಿತ ಶಾಸಕ ಬಿ ಆರ್ ಪಾಟೀಲ್ ಸಿಡಿಸಿದ ಆಡಿಯೋ ಬಾಂಬ್‌ಗೆ ಪೂರಕವಾಗಿ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಳಂದ ತಾಲೂಕಿನ ಧಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಟ್ಟರಕಿ ಗ್ರಾಮದಲ್ಲಿ ಜನೆವರಿ ೨೩ ರಂದು ಗ್ರಾಮ ಸಭೆ ನಡೆದ ವಿಡಿಯೋ ಲಭ್ಯವಾಗಿದ್ದು, ಆಳಂದ ಕ್ಷೇತ್ರದಲ್ಲೆ ಮನೆ ಹಂಚಿಕೆ ಸಂಬAಧ ನಡೆದ ಹಣಕಾಸಿನ ವ್ಯವಹಾರದ ವಿಡಿಯೋ ವೈರಲ್ ಆಗಿದೆ.
2131 ಕೋಟಿ ಹಗರಣ ಇದಾಗಿದ್ದು ವಸತಿ ಇಲಾಖೆಗೆ ಸಂಬAಧಿಸಿದAತೆ ಮನೆ ಗಳಿಗೆ ಕಮಿಷನ್ ಸಂಗ್ರಹ ಮಾಡಲು ಸಚಿವರಿಗೆ ಶೇ.೨೩ರಷ್ಟು, ಸರ್ಕಾರಿ ಕಚೇರಿಗೆ ಶೇ.3ರಷ್ಟು, ವರ್ಕ್ ಆರ್ಡರ್ ಪಡೆಯಲು ಶೇ.25ರಷ್ಟು, ಎನ್‌ಓಸಿ ಪಡೆ ಯಲು ಶೇ.೮ರಷ್ಟು ಕಮಿಷನ್ ಸೇರಿ ಒಟ್ಟು ಶೇ.26ರಷ್ಟು ಕಮಿಷನ್ ಅನ್ನು ಸರ್ಕಾರ ಪಡೆಯುತ್ತಿದೆ. ಒಟ್ಟು 2137.44 ಕೋಟಿ ಕಮಿಷನನ್ನು ಸಂಗ್ರಹಿಸಲಾಗಿದೆ ಎಂದು ಆರ್.ಅಶೋಕ್ ಆರೋಪಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಶಾಸಕ ಬಿ.ಆರ್. ಪಾಟೀಲ್‌ಗೆ ಸಚಿವರಾದ ಜಿ.ಪರಮೇಶ್ವರ್, ಶಿವಾನಂದ ಪಾಟೀಲ್ ಮತ್ತು ಬೋಸರಾಜ್ ಬೆಂಬಲ ನೀಡಿದ್ದಾರೆ. ಬಿ.ಆರ್. ಪಾಟೀಲರು ಏನು ನಡೆಯುತ್ತಿದೆ ಎಂಬುದನ್ನು ಪ್ರಸ್ತಾಪ ಮಾಡಿದ್ದಾರೆ. ನಿರ್ದಿಷ್ಟ ಪ್ರಕರಣವಿದ್ದರೆ ಪೊಲೀಸರಿಗೆ ದೂರು ನೀಡಿದರೆ, ತನಿಖೆ ಮಾಡಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಸತಿ ಯೋಜನೆಯ ಆಡಿಯೋ ವಿಚಾರ ಹಿನ್ನೆಲೆ ಆಳಂದ್ ಶಾಸಕ ಬಿ ಆರ್ ಪಾಟೀಲ್ ಗೆ ಸಿಎಂ ಬುಲಾವ್ ಕೊಟ್ಟಿದ್ದಾರೆ. ಬಿ ಆರ್ ಪಾಟೀಲ್ ಗೆ ಸಿಎಂ ಸಿದ್ದರಾಮಯ್ಯ ನಿಂದ ಕರೆ ಬಂದಿದ್ದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುತ್ತಿದ್ದಂತೆ ಕರೆ ಮಾಡಿ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಲು ಶಾಸಕ ಬಿ ಆರ್ ಪಾಟೀಲ್ ಮುಂದಾಗಿದ್ದು ಬೆಂಗಳೂರಿಗೆ ಬಂದು ಜೂನ್ 25ರಂದು ಸಾಯಂಕಾಲ ಭೇಟಿಯಾಗುವಂತೆ ಸಿಎಂ ತಿಳಿಸಿದ್ದಾರೆ. ಆಡಿಯೋ ಬಗ್ಗೆ ಸ್ಪಷ್ಟನೆ ನೀಡಲು ಬೆಂಗಳೂರಿಗೆ ಸಿಎಂ ಕರೆದಿದ್ದು ಸಿಎಂ,ಡಿಸಿಎಂ ಕರೆದರೆ ಹೋಗ್ತಿನಿ ಎಂದು ನಿನ್ನೆ ಹೇಳಿಕೆ ನೀಡಿದ ಬೆನ್ನಲ್ಲೇ ಕರೆ ಮಾಡಿ ಬೆಂಗಳೂರಿಗೆ ಬರಲು ಸಿಎಂ ಸೂಚಿಸಿದ್ದಾರೆ.


