ಅಹಮದಾಬಾದ್ : ಗುರುವಾರ, ಜೂನ್ 12 ರಂದು ಮಧ್ಯಾಹ್ನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್ನ ಮೇಘನಿ ನಗರದ ವಸತಿ ಪ್ರದೇಶಕ್ಕೆ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ AI 171 ರ ದುರದೃಷ್ಟಕರ ಘಟನೆಯಲ್ಲಿ ಮಂಗಳೂರು ಮೂಲದ ಪೈಲಟ್ ಮುಂಬೈ ನಿವಾಸಿ ಕ್ಲೈವ್ ಕುಂದರ್ ಮೃತಪಟ್ಟಿದ್ದಾರೆ.
1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದ ಕ್ಲೈವ್, 8,200 ಗಂಟೆಗಳಿಗೂ ಹೆಚ್ಚು ಹಾರಾಟದ ಲೈನ್ ತರಬೇತಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ಗೆ ಸಹಾಯ ಮಾಡುತ್ತಿದ್ದರು. ಇಬ್ಬರು ಪೈಲಟ್ ಸೇರಿದಂತೆ 232 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಹಾರಾಟದ ಸುಮಾರು ಐದು ನಿಮಿಷಗಳ ನಂತರ ಪತನಗೊಂಡಿತು.
ದೃಢೀಕರಿಸದ ವರದಿಗಳ ಪ್ರಕಾರ, ಪ್ರಯಾಣಿಕರಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದು ಅವರು ಕೂಡ ಮೃತಪಟ್ಟಿದ್ದಾರೆಂದು ಮಾಹಿತಿ ದೊರೆತಿದೆ. ಏರ್ ಇಂಡಿಯಾ ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 242 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ. ಅಲ್ಲದೆ, ಅಹಮದಾಬಾದ್ ಪೊಲೀಸರು ಕೂಡ ಯಾರೂ ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದಿದ್ದಾರೆ.
ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಏರ್ ಇಂಡಿಯಾ ವಿಮಾನ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ. ಲಂಡನ್ ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಇಂದು ಮಧ್ಯಾಹ್ನ ಅಹಮದಾಬಾದ್ ನಿಂದ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ವಿಮಾನ ನಿಲ್ದಾಣದ ಪರಿಧಿಯ ಬಳಿ ವೈದ್ಯರ ಹಾಸ್ಟೆಲ್ ಗೆ ಡಿಕ್ಕಿ ಹೊಡೆದಿದೆ ಎಂದು ANI ವರದಿ ಮಾಡಿದೆ.