ಮಂಗಳೂರು : ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣೆಗೊಳಗಾದ 18 ಮಂದಿ ಸಿಬ್ಬಂದಿ ಪೈಕಿ ಇಬ್ಬರು ಗಂಭೀರವಾಗಿದ್ದು ನಾಲ್ವರಿಗೆ ಭಾಗಶಃ ಗಾಯಗಳಾಗಿವೆ. ಆರು ಮಂದಿಯನ್ನು ನಗರದ ಎಜೆ ಆಸ್ಪತ್ರೆಗೆ ದಾಖಲಿಸಿದ್ದು ಉಳಿದ 12 ಮಂದಿಗೆ ನಗರದ ಹೊಟೇಲ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶ್ರೀಲಂಕಾದಿಂದ ಮುಂಬೈಗೆ ಸಾಗುತ್ತಿದ್ದ ಸಿಂಗಾಪುರ ಮೂಲದ ಹಡಗಿನಲ್ಲಿ ಪೈಂಟ್,ಗನ್ ಪೌಡರ್ ಸೇರಿದಂತೆ ಹಲವು ವಸ್ತುಗಳ ಸಾಗಾಟವಾಗುತಿತ್ತು,ಕೇರಳದ ಬೇಪೂರ್ ಕಡಲ ಕಿನಾರೆಯಿಂದ ೭೮ ನಾಟಿಕಲ್ ಮೈಲ್ ದೂರದಲ್ಲಿ ಹಡಗಿಗೆ ಬೆಂಕಿಆವರಿಸಿದೆ.ಹಡಗಿನಲ್ಲಿದ್ದ ನಾಲ್ವರು ಕಣ್ಮರೆಯಾಗಿದ್ದು ಕೋಸ್ಟ್ ಗಾರ್ಡ್ ಕಣ್ಮರೆಯಾದ ಸಿಬ್ಬಂದಿ ಯ ಶೋಧಕಾರ್ಯ ನಡೆಸುತ್ತಿದೆ. ಗಾಯಾಳುಗಳನ್ನು ಆಳಸಮುದ್ರದಿಂದ ಮಂಗಳೂರಿಗೆ ಐ ಎನ್ ಎಸ್ ಸೂರತ್ ನೌಕೆ ಕರೆತಂದಿದ್ದು ಬಂದರಿನಿಂದ ಗಾಯಾಳುಗಳನ್ನು ಆಸ್ಪತ್ರೆ ಗೆ ಆಂಬುಲೆನ್ಸ್ ಮೂಲಕ ರವಾನಿಸಿದೆ .
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆರು ಜನ ದಾಖಲಾಗಿದ್ದು ಆರು ಜನರ ಪೈಕಿ ಮೂರು ಜನ ಚೀನಾ ದೇಶದವರು ಇಬ್ಬರು ಬರ್ಮಾ ಹಾಗೂ ಒಬ್ಬರು ಇಂಡೋನೆಶೀಯದವರು ಎಂದು ತಿಳಿದಿದೆ.ಇದರಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು 30ರಿಂದ 40 ಶೇಕಡಾ ದೇಹದ ಭಾಗಗಳು ಸುಟ್ಟಿದೆ. ಜೊತೆಗೆ ಶ್ವಾಸಕೋಶದಲ್ಲೂ ಸುಟ್ಟಗಾಯಗಳಾಗಿದ್ದು ಉಳಿದ ನಾಲ್ಕು ಜನರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಇಬ್ಬರಿಗೆ ಐ ಸಿಯೂ ನಲ್ಲಿ ಚಿಕಿತ್ಸೆ ನೀಡಲಾಗುತ್ತಿಯೆಂದು ತಿಳಿದುಬಂದಿದೆ.