Friday, January 16, 2026
Flats for sale
Homeಜಿಲ್ಲೆಆನೇಕಲ್ : ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿಯ ತಲೆ ಕಡಿದು ರುಂಡ ಹಿಡಿದು ಠಾಣೆಗೆ ಬಂದ...

ಆನೇಕಲ್ : ಪ್ರಿಯಕರನ ಜೊತೆ ಸಿಕ್ಕಿಬಿದ್ದ ಪತ್ನಿಯ ತಲೆ ಕಡಿದು ರುಂಡ ಹಿಡಿದು ಠಾಣೆಗೆ ಬಂದ ಗಂಡ ..!

ಆನೇಕಲ್ : ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಒಂದು ವಿದೃಹಕ ಘಟನೆ ನಡೆದಿದೆ ಪತ್ನಿಯ ಅಕ್ರಮ ಸಂಬಂಧದಿಂದ ಆಕ್ರೋಶಗೊಂಡ ಪತಿ ಪತ್ನಿಯ ತಲೆ ಕಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಹೆಬ್ಬಗೋಡಿ ನಿವಾಸಿ ಮಾನಸ (26) ಮೃತ ದುರ್ದೈವಿ. ಹೆನ್ನಾಗರ ನಿವಾಸಿಯಾಗಿರುವ ಶಂಕರ್ (28) ಕೊಲೆ ಮಾಡಿರುವ ಆರೋಪಿ ಪತಿ .

ಆರೋಪಿ ಪತಿ ಶಂಕರ್ ಹಾಗೂ ಮೃತ ಮಾನಸ ಪ್ರೀತಿಸಿ ಮದುವೆ ಆಗಿದ್ದರು. ದಂಪತಿ ಒಂದು ತಿಂಗಳ ಹಿಂದೆ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಜೂನ್​ 3ರ ರಾತ್ರಿ ಶಂಕರ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದನು. ನಾಳೆ ಬೆಳಗ್ಗೆ ಬರುವುದಾಗಿ ಶಂಕರ್ ಪತ್ನಿ ಮಾನಸಗೆ ಹೇಳಿ ಹೋಗಿದ್ದನು. ಆದರೆ, ರಾತ್ರಿ ಬೇಗ ಕೆಲಸ ಮುಗಿತ್ತು. ಜೊತೆಗೆ ಮನೆಯಲ್ಲಿ ಪತ್ನಿ ಒಬ್ಬಳೇ ಇದ್ದಾಳೆಂದು ತಡರಾತ್ರಿಯೇ ಶಂಕರ ಮನೆಗೆ ಬಂದಿದ್ದನು.ಮನೆಗೆ ಬಂದ ಸಂದರ್ಭದಲ್ಲಿ ಪತ್ನಿ ಪ್ರಿಯಕರನ ಜೊತೆ ಇರುವುದನ್ನು ಕಣ್ಣಾರೆ ಕಂಡು ಆಕ್ರೋಶಗೊಂಡ ಶಂಕರ್​​ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ನಂತರ, ನೀನು ನನಗೆ ಬೇಡ, ನಿನ್ನ ಪ್ರಿಯಕರ ಜೊತೆ ಹೋಗು ಅಂತ ಪತ್ನಿ ಮಾನಸಳನ್ನು ಪತಿ ಶಂಕರ್ ಮನೆಯಿಂದ ಆಚೆ ಹಾಕಿದ್ದಾನೆ.​ ಆದರೆ, ಪತ್ನಿ ಮಾನಸ ಪದೇ ಪದೇ ಮನೆಗೆ ಬಂದು ಪತಿ ಶಂಕರ್​ಗೆ ಟಾರ್ಚರ್ ಕೊಡುತ್ತಿದ್ದಳು. ಶುಕ್ರವಾರ (ಜೂ.06) ರಾತ್ರಿ ಸಹ ಮನೆಗೆ ಬಂದು ಪತಿ ಶಂಕರ ಜೊತೆ ಪತ್ನಿ ಮಾನಸ ಗಲಾಟೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಶಂಕರ ಪತ್ನಿ ಮಾನಸಳ ತಲೆ ಕಡಿದು ರುಂಡ ಸಮೇತ ಠಾಣೆಗೆ ಬಂದಿದ್ದಾನೆ.

ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಮಾತನಾಡಿದ್ದು ಇದೊಂದು ಅಕ್ರಮ ಸಂಬಂಧದ ಪ್ರಕರಣ ಮಾನಸಳ ಪ್ರಿಯಕರನ ಹೆಸರು ಮುಗಿಲನ್. ಮುಗಿಲನ್ ಮತ್ತು ಮಾನಸ ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸ್ನೇಹ ಬಳೆದು, ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿದೆ. ಪತಿ ಶಂಕರ್ ಮನೆಯಲ್ಲಿ ಇಲ್ಲದಿದ್ದಾಗ ಮುಗಿಲನ್ ಆಗಾಗ ಮನೆಗೆ ಬಂದು ಹೋಗುತ್ತಿದ್ದನು.ದಂಪತಿಗೆ ಒಂದು ಹೆಣ್ಣು ಮಗುವಿದೆ. ಪತಿ ಕೆಲಸಕ್ಕೆ ಹೋಗಿದ್ದಾಗ ಪತ್ನಿ ಇನ್ನೊಬ್ಬನ‌ ಜೊತೆ ಸಂಬಂಧ ಇರುವುದು ಗೊತ್ತಾಗಿದೆ‌. ಇದೇ ವಿಚಾರಕ್ಕೆ ಹತ್ತು ದಿನಗಳಿಂದ ಮನೆಯಲ್ಲಿ ಗಲಾಟೆ ನಡೆದಿದೆ. ಗಲಾಟೆ ಅತಿರೇಕಕ್ಕೆ ಹೋಗಿ ರಾತ್ರಿ ಕೊಲೆಯಾಗಿದೆ. ಗಂಡ-ಹೆಂಡತಿ ನಡುವೆ ಮದುವೆ ಆದ್ದಾಗಲಿಂದಲೂ ಭಿನ್ನಾಭಿಪ್ರಾಯವಿತ್ತು. ಪ್ರಿಯಕರನ್ನು ಕರೆಸಿ ವಿಚಾರಣೆ ಮಾಡಲಾಗುತ್ತದೆ‌. ಜೊತೆಯಲ್ಲಿ ಪ್ರಿಯಕರ ಮುಗಿಲನ್ ಮೇಲೂ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತೆಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular