ಮಂಗಳೂರು : ವಿವಾಹಿತೆಯನ್ನು ಬಾವಿಗೆ ದೂಡಿ,ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ನಡೆದಿದೆ.
ಮೃತರು ಬಡಗಮಿಜಾರು ನಿವಾಸಿ ವಿವಾಹಿತೆ ನಮಿಕ್ಷಾ ಶೆಟ್ಟಿ (29)ಹಾಗೂ ಆಕೆಯ ಪ್ರೇಮಿ ನಿಡ್ಡೋಡಿಯ ಪ್ರಶಾಂತ್ ಎಂದು ತಿಳಿದಿದೆ.
ನಮೀಕ್ಷಾಗೆ ಮದುವೆಯಾಗಿದ್ದು, ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ ಪತಿ ಸತೀಶ್ ಪೂನಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಮೂಲತ: ಬಾಗಲಕೋಟೆ ನಿವಾಸಿಯಾಗಿದ್ದು, ಮದುವೆಯಾಗಿ ವಿಚ್ಛೇದನ ಆಗಿದ್ದು ನಮೀಕ್ಷಾ ಶೆಟ್ಟಿಗೆ ಇನ್ಟಾಗ್ರಾಂ ಮೂಲಕ ಪ್ರಶಾಂತ್ ಪರಿಚಯವಾಗಿದೆ ಎಂದು ತಿಳಿದಿದೆ.
ನಮೀಕ್ಷಾ ಗಂಡನ ಜೊತೆ ಸಂಸಾರ ಸರಿ ಬಾರದೆ ತನ್ನ ಮಕ್ಕಳೊಂದಿಗೆ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು,ಪ್ರಿಯಕರ ಪ್ರಶಾಂತ್ ನಮೀಕ್ಷಾ ಮನೆಗೆ ಆಗಾಗ ಬಂದು ಹೋಗುತ್ತಿದ್ದು ಇಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದಿದ್ದು, ಈ ಸಂದಭ೯ ಇಬ್ಬರ ಮಧ್ಯೆ ಜಗಳವಾಗಿದೆ ಎಂಬ ಮಾಹಿತಿ ದೊರೆತಿದೆ.
ಇಬ್ಬರ ನಡುವಿನ ಜಗಳ ತಾರಕಕ್ಕೆ ಏರಿದ್ದು ಮೊದಲು ಪ್ರೇಯಸಿ ನಮೀಕ್ಷಾಳನ್ನು ಬಾವಿಗೆ ದೂಡಿದ್ದುಬಳಿಕ ಮಗ ನೋಡಿದ ಹಿನ್ನೆಲೆ ಇದನ್ನು ಕಂಡ ಪ್ರಶಾಂತ್ ತಾನೂ ಬಾವಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


