ಮಂಗಳೂರು : ಭಾರತದ ಪ್ರಮುಖ ಐಷಾರಾಮಿ ಪೀಠೋಪಕರಣಗಳು ಮತ್ತು ಗೃಹಾಲಂಕಾರ ಬ್ರಾಂಡ್ ಆಗಿರುವ ಸ್ಟಾನ್ಲಿ ಲೈಫ್‌ಸ್ಟೈಲ್ಸ್, ಮಳಿಗೆ ವಿ.ಕೆ ಫರ್ನಿಚರ್ ನ ಸಹಯೋಗದೊಂದಿಗೆ ಮಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ನಾಳೆ 25ರಂದು ನಗರದ ಯೆಯ್ಯಾಡಿಯಲ್ಲಿನ ಶರಬತ್ ಕಟ್ಟೆಯ ಬಳಿ ಬೆಳಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿದೆ ಎಂದು ಸ್ಟಾನ್ಲಿ ಲೈಫ್‌ಸ್ಟೈಲ್ಸ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುನೀಲ್ ಸುರೇಶ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಚೇರ್‌ಮೆನ್ ಡಾ.ಎ. ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದು ಈ ಸಂದರ್ಭ ಗಣ್ಯರಾದ ಸುಪ್ರೀತ್ ಆಳ್ವ, ಸುರೇಶ್ ಪೈ, ಚೇತನ್ ಕಾಮತ್, ಗುಲ್ಶನ್ ರಾಯ್ ಪಾಲ್ಗೊಳ್ಳುವರು ಎಂದು ಹೇಳಿದರು.
ನಾವು 100 ಕ್ಕೆ 100 % ಉತ್ತಮ ಗುಣಮಟ್ಟದ ಲೆದರ್ (ಚರ್ಮ) ವನ್ನು ಬಳಸುತ್ತಿದ್ದೇವೆ,ಯಾರೂ ಕೂಡ ನಮ್ಮತಹ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದರು. ಮುಂದಿನ ವರ್ಷ ನಮ್ಮ ಸಂಸ್ಥೆ 30 ವರ್ಷ ಪೂರೈಸಲಿದ್ದು ಇದು ದೇಶದಲ್ಲಿನ 71 ಮಳಿಗೆ ಯಾಗಿದೆ,23 ಮೆಟ್ರೋ ಸಿಟಿಗಳಲ್ಲಿ ನಮ್ಮ ಸಂಸ್ಥೆ ಇದ್ದು ಮಂಗಳೂರಿನಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಸಜ್ಹಾಗಿದೇವೆಂದು ತಿಳಿಸಿದರು. ನೂತನ ಮಳಿಗೆಯಲ್ಲಿ ಅತ್ಯಾಧುನಿಕ ದರ್ಜೆಯ ಸೋಾಗಳು, ರೆಕ್ಲೆ ನರ್‌ಗಳು, ಹಾಸಿಗೆಗಳು, ಡೈನಿಂಗ್ ಟೇಬಲ್, ಆರ್ಮ್‌ಚೇರ್‌ಗಳು ಮುಂತಾದ ಉತ್ಪನ್ನಗಳನ್ನು ಹೊಂದಿದೆ. ಹೈಬ್ರಿಡ್ ಅಂಗಡಿ ಪರಿಕಲ್ಪನೆಯು ಸ್ಟಾನ್ಲಿ ಬೂಟೀಕ್ ಮತ್ತು ಸೋಾಗಳು ಒಂದೇ ಸೂರಿನಡಿ ಇಲ್ಲಿ ಲಭ್ಯವಿರಲಿದೆ. ನಮ್ಮ ಸಂಸ್ಥೆಯ ಎಲ್ಲಾ ಉತ್ಪನ್ನಗಳನ್ನು ಒಂದೇ ್ಯಾಕ್ಟರಿಯಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಇಲ್ಲಿ ಬಳಸುವ ಮರಗಳು ಮಾನ್ಯತೆ ಪಡೆದುಕೊಂಡಿದೆ. ಪೀಠೋಪಕರಣ, ಲೆದರ್ ಅನ್ನು ವಿದೇಶಗಳಿಂದ ತರಿಸಲಾಗುತ್ತಿದೆ. ಗ್ರಾಹಕರ ಅಪೇಕ್ಷೆಗೆ ಅನುಗುಣವಾಗಿ ವಿವಿಧ ಗಾತ್ರ, ಬಣ್ಣದ ಸೋಫಾ ಸೆಟ್ ಸಹಿತ ವಿವಿಧ ಉತ್ಪನ್ನಗಳನ್ನು 4-6 ವಾರದೊಳಗೆ ತಯಾರಿಸಿಕೊಡುತ್ತೇವೆ. ಸುಮಾರು ಒಂದು ಲಕ್ಷದಷ್ಟು ಗ್ರಾಹಕರನ್ನು ಸಂಸ್ಥೆ ಹೊಂದಿದೆ ಎಂದು ವಿವರಿಸಿದರು.2029ರಲ್ಲಿ 150 ಮಳಿಗೆ ತೆರೆಯುವ ಗುರಿ ಹೊಂದಿದ್ದು ಪ್ರಧಾನ ಮಂತ್ರಿಯವರ ಕಚೇರಿ, ವಿಧಾನ ಸೌಧ, ಬೆಂಗಳೂರು ವಿಮಾನ ನಿಲ್ದಾಣ ಮೊದಲಾದ ಕಡೆಗಳಿಗೆ ಪೀಠೋಪಕರಣಗಳನ್ನು ಕಲ್ಪಿಸಿದ ಹೆಗ್ಗಳಿಕೆಯನ್ನು ಸಂಸ್ಥೆ ಹೊಂದಿದೆ ಎಂದರು.
ವಿ.ಕೆ.ಸಮೂಹ ಸಂಸ್ಥೆಯ ಮಾಲೀಕ ವಿಠಲ್ ಕುಲಾಲ್ ಕೊಣಾಜೆ ಮಾತನಾಡಿ, ಇದು ಮಂಗಳೂರಿನ ಜನತೆಗೆ ಶುಭ ಸಮಾಚಾರ ಮಂಗಳೂರು ಜನತೆಗೆ ಸ್ಟಾೃನ್ಲಿ ಲೈಫ್‌ಸ್ಟೈಲ್‌ನ ವಿಶ್ವದರ್ಜೆಯ ಪೀಠೋಪಕರಣಗಳನ್ನು ಆಯ್ಕೆ ಮಾಡಲು ಇದೊಂದು ಸದವಕಾಶ. ವಿಫುಲ ಆಯ್ಕೆ ಶ್ರೇಣಿಗಳಿದ್ದು, ಗುಣಮಟ್ಟದ ಸೋಫಾ, ಹಾಸಿಗೆ, ಡೈನಿಂಗ್ ಟೇಬಲ್ ಮೊದಲಾದ ಪೀಠೋಪಕರಣಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಇಲ್ಲಿ ಮಾರಟವಾಗುವ ಪ್ರತಿಯೋಂದು ಪೀಠೋಪಕರಣಗಳು ಉತ್ತಮ ಗುಣಮಟ್ಟದಾಗಿದೆ ಎಂದು ಹೇಳಿದರು.


