Thursday, October 23, 2025
Flats for sale
Homeಜಿಲ್ಲೆಮಂಗಳೂರು : ಮೇ 25 ರಂದು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA ತನಿಖೆಗೆ ಒಪ್ಪಿಸುವಂತೆ...

ಮಂಗಳೂರು : ಮೇ 25 ರಂದು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಶೃದ್ಧಾಂಜಲಿ ಸಭೆ..!

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಶೃದ್ಧಾಂಜಲಿ ಸಭೆಯು 25 ಮೇ 2025 ಭಾನುವಾರ ಸಂಜೆ 3 :30 ಗಂಟೆಗೆ ಬಜ್ಪೆ ಜಂಕ್ಷನ್ ಶಾರದ ಮಂಟಪ ಬಳಿ ನಡೆಯಲಿದೆ. ಈ ಸಭೆಯಲ್ಲಿ ಖ್ಯಾತ ವಾಗ್ಮಿಗಳು ಶ್ರೀಕಾಂತ್ ಶೆಟ್ಟಿ ಪ್ರಮುಖ ಭಾಷಣ ಮಾಡಲಿದ್ದು, ಪ್ರಾಸ್ತಾವಿಕವಾಗಿ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶ್ರೀ ಶಿವಾನಂದ್ ಮೆಂಡನ್ ಮಾತನಾಡಲಿದ್ದಾರೆ. ಮಂಗಳೂರು ಮಹಾನಗರ ಸೇರಿದಂತೆ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಹಿತೈಷಿಗಳು ಈ ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಕಾರ್ಯಕ್ರಮ ಸರಿಯಾಗಿ 3 :30 ಗಂಟೆಗೆ ಪ್ರಾರಂಭವಾಗಲಿದ್ದು, ಎಲ್ಲಾ ಕಾರ್ಯಕರ್ತರು, ಹಿತೈಷಿ ಬಂಧುಗಳು 3:00 ರ ಒಳಗೆ ಬಜ್ಪೆಯ ಶಾರದ ಮಂಟಪವನ್ನು ತಲುಪಬೇಕೆಂದು ಕೋರಿದ್ದಾರೆ. ಮಂಗಳೂರು – ಸುರತ್ಕಲ್ – ಕಾವೂರು ಭಾಗದಲ್ಲಿ ಬರುವ ವಾಹನಗಳಿಗೆ ಬಜ್ಪೆ ನಾರಾಯಗುರು ಮಂದಿರ ಬಳಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಗುರುಪುರ – ವಾಮಂಜೂರು – ಮಳಲಿ ಕಡೆಯಿಂದ ಬರುವ ವಾಹನಗಳಿಗೆ ಸಂಜೀವ ಶೆಟ್ಟಿ ಸಭಾಭವನ ಮತ್ತು 3 ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಲ್ಕಿ ಮೂಡಬಿದ್ರೆಯಿಂದ ಬರುವ ವಾಹನಗಳಿಗೆ ಯಾದವ್ ಕೋಟ್ಯಾನ್ ಕನ್ನಿಕಾ ನಿಲಯ ಮೈದಾನ್ ಬಳಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಎಲ್ಲ ಕಡೆ ಪಾರ್ಕಿಂಗ್ ಸೂಚನಾ ಫಲಕಗಳನ್ನು ಹಾಕಲಾಗುವುದು ಎಂದು ಹೇಳಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಜನಾಗ್ರಹ ಸಭೆ ಮತ್ತು ಶೃದ್ಧಾಂಜಲಿ ಸಭೆಯಲ್ಲಿ ನಮ್ಮೆಲ್ಲಾ ಕಾರ್ಯಕರ್ತರು, ಧರ್ಮಾಭಿಮಾನಿ ಬಂಧುಗಳು, ನಮ್ಮ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಸಭೆಯನ್ನು ಯಶಸ್ವಿಗೊಳಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular