ಉಡುಪಿ : ಚೈತ್ರ ಕುಂದಾಪುರ ಮದುವೆಗೆ ತಂದೆ ಬಾಲಕೃಷ್ಣ ನಾಯ್ಕ್ ವಿರೋಧ ಹೊರ ಹಾಕಿದ್ದು ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೆ ಗೊತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಎರಡು ಕ್ವಾಟರ್ ನಾನು ಕೊಟ್ಟರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರು ಹೀಗೆ ಚೈತ್ರ ಕುಂದಾಪುರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಈ ನಡುವೆ ಚೈತ್ರ ಪೋಸ್ಟ್ ಕೇಳಿ ತಂದೆ ಬಾಲಕೃಷ್ಣ ನಾಯ್ಕ್ ಕೆಂಡಾಮಂಡಲವಾಗಿದ್ದಾರೆ.
ಆದರೆ ಈ ವಿಚಾರ ತಾರಕಕ್ಕೆ ಏರಿದ್ದು ನಾನು ಕುಡುಕ ಎಂದು ಚೈತ್ರ ಸಾಬೀತು ಪಡಿಸಲಿ ಗೋವಿಂದ ಬಾಬು ಪೂಜಾರಿಯಿಂದ ಕೋಟಿ ಪಡೆದದ್ದು ಸಾಬೀತಾಗಿದೆ ಹಾಗೆ ನಾನು ಕುಡಿಯುವುದು ಸಾಬೀತು ಪಡಿಸಲಿ,ಸರ್ಕಾರಿ ವೈಧ್ಯರಿಂದ ರಕ್ತ ಪರೀಕ್ಷೆ ಮಾಡಿಸಿ ಸರ್ಟಿಫಿಕೇಟ್ ತೋರಿಸಲಿ ಯಾವುದೇ ದೇವಸ್ಥಾನದಲ್ಲಿ ಬೇಕಾದರೂ ಪ್ರಮಾಣ ಮಾಡಲಿ ಮಂಜುನಾಥ, ಸುಬ್ರಮಣ್ಯ, ಕುಲದೇವರ ಮುಂದೆ ಪ್ರಮಾಣ ಮಾಡಬೇಕು ವೈದ್ಯರ ಸರ್ಟಿಫಿಕೇಟ್ ಜೊತೆ ಬಂದು ದೇವರ ಮುಂದೆ ಎಂದು ಪ್ರಮಾಣ ಮಾಡಲಿ ಸುಖಾ ಸುಮ್ಮನೆ ಬಾಯಿಗೆ ಬಂದ ಹಾಗೆ ಅಪ್ಪ ಕುಡುಕ ಹೇಳೊದಲ್ಲ ಎಂದು ಚಾಲೆಂಜ್ ಹಾಕಿದ್ದಾರೆ. ಮೊನ್ನೆ ತಾನೇ ಕಾಂಟ್ರವರ್ಸಿ ರಾಣಿ ಚೈತ್ರ ಮದುವೆ ವಿಜೃಂಭಣೆಯಿಂದ ನಡೆದಿದೆ .ಆದರೆ ಮಗಳ ಮದುವೆಗೆ ತಂದೆಯನ್ನು ಆಮಂತ್ರಿಸದೇ ಇರುವುದರಿಂದ ಇಂದು ಈ ಸುದ್ದಿ ಪ್ರಚಾರವಾಗಿದೆ.
ಆದರೆ ಈ ಬಗ್ಗೆ ಚೈತ್ರ ತಂದೆಯ ಹೇಳಿಕೆಗಳಿಗೆ ತಾಯಿ ರೋಹಿಣಿ ಕೌಂಟರ್ ಕೊಟ್ಟಿದ್ದು ನನ್ನ ಪತಿ ಜವಾಬ್ದಾರಿ ಇಲ್ಲದ ವ್ಯಕ್ತಿ, ಮನೆಯ ಯಾವ ಕಷ್ಟಕ್ಕೂ ಸ್ಪಂದಿಸಿದವರಲ್ಲ, ದೊಡ್ಡ ಮಗಳು ಹೇಳಿಕೊಟ್ಟದ್ದನ್ನು ಅವರು ಹೇಳುತ್ತಿದ್ದಾರೆ, ಯಾವ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ವ್ಯಕ್ತಿಯಲ್ಲ, ಕೆಲಸ ಮಾಡುತ್ತೇನೆ ಎಂದು ಎಲ್ಲೆಲ್ಲಿ ಹೋಗುತ್ತಾರೆ ದುಡಿದು ಹಣವನ್ನು ದೊಡ್ಡ ಮಗಳಿಗೆ ಕೊಡುತ್ತಾರೆ, ನನ್ನ ದೊಡ್ಡ ಮಗಳು ಆಸ್ತಿ ಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ,ಮಕ್ಕಳಿಗೆ ಓದಿಸುವಾಗಲು ಸಹಾಯ ಮಾಡಿಲ್ಲ ಕೆಲಸಕ್ಕೆ ಹಾಕು ಎನ್ನುತ್ತಿದ್ದರು, ಮೂರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ನೀಡಿದ ವರಲ್ಲ,ಆ ಕಾಲದಲ್ಲಿ ಒಂದುವರೆ ಎರಡು ಲಕ್ಷ ರೂಪಾಯಿಯಲ್ಲಿ ಮನೆ ಕಟ್ಟಿದರು,ಅವರು ಕಟ್ಟಿದ ಮನೆ ಬಿದ್ದು ಹೋಗಿದೆ ನನ್ನ ಗಂಡನಿಗೆ ಮಾತನಾಡಲು ಬರುವುದಿಲ್ಲ ಅವರು ಒಂತರಾ ಮಾನಸಿಕ ವ್ಯಕ್ತಿ, ರಾತೋರಾತ್ರಿ ಮನೆ ಬಿಟ್ಟು ಹೋಗುತ್ತಾರೆ,ಕೆಲವೊಮ್ಮೆ ಏನೆಲ್ಲಾ ಮಾತನಾಡುತ್ತಾರೆ ಎಂದು ಹಿರಿಯ ಮಗಳು ಗಾಯತ್ರಿ ವಿರುದ್ಧ ಆರೋಪಗಳ ಸುರಿಮಳೆಗೈದ್ದಿದ್ದಾರೆ.
ನಾನು ಚೂರುಪಾರು ಹಣ ದೊಡ್ಡ ಮಗಳ ಗಂಡನ ಸೊಸೈಟಿಯಲ್ಲಿ ಇಟ್ಟಿದ್ದೆ ಅದನ್ನು ಕೂಡ ನನ್ನ ಗಂಡ ದೊಡ್ಡ ಮಗಳಿಗೆ ಕೊಟ್ಟಿದ್ದಾರೆ,ನಮ್ಮ ಭೂಮಿ ಬೇಕು ಎಂದು ದೊಡ್ಡ ಮಗಳು ಬೆನ್ನು ಬಿದ್ದಿದ್ದಾಳೆ,ಅವಳ ಮನೆಗೆ ಸಹಾಯ ಮಾಡಲು ಚೈತ್ರ ಜಾಗ ಬರೆದುಕೊಟ್ಟಿದ್ದಾಳೆ,25 ಲಕ್ಷ ಲೋನ್ ನಾವೇ ಮಾಡಿಕೊಟ್ಟಿದ್ದೇವೆ,ಅಪ್ಪನ ಬಳಿ ಸಹಿ ಪಡೆದು ಜಾಗ ಒಳ ಹಕುವ ಸಂಚು ಮಾಡಿದ್ದಾಳೆ,ಅಮ್ಮ ಮೋಸ ಮಾಡಿದಳು ಎಂದು ಹೇಳಿಕೊಂಡು ಬರುತ್ತಿದ್ದಾಳೆ,ಅಪ್ಪ ಮದುವೆಗೆ ಬರದ ಹಾಗೆ ದೊಡ್ಡ ಮಗಳು ತಡೆದಿದ್ದಾಳೆ ಕುಂದಾಪುರದವರೆಗೆ ಬಂದವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ ಮರ್ಯಾದೆ ತೆಗೆಯಲು ಈ ರೀತಿ ಮಾಡಿದ್ದಾಳೆ, ತಂದೆಗೆ ಮದುವೆಗೆ ಬರಬೇಕು ಎಂದು ಬಹಳ ಇಷ್ಟ ಇತ್ತು,ತಾನೆ ಹೋಗಿ ಮದುವೆ ಕಾಗದ ಹಿರಿಯರ ಮನೆಗೆ ಕೊಟ್ಟು ಬಂದಿದ್ದಾರೆ,ಮನೆ ಪೇಂಟಿಂಗ್ ಕೂಡ ತಾನೇ ನಿಂತು ಮಾಡಿಸಿದ್ದಾರೆ ಮದುವೆಗೆ ಬರುತ್ತೇನೆ ಎಂದು ಹೇಳಿದವರನ್ನು ಮಗಳು ತಡೆದಿದ್ದಾಳೆ,ಅವಳಿಗೆ ಆಸ್ತಿ ಪಡೆದ ನಾನು ಸಹಿ ಹಾಕಿಲ್ಲ ಎಂದು ಹೀಗೆ ಮಾಡುತ್ತಿದ್ದಾಳೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನನ್ನ ಗಂಡ ಯಾವ ವಿಷಯದಲ್ಲಿ ಜವಾಬ್ದಾರಿ ತಗೊಂಡಿಲ್ಲ,ಅವರಿಗೆ ಮಾತನಾಡಲು ಬರುವುದಿಲ್ಲ ಅವರು , ಅವರ ಅಣ್ಣ ಎಲ್ಲರೂ ಒಂದು ರೀತಿ ಮಾನಸಿಕ ವ್ಯಕ್ತಿಗಳು, ದೊಡ್ಡ ಮಗಳ ಮದುವೆಗೂ ಅವರು ಸರಿಯಾಗಿ ಬಂದಿರುವುದಿಲ್ಲ,ಎಲ್ಲೋ ಬಸ್ಸು ಹತ್ತಿ ಕೂತವರನ್ನು ಹುಡುಗರು ತರ ಕರೆದುಕೊಂಡು ಬಂದಿದ್ದರು,ಚೈತ್ರಪತಿ 12 ವರ್ಷದಿಂದ ನಮ್ಮ ಮನೆಯಲ್ಲಿ ಇರಲಿಲ್ಲ ,ಎರಡು ಮೂರು ವರ್ಷದ ಹಿಂದೆ ನಮಗೆ ಅವನ ಪರಿಚಯವಾಗಿತ್ತು,ಅವನು ನಮ್ಮ ಮನೆಗೆ ಬಂದು ನೀರು ಸಹ ಕುಡಿಯುತ್ತಿರಲಿಲ್ಲ,ನಾನೇ ಹೆಣ್ಣು ಮಕ್ಕಳನ್ನು ಬೆಳೆಸಿದ್ದು ಏನಾದರೂ ಹೇಳಿದರೆ ಹೊಡೆಯಲು ಬರುತ್ತಾರೆ ಜಬರ್ದಸ್ತ್ ಮಾಡುತ್ತಾರೆ,ಇದನ್ನೆಲ್ಲ ನೋಡಿ ನೋಡಿ ನಮಗೆ ಸಾಕಾಗಿದೆ ಅವರ ವಿಷಯ ಬಿಟ್ಟಿದ್ದೇವೆ ಎಂದು ತಮ್ಮ ಸಂಸಾರದ ತಾಪತ್ರಯವನ್ನು ಬಿಚ್ಚಿಟ್ಟಿದ್ದಾರೆ.