ಬಾಗಲಕೋಟೆ : ಶಿಕ್ಷಕನಿಗೆ ಬಿಯರ್ ಬಾಟಲ್ನಿಂದ ಒಡೆದು ಮುಖ ತಲೆ ಭಾಗಕ್ಕೆ ಚಾಕುವಿನಿಂದ ಇರಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ನಡೆದಿದೆ. ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯುವಕನಿಂದ ಇರಿದ ಯುವಕ ಪವನ್ ಜಾಧವ್(21) ಎಂದು ತಿಳಿದಿದೆ. ಬಿ ಎಲ್ ಡಿ ಇ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕ ಸಾವಳಗಿ ಗ್ರಾಮದ ರಾಮಪ್ಪ ಪೂಜಾರಿ(36) ಚಾಕು ಇರಿತಕ್ಕೆ ಒಳಗಾದವರು.
ಯುವಕ ಹಾಗೂ ಶಿಕ್ಷಕನ ಮನೆ ಅಕಪಕ್ಕವಿದ್ದು ಕ್ರಿಕೆಟ್ ಆಡುವ ವೇಳೆ ಬಾಲ್ ಶಿಕ್ಷಕನ ಮನೆ ಕಡೆ ಹೋಗಿತ್ತು. ಮನೆಯೊಳಗೆ ಬಾಲ್ ಹೋಗಿದೆ ಕೊಡಿ ಯುವಕ ಎಂದಿದ್ದು ಆ ಸಮಯದಲ್ಲಿ ಇಲ್ಲಿ ಬಾಲ್ ಬಂದಿಲ್ಲ ಎಂದಿದ್ದ ಶಿಕ್ಷಕ ಹೇಳಿದ್ದಾರೆ. ಇದೇ ವಿಚಾರಕ್ಕೆ ಜಗಳ ನಡೆದಿತ್ತು ನಂತರ ಶಾಲೆಗೆ ಹೋಗಿ ಯುವಕ ಶಿಕ್ಷಕರ ಮೇಲೆ ಬಾಟಲ್ನಿಂದ ಇರಿದಿದ್ದಾನೆ. ಶಿಕ್ಷಕನನ್ನ ಸಾವಳಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಸಾವಳಗಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.


