Friday, March 13, 2026
Flats for sale
Homeರಾಜ್ಯವಿಜಯಪುರ : ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಿಂದ ಪಾಕಿಸ್ತಾನ ಪರ ಪೋಸ್ಟ್, ದೇಶದ್ರೋಹದ...

ವಿಜಯಪುರ : ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಿಂದ ಪಾಕಿಸ್ತಾನ ಪರ ಪೋಸ್ಟ್, ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲು..!

ವಿಜಯಪುರ : ಭಾರತ ಪೆಹಲ್ಗಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪಾಕಿಸ್ತಾನಕ್ಕೆ ನುಗ್ಗಿ ಪ್ರತಿಕಾರ ತೀರಿಸುತ್ತಿರುವ ಸಂಧರ್ಭದಲ್ಲಿ ದೇಶದಲ್ಲಿರುವ ಕೆಲವು ಉಗ್ರರು ಪಾಕಿಸ್ತಾನದ ಪರ ಪೋಸ್ಟ್ ಹಾಕಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ತಷಾವುದ್ದ ಫಾರೂಖಿ ಶೇಖ್ ಎಂಬ ವಿದ್ಯಾರ್ಥಿನಿ ಪಾಕಿಸ್ತಾನದ ಪರ ಪೋಸ್ಟ್ ಹರಿಬಿಟ್ಟಿದ್ದಾಳೆ.ಇಂಥವರು ಪಾಕಿಸ್ತಾನಕ್ಕೆ ಹೋಗುವುದು ಬಿಟ್ಟು ಭಾರತ ದೇಶದ ಜನರ ತೆರಿಗೆಯ ದುಡ್ಡಿನಲ್ಲಿ ಬಿಟ್ಟಿ ಭಾಗ್ಯಗಳನ್ನು ಪಡೆದು ಬದುಕುತ್ತಿರುವುದು ಕೆದಕರ.

ವಿಜಯಪುರದ (Vijayapura) ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕಿಸ್ತಾನದ ಜನರ ಪರ ಹಾಗೂ ಅವರ ಸುರಕ್ಷತೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್​​ ಹಂಚಿಕೊಂಡಿದ್ದಾಳೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್​ ‘@hoodyyyyyyy’ ಎಂಬ ಹೆಸರಿನ ಖಾತೆಯಲ್ಲಿ “ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ, ಎಜೆಕೆ ಜನರು ಸರ್ಕಾರಿ ಮಿಲಿಟರಿ ಸ್ಥಳಗಳಿಗೆ ಹೋಗಬೇಡಿ. ಗಡಿಯಿಂದ 200 ಕಿಲೋ ಮೀಟರ್ ಹೋಗಬೇಡಿ. ಅಲ್ಲಾ ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ ಅಮೀನ್#sos” ಎಂದು ದೇಶ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ತನ್ನ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಕೂಡ ಪೋಸ್ಟ್ ಹಾಕಿದ್ದಾಳೆ. ಕಳೆದ ೧೨ ಗಂಟೆಗಿಂದ ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಿ ಭಾರತದ ಯೋಧರು ಸೆದೆಬಡಿಯುತ್ತಿದ್ದು ಈ ಭಾರತದ ಒಳಗಿನ ಉಗ್ರರಿಗೆ ಇನ್ನು ಮನವರಿಕೆ ಯಾಗಲಿಲ್ಲ ಎಂದು ಕೆಲ ದೇಶ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular