Wednesday, October 22, 2025
Flats for sale
Homeದೇಶನವದೆಹಲಿ : ಪಹಲ್ಗಾಮ್ ಹತ್ಯಾಕಾಂಡದ ರಾಕ್ಷಸರಲ್ಲಿಇಬ್ಬರು ದ.ಕಾಶ್ಮೀರಿಗರು : N.I.A

ನವದೆಹಲಿ : ಪಹಲ್ಗಾಮ್ ಹತ್ಯಾಕಾಂಡದ ರಾಕ್ಷಸರಲ್ಲಿಇಬ್ಬರು ದ.ಕಾಶ್ಮೀರಿಗರು : N.I.A

ನವದೆಹಲಿ : ಪಹಲ್ಗಾಮ್ ಹತ್ಯಾಕಾಂಡ ಕುರಿತ ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಯಿAದ ಕೆಲವೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಈ ದಾಳಿಯಲ್ಲಿ ಭಾಗಿಯಾದ ನಾಲ್ವರಲ್ಲಿ ಇಬ್ಬರು ಭಯೋತ್ಪಾದಕರು ದಕ್ಷಿಣ ಕಾಶ್ಮೀರದವರು. ಅವರು ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ ಭಾರತಕ್ಕೆ ಹೇಗೆ ಬಂದರೆAಬುದರ ಬಗ್ಗೆ ಮಾಹಿತಿ ಇಲ್ಲ.

ಜಮ್ಮುವಿನ ಕಥುವಾ ಮೂಲಕ ಭಾರತಕ್ಕೆ ಮರಳಿರಬಹುದೆಂದು ನಂಬಲಾಗುತ್ತಿದೆ. ಬೈಸರನ್ ಕಣಿವೆಯಲ್ಲಿ ಈ ಭಯೋತ್ಪಾದಕರು ಗುಂಡಿನ ದಾಳಿ ನಡೆಸುವ ಮೊದಲು ಪ್ರವಾಸಿಗರೊಂದಿಗೆ ಬೆರೆತು ಅವರೆಲ್ಲರನ್ನೂ ಫುಡ್‌ಕೋರ್ಟ್ನಲ್ಲಿ ಒಟ್ಟುಗೂಡಿಸಿದ್ದರು. ಆನಂತರ ಪಾಕಿಸ್ತಾನ ಮೂಲದ ಭಯೋತ್ಪಾದಕರಿಬ್ಬರು ಪ್ರವಾಸಿಗರ ಧರ್ಮ ಕೇಳಿ ಇಸ್ಲಾಮೇತರರ ಮೇಲೆ ಗುಂಡು ಹಾರಿಸುತ್ತಿದ್ದರು.

ಈ ದಾಳಿಗೆ ನಾಲ್ಕು ದಿನಗಳ ಮೊದಲೇ ಬೈಸರನ್ ಕಣಿವೆಯ ಸುತ್ತಮುತ್ತ ತಿರುಗಾಡಿದ್ದರು. ಸ್ಥಳೀಯರ ಸಹಾಯವಿಲ್ಲದೇ ಇಂಥ ಬರ್ಬರ ಕೃತ್ಯವೆಸಗಲು ಸಾಧ್ಯವಾಗುತ್ತಿರಲಿಲ್ಲ. ಇದೇ ಪ್ರದೇಶದಿಂದ ವೈರ್‌ಲೆಸ್ ಚಾಟಿಂಗ್ ಮೂಲಕ ಗೌಪ್ಯ ಮಾಹಿತಿಗಳ ವಿನಿಮಯವೂ ನಡೆದಿದೆ. ಈ ಭಯೋತ್ಪಾದಕರ ಸಂವಹನ ಸಾಧನ ವಿಭಿನ್ನವಾಗಿದ್ದರಿಂದ ಅವರು ಏನು ಮಾತನಾಡುತ್ತಿದ್ದರೆಂಬುದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಶಸ್ತçಸಜ್ಜಿತ ಭಯೋತ್ಪಾದಕರು ಕಣಿವೆ ಪ್ರದೇಶದಲ್ಲಿ ಮುಕ್ತವಾಗಿ ಸುತ್ತಾಡಿರುವುದು ಭದ್ರತಾಪಡೆ ಹಾಗೂ ಸರ್ಕಾರವನ್ನು ಮತ್ತಷ್ಟು ಕಳವಳಕ್ಕೀಡುವಂತೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular