Tuesday, March 17, 2026
Flats for sale
Homeರಾಜ್ಯಕೊಡಗು : ಆನೆಕಾಡು ಬಳಿ ಕಾರಿನ ಮೇಲೆ ಕಾಡಾನೆ ದಾಳಿ,ಕಾರು ನಜ್ಜುಗುಜ್ಜು,ಹಲವರಿಗೆ ಗಾಯ..!

ಕೊಡಗು : ಆನೆಕಾಡು ಬಳಿ ಕಾರಿನ ಮೇಲೆ ಕಾಡಾನೆ ದಾಳಿ,ಕಾರು ನಜ್ಜುಗುಜ್ಜು,ಹಲವರಿಗೆ ಗಾಯ..!

ಕೊಡಗು : ಕೊಡಗು ಜಿಲ್ಲೆಯ ಮಡಿಕೇರಿಯ ಬಳಿಯ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ರಾತ್ರಿ 8 ಗಂಟೆಗೆ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಹಲವರು ಗಾಯಗೊಂಡ ಘಟನೆ ನಡೆದಿದೆ.

ಮಾರುತಿ ಓಮಿನಿ ಕಾರಿನಲ್ಲಿ ಮಡಿಕೇರಿಯಲ್ಲಿ ಕೆಲಸ ಮಾಡುತ್ತಿರುವ ಶರೀಫ್ ಕುಟುಂಬದೊಂದಿಗೆ ಹುಬ್ಬಳ್ಳಿ ಗೆ ಹೊರಟ್ಟಿದ್ದ ಸಂದರ್ಭದಲ್ಲಿ ಆನೆಕಾಡು ಬಳಿ ಕಾಡಾನೆ ದಾಳಿ ನಡೆಸಿದೆ . ಆನೆ ದಾಳಿಯಿಂದ ಕಾರು ನಜ್ಜುಗುಜ್ಜಾಗಿದ್ದು ಗಾಯಾಳುಗಳು ಕುಶಾಲನಗರದ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಸುಂಟಿಕೊಪ್ಪದ ಲತೀಫ್ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular