Thursday, July 23, 2026
Homeಜಿಲ್ಲೆಬೆಂಗಳೂರು : SSLCಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಪ್ರಥಮ,ಕಲಬುರ್ಗಿಗೆ ಕೊನೆಯ ಸ್ಥಾನ..!

ಬೆಂಗಳೂರು : SSLCಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಪ್ರಥಮ,ಕಲಬುರ್ಗಿಗೆ ಕೊನೆಯ ಸ್ಥಾನ..!

ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಒಟ್ಟು 62.34 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2004 ರ ಫಲಿತಾಂಶಕ್ಕೆ ಹೋಲಿಸಿದರೆ ಶೇ 11.೦6 ರಷ್ಟು ಕುಸಿದಿದೆ.

ಕಳೆದ ಬಾರಿ ರಾಜ್ಯದ ಫಲಿತಾಂಶ ಶೇ. 73.4೦ ರಷ್ಟಾಗಿತ್ತು. ಈ ಬಾರಿ 8.42.173 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 5.24.984 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ 62.34 ರಷ್ಟು ದಾಖಲಾಗಿದೆ.

ಈಸಲ ರಾಜ್ಯದ 22 ಅಭ್ಯರ್ಥಿಗಳು 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ ಕಲಬುರಗಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರಣೆ ನೀಡಿ, ಎಂದಿನಂತೆ ಈ ಬಾರಿಯೂ ಹೆಣ್ಣು ಮಕ್ಕಳು ಹಾಗೂ ನಗರದ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. 4 ಲಕ್ಷ 579 ಹೆಣ್ಣುಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು.

ಅವರಲ್ಲಿ 2,96,438 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.೭೪ರಷ್ಟು ಫಲಿತಾಂಶ ಬAದಿದೆ. 3,90,310 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದು, 2,26,637 ಮಂದಿ ಪಾಸಾಗಿ ಶೇ58.೦7ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಗರದ ಪ್ರದೇಶದಲ್ಲಿ 3,35,446 ವಿದ್ಯಾರ್ಥಿಗಳ ಪೈಕಿ 2,24,9೦೦ ಮಂದಿ ಪಾಸಾಗಿ ಶೇ.67.೦5 ರಷ್ಟು, ಗ್ರಾಮೀಣ ಭಾಗದಲ್ಲಿ 4,55,444 ಮಂದಿ ಉತ್ತೀರ್ಣರಾಗಿದ್ದಾರೆ. ಶೇ.65.47ರಷ್ಟು ಫಲಿತಾಂಶ ಬಂದಿದೆ.

ಈ ಬಾರಿ ಫಲಿತಾಂಶ ಕುಸಿತಕ್ಕೆ ಹಲವಾರು ಕಾರಣಗಳು ಇವೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಸರಿಯಾಗಿ ಪಾಠ ಆಗಿಲ್ಲ. ಸರಿಯಾದ ಸಮಯಕ್ಕೆ ಸಿಲೆಬಸ್ ಮುಗಿಯಲಿಲ್ಲ ಎಂದೂ ಹೇಳಲಾಗುತ್ತಿದೆ. ಅಲ್ಲದೇ ಕಳೆದ ಬಾರಿ ಸರ್ಕಾರ ಗ್ರೇಸ್ ಅಂಕಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ ಗ್ರೇಸ್ ಅಂಕಗಳನ್ನು ತೆಗೆದಿದ್ದರಿಂದ ಫಲಿತಾಂಶ ಕಡಿಮೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular