Tuesday, March 17, 2026
Flats for sale
Homeಜಿಲ್ಲೆಮಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್​ ಉಗ್ರರ ದಾಳಿ ಸಮರ್ಥಿಸಿಕೊಂಡು ಫೇಸ್ ​ಬುಕ್​ನಲ್ಲಿ ಪೋಸ್ಟ್​,ಕೊಣಾಜೆ ಪೊಲೀಸ್ ಠಾಣೆಯಲ್ಲಿ...

ಮಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್​ ಉಗ್ರರ ದಾಳಿ ಸಮರ್ಥಿಸಿಕೊಂಡು ಫೇಸ್ ​ಬುಕ್​ನಲ್ಲಿ ಪೋಸ್ಟ್​,ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

ಮಂಗಳೂರು : ನಮ್ಮ ಶತ್ರು ಗಳಿಗಿಂತ ನಮ್ಮ ದೇಶದಲ್ಲಿರುವ ಉಗ್ರರನ್ನು ಹುಡುಕಿ ಹೊಡೆದುರುಳಿಸಿದರೆ ದೇಶದಲ್ಲಿ ಭಯೋತ್ಪಾದನೆಯನ್ನು ಬೇಗನೆ ನಿರ್ಮೂಲನೆ ಮಾಡಬಹುದೆಂಬುದು ಕೆಲವು ತಜ್ಞರ ಮಾತು.

ಜಮ್ಮು-ಕಾಶ್ಮೀರದ ಪಹಲ್ಗಾವ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದರು.ಈ ದಾಳಿಯಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ಸೇರಿದಂತೆ 27 ಮಂದಿ ಮೃತಪಟ್ಟಿದ್ದರು ಈ ಘಟನೆಯನ್ನು ಸಮರ್ಥಿಸಿ ಮಂಗಳೂರಿನ ಉಗ್ರನೊಬ್ಬ ಫೇಸ್​ಬುಕ್​ ಪೇಜ್​ವೊಂದರಲ್ಲಿ ಪೋಸ್ಟ್​ ಹಾಕಿದ್ದು ಇದಕ್ಕೆ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಬೇನಾಮಿ ಫೋಟೋ ಹಾಕಿ ನಿಚ್ಚು ಮಂಗಳೂರು ಎಂಬ‌ ಫೇಸ್​ಬುಕ್​ ಪೇಜ್​ನಲ್ಲಿ, “2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್​ನಲ್ಲಿ ಮೂವರು ಮುಸ್ಲಿಮರನ್ನು‌ ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್​ಗೆ ಸಾರ್ವಜನಿಕವಾಗಿ ನೇಣಿಗೆ ಹಾಕಲಿಲ್ಲ. ಪಾಲ್ಗರ್ ಘಟನೆ ಕಾರಣಕ್ಕೆ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ” ಎಂದು ಪೋಸ್ಟ್​ ಹಾಕಲಾಗಿದೆ. ಈ ಪೋಸ್ಟ್​ಗೆ ಸಾಮಾಜಿಕ‌ ಜಾಲತಾಣದಲ್ಲಿ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪೇಸ್ ​ಬುಕ್​ ಪೇಜ್​ನ ಡಿಪಿಯಲ್ಲಿರುವ ಯುವಕ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ‌ಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.ಉಳ್ಳಾಲದ ಸತೀಶ್ ಕುಮಾರ್ ಎಂಬವರು‌ ನೀಡಿದ ದೂರಿನ ಆಧಾರದ ಮೇಲೆ ಬಿಎನ್​ಎಸ್​ ಸೆಕ್ಷನ್ 192 ಮತ್ತು 353(1)(,b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್​ಬುಕ್ ಪೇಜ್​ನ ಡಿಪಿ‌ಯಲ್ಲಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಹುಟ್ಟಿ ಶತ್ರು ದೇಶ ಪಾಕಿಸ್ತಾನಕ್ಕೆ ಬೆಂಬಲ ಕೊಡುವುದು ವಿಪರ್ಯಾಸವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular