ಬೆಂಗಳೂರು : ಡಿಜಿ-ಐಜಿಪಿ ಓಂ ಪ್ರಕಾಶ್ ಕೊಲೆ ಸಂಬAಧ ಪತ್ನಿ ಮತ್ತು ಪುತ್ರಿಯ ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪುತ್ರ ಕಾರ್ತೀಕೇಶ್ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ ಸಹೋದರಿಕೃತಿ ವಿರುದ್ಧ ಬಿಎನ್‌ಎಸ್ ಸೆಕ್ಷನ್ 103(ಕೊಲೆ) 3 (ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಎಸಗಿದ ಅಪರಾಧ) ಅಡಿ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆಯ ಕೊಲೆಯ ಬಗ್ಗೆ ಪುತ್ರ ಕಾರ್ತಿಕೇಶ್ ನೀಡಿರುವ ದೂರಿನಲ್ಲಿ ನನ್ನ ತಾಯಿ ಪಲ್ಲವಿಯು ತಂದೆ ನಿವೃತ್ತ ಡಿಜಿಪಿ ಓಂ ಪ್ರಕಾಶ್?ಗೆ ಕಳೆದ ಒಂದು ವಾರದಿಂದ ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ತಂದೆಯವರು ಅವರ ಸಹೋದರಿಯಾದ ಸರೀತಾ ಕುಮಾರಿಯವರ ಮನೆಯಲ್ಲಿ ವಾಸವಿದ್ದರು. ನಂತರ ನನ್ನ ತಂಗಿ ಕೃತಿ ೨ ದಿನಗಳ ಹಿಂದೆ ಸರೀತಾ ಕುಮಾರಿಯವರ ಮನೆಗೆ ಹೋಗಿ ತಂದೆಯವರನ್ನು ಮನೆಗೆ ಬರುವಂತೆ ಪೀಡಿಸಿ ಕರೆದು ಕೊಂಡು ಬಂದಿದ್ದಳು ಎಂದು ಹೇಳಿದ್ದಾರೆ. ಕರ್ನಾಟಕ ಗಾಲ್ಫ್, ಆಸೋಸಿಯಷನ್ ನಲ್ಲಿರಬೇಕಾದರೆ, ನಮ್ಮ ಪಕ್ಕದ ಮನೆಯವರಾದ ಜಯಶ್ರೀ ಶ್ರೀಧರನ್ ಕರೆಮಾಡಿ ನಿಮ್ಮ ತಂದೆ ಓಂ ಪ್ರಕಾಶ್ ದೇಹ ಕೆಳಗಡೆ ಬಿದ್ದಿರುತ್ತದೆಂದು ತಿಳಿಸಿದರು. ತಕ್ಷಣ ನಾನು ಸುಮಾರು 5 ಗಂಟೆ 45ನಿಮಿಷಕ್ಕೆ ಮನೆಗೆ ಬಂದು ನೋಡಿದೆ. ಮನೆಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕರು ಇದ್ದರು. ನಮ್ಮ ತಂದೆಯವರ ತಲೆಗೆ ಗಾಯವಾಗಿತ್ತು ಮತ್ತು ಮೈತುಂಬ ರಕ್ತವಾಗಿತ್ತು. ದೇಹದ ಪಕ್ಕದಲ್ಲಿ ಹೊಡೆದಿರುವ ಬಾಟಲ್ ಮತ್ತು ಚಾಕು ಇತ್ತು. ನಂತರ ನಮ್ಮ ತಂದೆಯವರ ದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ನಮ್ಮ ತಾಯಿ ಪಲ್ಲವಿ, ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ನಮ್ಮ ತಂದೆಯೊAದಿಗೆ ಜಗಳ ಮಾಡುತ್ತಿದ್ದರು. ನಮ್ಮ ತಾಯಿ ಪಲ್ಲವಿ ಮತ್ತು ತಂಗಿ ಕೃತಿ ನಮ್ಮ ತಂದೆಯನ್ನು ಕೊಲೆ ಮಾಡಿರುವ ಬಗ್ಗೆ ಶಂಕೆಯಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಕಾರ್ತಿಕೇಶ್ ಉಲ್ಲೇಖಿಸಿದ್ದಾರೆ. ಇದರ ಬೆನ್ನಲ್ಲೇ ಪಲ್ಲವಿ ಮತ್ತು ಕೃತಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ನಿನ್ನೆ ಸಂಜೆಯೇ ಠಾಣೆಗೆ ಕರೆ ಕರೆತಂದಿದ್ದರು. ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಇವತ್ತು ಬೆಳಗ್ಗೆ ಇಬ್ಬರನ್ನೂ ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ಕರೆತಂದು ಬAಧಿಸಲಾಗಿದೆ.
ಅAತ್ಯಕ್ರಿಯೆ
ಓAಪ್ರಕಾಶ್ ಮರಣೋತ್ತರ ಪರೀಕ್ಷೆ ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಬೆಳಿಗ್ಗೆ 11.30ರ ವೇಳೆ ಹಸ್ತಾಂತರಿಸಲಾಗಿತ್ತು, ಹೆಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಎಂಸಿಎಚ್??ಎಸ್ ಕ್ಲಬ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಮಧ್ಯಾಹ್ನ ೩ ಗಂಟೆಯ ವೇಳೆಗೆ ವಿಲ್ಸನ್ ಗಾರ್ಡನ್‌ನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಆತ್ಮೀಯತೆ ಮಹಿಳೆ ವಿಚಾರಣೆ ಓಂ ಪ್ರಕಾಶ್ ಚಿಕ್ಕಮಗಳೂರು ಮೂಲದ ಮಹಿಳೆಯೊಬ್ಬರ ಜೊತೆಗೆ ಆತ್ಮೀಯತೆ ಹೊಂದಿದ್ದರು. ಇದೇ ಮಹಿಳೆ 2015 ರಲ್ಲಿ ಓಂ ಪ್ರಕಾಶ್ ಡಿಜಿಪಿ ಆಗಿದ್ದಾಗ ಅವರ ಪ್ರಧಾನ ಕಚೇರಿಯ ಮುಂಭಾಗದಲ್ಲೇ ವಂಚನೆ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದರು. ಇದು ಕೂಡಾ ಪತಿ- ಪತ್ನಿಯ ನಡುವೆ ಜಟಾಪಟಿಗೆ ಕಾರಣವಾಗಿತ್ತು ಇದೀಗ ಆರೋಪಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.