ಬೀದರ್ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದಿಲ್ಲೊಂದು ಸದ್ದು ಮಾಡುತ್ತಲೇ ಇದ್ದಾರೆ. ಬೀದರಲ್ಲಿ ಪರೀಕ್ಷೆ ಬರೆಯಲು ಸಿಬ್ಬಂದಿ ಬಿಡದ ಹಿನ್ನೆಲೆ ವಿದ್ಯಾರ್ಥಿಯ ಬಿಇ ಕನಸು ನುಚ್ಚುನೂರಾದ ಘಟನೆ ನಡೆದಿದೆ .ಮತ್ತೊಂದು ಪ್ರಕರಣ ಶಿವಮೊಗ್ಗದಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆಗೆ ಅವಕಾಶ ನೀಡಿದಕ್ಕೆ ಬ್ರಾಹ್ಮಣರು ಕೆಂಡಮಂಡಲವಾಗಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಬೀದರ್ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲೊಪ್ಪದೆ ಸಿಇಟಿ ಗಣಿತ ಗಣಿತ ಪರೀ ಕೈಯಿಂದಲೇ ಹೊರಗುಳಿದಿದ್ದು, ಆತನ ಎಂಜಿ ನಿಯರಿಂಗ್ ಕನಸು ಭಗ್ನಗೊಂಡಿದೆ. ಜನಿವಾರ ಧರಿಸಿ ಬುಧವಾರ ಭೌತಶಾಸ್ತ್ರ ರಸಾಯನಶಾಸ್ತ್ರ ಪರೀಕ್ಷೆ ವಿದ್ಯಾರ್ಥಿ ಬರೆಯುತ್ತಿರುವ ವೇಳೆ ಜನಿವಾರ ನೋಡಿ ಪರೀಕ್ಷಾ ಸಿಬ್ಬಂದಿ ಆಕ್ಷೇಪ ಹೊರಹಾಕಿದ್ದಾನೆ.ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷೆ ಬರೆಯಲು ನಿರಾಕರಿಸಿದ್ದು . ಅಂಗಲಾಚಿದರೂ ಸಿಬ್ಬಂದಿ ಪರೀಕ್ಷೆ ಬರೆಯಲು ನಿರಾಕರಿಸಿದ್ದಾನೆ. ಪರೀಕ್ಷೆಯಿಂದಲೇ ದೂರ ಉಳಿದ ವಿದ್ಯಾರ್ಥಿ. ಎಂಜಿನಿಯರಿಂಗ್ ಪ್ರವೇಶಾವಕಾಶದಿಂದ ವಂಚಿತನಾಗಿದ್ದಾನೆ.
‘ಜನಿವಾರದಲ್ಲಿ ನೀನು ನೇಣು ಹಾಕಿಕೊಂಡ್ರೆ ಏನ್ಮಾಡೋದು?’
ಬೀದರ್‌ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗೆ ಜನಿವಾರ ಧರಿಸಿದ ಕಾರಣಕ್ಕೆ ಬೆಳಗ್ಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಸಿಬ್ಬಂದಿ, ಮಧ್ಯಾಹ್ನ ಅದೇ ವಿದ್ಯಾರ್ಥಿಗೆ ಜನಿವಾರ ಧರಿಸಿಯೇ ಪರೀಕ್ಷೆಗೆ ಕೂರಲು ಬಿಟ್ಟಿದ್ದಾರೆ. ಇದೆಂಥ ನ್ಯಾಯ ಸರ್?’ ಎಂದು ವಿದ್ಯಾರ್ಥಿ ಕೇಳಿದ್ದಕ್ಕೆ, ‘ಜನಿವಾರ ಬಳಸಿ ಪರೀಕ್ಷಾ ಕೇಂದ್ರದಲ್ಲಿ ನೀನು ನೇಣು ಹಾಕಿಕೊಂಡು ಬಿಟ್ಟರೆ?’ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆನ್ನಲಾಗಿದೆ.ಇದೀಗ ಶಿಕ್ಷಣ ಸಚಿವ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿದ್ದಾರೆಂದು ಮಾಹಿತಿ ದೊರೆತಿದೆ.