ಮುಂಬೈ : 2025 ರ ಐಪಿಎಲ್‌ನಲ್ಲಿ ಚೆಂಡಿಗೆ ಲಾಲಾರಸ ಬಳಸಲು ಅನುಮತಿ ನೀಡಿರುವ ಬಿಸಿಸಿಐ ಕ್ರಮಕ್ಕೆ ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಗೇಮ್ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಗೇಲ್ `ಈ ಕ್ರಮದಿಂದ ಲೀಗ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿಲ್ಲ. ಬೌಲರ್‌ಗಳು ಈಗಾಗಲೇ ಬೆವರನ್ನು ಚೆಂಡಿಗೆ ಬಳಸುತ್ತಿದ್ದಾರೆ. ಟೂರ್ನಿ ಕೂಡ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಬೌಲರ್‌ಗಳು ಉತ್ತಮ ಪ್ರದರ್ಶನ ತೋರಲು ಯತ್ನಿಸುತ್ತಿದ್ದಾರೆ. ಹಾಗಾಗಿ ಬಿಸಿಸಿಐನ ಈ ಕ್ರಮ ಲೀಗ್‌ನಲ್ಲಿ ನಿರೀಕ್ಷಿತ ಫಲಿತಾಂಶ ತಂದಿಲ್ಲ’ ಎಂದು ಗೇಲ್ ತಿಳಿಸಿದ್ದಾರೆ.