ಅಹಮದಾಬಾದ್ : ದೇಶದಲ್ಲಿ ಇವಿಎಂ ಯಂತ್ರಗಳ ಮೂಲಕ ಅಕ್ರಮ ನಡೆಸಿ ಚುನಾವಣೆಯಲ್ಲಿ ಗೆಲ್ಲಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಡೆದ ಮಹಾರಾಷ್ಟç ಚುನಾವಣೆಯಲ್ಲಿ ಬಿಜೆಪಿ ಇದೇ ರೀತಿ ಗೆದ್ದಿದೆ ಎಂದ ಅವರು ಅಕ್ರಮದಲ್ಲಿ ತೊಡಗಿರುವವರನ್ನು ತಡೆಯದೆ, ಪ್ರಶ್ನೆ ಮಾಡಿದ ಪಕ್ಷಗಳನ್ನೇ ಚುನಾವಣಾ ಆಯೋಗ ವ್ಯಂಗ್ಯ ಮಾಡುತ್ತಿದೆ ಎಂದು ಕಿಡಿ ಕಾರಿದರು. ಮುಂದುವರಿದ ದೇಶಗಳು ಇವಿಎಂಗಳನ್ನು ಪಕ್ಕಕ್ಕಿಟ್ಟು ಬ್ಯಾಲೆಟ್ ಪೇಪರ್‌ಗೆ ಮರಳಿದ್ದಾರೆ. ಆದರೆ ನಮ್ಮಲ್ಲಿ ಅಕ್ರಮ ಎಸಗುವ ಸಲುವಾಗ ಇವಿಎಂ ತ್ಯಜಿಸುತ್ತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಸಂಘಟನೆಯ ಬಲವರ್ಧನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪಾತ್ರವನ್ನು ಎತ್ತಿ ಹಿಡಿದ ಅವರು, ಇನ್ನು ಮುಂದೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುತ್ತದೆ ಎಂದರು. ದೇಶದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ತೀವ್ರ ಟೀಕೆ ಮಾಡಿದ್ದಾರೆ. ಹೀಗೇ ಆದಲ್ಲಿ ಮುಂದೊAದು ಪ್ರಧಾನಿ ಮೋದಿ ದೇಶವನ್ನೇ ಮಾರಿಬಿಡುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಖಾಸಗೀಕರಣದ ಮೂಲಕ ಎಸ್, ಎಸ್‌ಟಿ ಮೀಸಲಾತಿಗೆ ಅಂತ್ಯ ಹಾಡಲಾಗುತ್ತಿದೆ ಎಂದು ಟೀಕಿಸಿದರು.


