Saturday, April 19, 2025
Flats for sale
Homeಜಿಲ್ಲೆಮಂಗಳೂರು ; ಎಪ್ರಿಲ್ 11 ರಂದು ಪುರಭವನದಲ್ಲಿ ಮೀನುಗಾರ ಮಹಿಳೆಯರ ಸಮ್ಮೇಳನ….!!!

ಮಂಗಳೂರು ; ಎಪ್ರಿಲ್ 11 ರಂದು ಪುರಭವನದಲ್ಲಿ ಮೀನುಗಾರ ಮಹಿಳೆಯರ ಸಮ್ಮೇಳನ….!!!

ಮಂಗಳೂರು : 100 ವರ್ಷಕ್ಕೂ ಹೆಚ್ಚು ಇತಿಹಾಸ ವಿರುವ ಸ್ಟೇಟ್‌ ಬ್ಯಾಂಕ್ ಮೀನು ಮಾರ್ಕೆಟನ್ನು 1998ರ ಸಮಯದಲ್ಲಿ ಸ್ಟೇಟ್‌ ಬ್ಯಾಂಕ್ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಪ್ರಕ್ರಿಯೆಗಳು ಮಂಗಳೂರು ಮಹಾನಗರ ಪಾಲಿಕೆಯಿಂದ ನಡೆದಾಗ, ಮೀನುಗಾರ ಮಹಿಳೆಯರು ಒಟ್ಟಾಗಿ ಹೋರಾಟವನ್ನು ನಡೆಸಿ, ಮೀನು ಮಾರ್ಕೆಟ್ ಉಳಿಸಿ ಅಭಿಯಾನಕ್ಕೆ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಜೊತೆ ಸೇರಿ ಹೋರಾಟಕ್ಕೆ ಬೆಂಬಲ ನೀಡಿದ ಪರಿಣಾಮ 2000ನೇ ಇಸವಿಯಲ್ಲಿ ಹೋರಾಟಕ್ಕೆ ಬೆಂಬಲ ದೊರೆತು ಸ್ಥಳಾಂತರಿಸುವ ಆದೇಶವನ್ನು ಮ.ನಾ.ಪ. ಹಿಂಪಡೆಯಿತು.ಇದೀಗ ಮತ್ತೊಮ್ಮೆ ಸ್ಮಾರ್ಟ್ ಸಿಟಿ ಹೆಸರಲ್ಲಿ ಮೀನು ಮಾರುಕಟ್ಟೆಯನ್ನು ಒತ್ತುವರಿ ಕಾರ್ಯ ನಡೆಯುತ್ತಿದೆ ಇದಕ್ಕೆ ಮೊಗವೀರ ಸಮಾಜದ ಪ್ರಬಲ ನಾಯಕ ಜಿ . ಶಂಕರ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಯಿಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆ ಬಳಿಕ ಹಿಂದೂ ಯುವಸೇನೆ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿ ಎಂದು ನೊಂದಾವಣೆಗೊಂಡು ವ್ಯಾಪಾರದ ಜೊತೆಯಲ್ಲಿ ಧಾರ್ಮಿಕ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮ ಕಲಶೋತ್ಸವಕ್ಕೆ ಹೊರೆಕಾಣಿಕೆ, ಆರ್ಥಿಕ ಸಹಕಾರ ನೀಡುತ್ತಾ ಬಂದಿರುತ್ತೇವೆ. ಹಾಗೆಯೇ ಸಮಾಜದಲ್ಲಿ ತೀರ ಸಂಕಷ್ಟಕ್ಕೊಳಗಾದವರಿಗೆ, ಅನಾರೋಗ್ಯ ಪೀಡಿತರಿಗೆ, ಶೈಕ್ಷಣಿಕ ವಿದ್ಯಾರ್ಜನೆಗೆ ಆರ್ಥಿಕ ಸಹಕಾರವನ್ನು ನೀಡುತ್ತಿದ್ದೇವೆಂದು ಪತ್ರಿಕಾಗೋಷ್ಠಿಯಲ್ಲಿ ತೃಪ್ತಿ ಸುವರ್ಣ ರವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಸಭಾ ಸಭಾಧ್ಯಕ್ಷ ಯು.ಟಿ ಖಾದ‌ರ್ ವಹಿಸಲಿದ್ದು ಜಿಲ್ಲೆಯ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಶ್ರೀ ಯಶ್‌ಪಾಲ್ ಸುವರ್ಣ, ಉಡುಪಿ ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಿದ್ದು ಹಾಗೆಯೇ ಎಪ್ರಿಲ್ 12 ರಂದು ಸ್ಟೇಟ್‌ ಬ್ಯಾಂಕ್ ಮೀನು ಮಾರುಕಟ್ಟೆಯ ಅಶ್ವಥಕಟ್ಟೆಯಲ್ಲಿ ಶನಿಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಭಾಸ್ಕರ್‌ಚಂದ್ರ ಶೆಟ್ಟಿ, ಶ್ರೀಮತಿ ಬೇಬಿ ಎಸ್. ಕುಂದರ್,ಎಂ. ಮೋಹನ್ ಕುಲಾಲ್,ವಿಶಾಲಿನಿ ವಿ. ಸಾಲಿಯಾನ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular