ನವದೆಹಲಿ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಮೇಲೆ “ತೆರಿಗೆ ಯುದ್ದ” ಘೋಷಿಸಿರುವ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ನಿನ್ನೆ ಮಹಾಪತನ ಕಂಡಿದ್ದು ಬರೋಬ್ಬರಿ 20.16 ಲಕ್ಷ ಕೋಟಿ ನಷ್ಟವಾಗಿದ್ದು ಷೇರುದಾರರು ತಲ್ಲಣಗೊಂಡಿದ್ದಾರೆ.
ಕಳೆದ 10 ತಿಂಗಳ ನಂತರ ಭಾರತೀಯ ಷೇರು ಮಾರುಕಟ್ಟೆ ದೊಡ್ಡ ನಷ್ಟ ಕಂಡಿದೆ. ಪ್ರಮುಖ 13 ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿವೆ. ಇದರ ಪರಿಣಾಮ ಭಾರೀ ನಷ್ಟ ಅನುಭವಿಸುವಂತಾಗಿದೆ. ಇದೆಲ್ಲಾ ಅಮೆರಿಕಾದ ತೆರಿಗೆ ಯುದ್ದದ ಪರಿಣಾಮವಾಗಿದೆ. ಜೊತೆಗೆ ಜಾಗತಿಕ ಷೇರು ಮಾರುಕಟ್ಟೆಯಲ್ಲಿಯೂ ಅಲ್ಲೋಲ ಕಲ್ಲೋಲವಾಗಿದೆ.
ದಿನದ ಆರಂಭದಲ್ಲಿ ಇಂದು ಬೆಳಿಗ್ಗೆ ಮಾರುಕಟ್ಟೆ ಸಂವೇದಿ ಸೂಚ್ಯAಕಗಳು ದಾಖಲಿಸಿದ ಮಹಾನ್ ಕುಸಿತದಿಂದಾಗಿ ಭಾರತೀಯ ಹೂಡಿಕೆದಾರರು ಸುಮಾರು 20.16 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದ ಭಾರತೀಯ ಷೇರು ಮಾರುಕಟ್ಟೆ ಹಿಂದೆAದೂ ಕಾಣದ ಬಾರಿ ನಷ್ಟ ಮತ್ತು ಮಹಾಪತನ ಕಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯಿಂದಾಗಿ ಉದ್ಭವಿಸಿದ ವ್ಯಾಪಾರ ಸಮರ ತೀವ್ರಗೊಂಡಿರುವAತೆಯೇ, ಜಾಗತಿಕ ಮಾರುಕಟ್ಟೆಗಳ ಸಂವೇದನೆಗಳಿಗೆ ಅನುಗುಣವಾಗಿ ಭಾರತೀಯ ಮಾರುಕಟ್ಟೆಗೂ ತೀವ್ರ ಹೊಡೆತ ಬಿದ್ದಿದೆ. ಇದರ ಪರಿಣಾಮ ವಿವಿಧ ಷೇರುಗಳ ಮೇಲೆ ದೊಡ್ಡ ನಷ್ಟ ಎದುರಿಸುವಂತಾಗಿದೆ. ಒಂದು ಹAತದಲ್ಲಿ 30 ಶೇರುಗಳ ಬಿಎಸ್‌ಇ ಸೂಚ್ಯಂಕ ವಾಗಿರುವ ಸೆನ್ಸೆಕ್ಸ್ ಆರಂಭಿಕ ವಹಿವಾಟುಗಳಲ್ಲಿ ಶೇ.5.22ರಷ್ಟು ಎಂದರೆ 3,939.68 ಅಂಶಗಳಷ್ಟು ಕುಸಿತ ಕಂಡು 71,425.01ಕ್ಕೆ ಇಳಿಯಿತು. ಈಕ್ವಿಟಿ ಮಾರುಕಟ್ಟೆಯ ಕರಡಿ ಕುಣಿತದಿಂದಾಗಿ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯ ಕಳೆದ ಶುಕ್ರವಾರದ ವಹಿವಾಟಿಗಿಂತ 20,16,29353 ಕೋಟಿ ರೂ. ಕುಸಿದು, 3,83,18,592.93 ವಹಿವಾಟು ಕಂಡಿತ್ತು.
ಟಾಟಾ ಸ್ಟೀಲ್, ಟಾಟಾ ಮೋಟರ್ಸ್ ಶೇ.೧೦ರಷ್ಟು ಕುಸಿತ ಕಂಡರೆ, ಲಾರ್ಸನ್ ಆಂಡ್ ಟೂಟ್ರೋ, ಹೆಚ್‌ಸಿಎಲ್ ಟೆಕ್ನಾಲಜೀಸ್, ಅದಾನಿ ಪೋಟ್ರ್÷್ಸ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಟಾಟಾ ಕನ್ಸಲ್ವೆನ್ಸಿ ಸರ್ವಿಸಸ್, ರಿಲಯನ್ಸ್ ಇಂಡಸ್ಟಿçÃಸ್, ಮಹೀಂದ್ರಾ ಆAಡ್ ಮಹೀಂದ್ರಾ ಮುಂತಾದವು ಭಾರಿ ನಷ್ಟ ಅನುಭವಿಸಿವೆ. ಇದರ ಪರಿಣಾಮ ಕಂಪನಿಗಳಿಗೆ ಮತ್ತು ಅವುಗಳ ಮೇಲೆ ಷೇರು ಹಾಕಿದ ಮಂದಿಗೆ ಬಾರಿ ನಷ್ಟವಾಗಿದೆ. ಏಷ್ಯಾ ಮಾರುಕಟ್ಟೆಯಲ್ಲಿ ಹಾಂಕಾAಗ್‌ನ ಹ್ಯಾಂಗ್ ಸೆಂಗ್ ಸೂಚ್ಯAಕ ಶೇ.11ಕ್ಕೂ ಹೆಚ್ಚು ಕುಸಿತ ಕಂಡರೆ, ಟೋಕಿಯೋದ ನಿಕ್ಕೀ 225 ಸೂಚ್ಯಂಕವು ಶೇ.7 ರಷ್ಟು, ಶಾಂಘಾಯ್ ಎಸ್‌ಎಸ್‌ಇ ಕಾಂಪೊಸಿಟ್ ಸೂಚ್ಯಂಕವು ಶೇ.7 ರಷ್ಟು ಹಾಗೂ ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕವು ಶೇ.5ರಷ್ಟು ಕುಸಿತ ದಾಖಲಿಸಿತು. ಅಮೆರಿಕ ಮಾರುಕಟ್ಟೆ ಕಳೆದ ಶುಕ್ರವಾರ ತೀರಾ ನಷ್ಟದೊಂದಿಗೆ ವಹಿವಾಟು ಅಂತ್ಯಗೊಳಿಸಿತ್ತು. ಅದರ ಪರಿಣಾಮ ಇಂದು ಜಾಗತಿಕ ಮಾರುಕಟ್ಟೆಗಳ ಮೇಲೆ ಕಂಡುಬAದಿದೆ. ಅಮೆರಿಕದ 500 ಶೇ.5.97ರಷ್ಟು ಕುಸಿದಿದ್ದರೆ, ನಾಸ್ಟಾಕ್ ಕಾಂಪೊಸಿಟ್ಸೂ ಚ್ಯAಕ ಶೇ.5.82 ಕುಸಿದಿತ್ತು. ಡೋ ಸೂಚ್ಯಂಕವು ಶೇ.5.50 ಕುಸಿತ ದಾಖಲಿಸಿತ್ತು.