ಮಂಗಳೂರು : ಕಾಂತಾರ ಸಿನಿಮಾದ ನಂತರ ನಟ ರಿಷಬ್ ಶೆಟ್ಟಿ ಉನ್ನತ್ತ ಮಟ್ಟಕ್ಕೆ ಏರಿದ್ದು ಇದೀಗ ಮತ್ತೊಮ್ಮೆ ಪಂಜುರ್ಲಿ ದೈವದ ಮೊರೆಹೋಗಿದ್ದಾರೆ.


ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ,ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಂಡು ಬೆಳಗ್ಗಿನವರೆಗೂ ದೈವದ ಉತ್ಸವದಲ್ಲಿ ಭಾಗಿಯಾಗಿ ಪಂಜುರ್ಲಿ ದೈವದ ಮೊರೆ ಹೋದ ಘಟನೆ ನಡೆದಿದೆ.
ಮಂಗಳೂರಿನ ಬಾರೆಬೈಲ್ ವಾರಾಹಿ ಪಂಜುರ್ಲಿ,ಜಾರಂದಾಯ ದೈವದ ವಾರ್ಷಿಕ ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ದೈವದಲ್ಲಿ ಕಷ್ಟ ಹೇಳಿಕೊಂಡಿದ್ದು ಈ ಬಗ್ಗೆ ದೈವ ಎಚ್ಚರಿಕೆ ನೀಡಿದೆ. ‘ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್ ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ’. ‘ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ ಎಂದು ಮಂಗಳೂರಿನಲ್ಲಿ ಕೈಮುಗಿದು ಬೇಡಿಕೊಂಡ ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ನೀಡಿದೆ. ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದಲೇ ರಿಷಬ್ ಶೆಟ್ಟಿ ದೈವದ ಉತ್ಸವಕ್ಕೆ ಬಂದಿದ್ದು ಈ ವೇಳೆ ದೈವದ ಕೋಲ ಮುಗಿಯುವವರೆಗೂ ನಿಂತಿದ್ದರು.ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿಯೂ ರಿಷಬ್ ಶೆಟ್ಟಿಯವರನ್ನು ಸ್ವಾಗತಿಸಿದ್ದಾರೆ.


