ಮಂಗಳೂರು ; ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಕ್ಫ್ ಬೆದರಿಕೆ ಮಸೂದೆ ಅಂಗೀಕಾರ ವಿಚಾರ ಹಿನ್ನೆಲೆ ವಕ್ಫ್ ವಿಚಾರದಲ್ಲಿ ವರದಿ ತಯಾರಿಸಿದ ಅನ್ವರ್ ಮಾನಿಪಾಡಿ ಅವರಿಗೆ ಇಂಟರ್ನೆಟ್ ಮೂಲಕ ಬೆದರಿಕೆ ಕರೆ ಬಂದ ಘಟನೆ ವರದಿಯಾಗಿದೆ.
ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನಿಪಾಡಿಯವರಿಗೆ
ಕಳೆದ ಎರಡು ಮೂರು ದಿನಗಳಿಂದ ಇಂಟರ್ನೆಟ್ ಮೂಲಕ ಉರ್ದು, ಮಾರಾಠಿ,ಕನ್ನಡ ಇಂಗ್ಲಿಷ್‌ನಲ್ಲಿ ಬೆದರಿಕೆ ಕರೆಗಳು ಬರುತ್ತಿದ್ದು ನಿನ್ನನ್ನು ಬಿಡುದಿಲ್ಲ,ಮುಗಿಸುತ್ತೇವೆ ಎನ್ನುವ ಎಚ್ಚರಿಕೆ ನೀಡಿದ ಕರೆಗಳು ಬಂದಿವೆ ಎಂದು ಈ ವಿಚಾರವಾಗಿ ಅನ್ವರ್ ಮಾಣಿಪ್ಪಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರಿಗೆ ದೂರು ನೀಡಿದ್ದಾರೆ.


