ಮ್ಯಾನ್ಮಾರ್ : ಮ್ಯಾನ್ಮಾರ್ನಲ್ಲಿ ಶುಕ್ರವಾರ ಸಂಭವಿಸಿದ ಭೂಕAಪದಲ್ಲಿ ಸಾವಿಗೀಡಾದವರ ಸಂಖ್ಯೆ 1644 ದಾಟಿದೆ. ಈ ಪ್ರಾಕೃತಿಕ ವಿಕೋಪದಡಿಯಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದರೂ ಸಾವುನೋವುಗಳ ಸಂಖ್ಯೆ ಏರುತ್ತಲೇ ಇದೆ. ಈ ದುರಂತದಲ್ಲಿ 3408 ಮಂದಿ ಗಾಯಗೊಂಡಿದ್ದರೆ, 139 ಜನ ಕಾಣೆಯಾಗಿದ್ದಾರೆ. ಇದೇ ವೇಳೆ ಸಂಕಷ್ಟದಲ್ಲಿ ಸಿಲುಕಿರುವ ಮ್ಯಾನ್ಮಾರ್ಗೆ ವಿಶ್ವಸಂಸ್ಥೆ, ಭಾರತ ಸೇರಿದಂತೆ ಹಲವಾರು ದೇಶಗಳು ಹಾಗೂ ಸಂಘಸAಸ್ಥೆಗಳ ನೆರವಿನ ಮಹಾಪೂರವೂ ಹರಿದಿದೆ.
ಆಪರೇಷನ್ ಬ್ರಹ್ಮ ಎಂಬ ಹೆಸರಲ್ಲಿ ಭಾರತ ತನ್ನ ನೆರೆಯ ದೇಶವಾದ ಮ್ಯಾನ್ಮಾರ್ಗೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ವಿಮಾನವನ್ನು ಹಿಂಡನ್ ವಾಯುನೆಲೆಯಿಂದ ಕಳುಹಿಸಿದೆ. ಮುಂಜಾವ 3 ಗಂಟೆಗೆ ಹಾರಿದ ಈ ವಿಮಾನ ಬೆಳಗ್ಗೆ 8 ಗಂಟೆಗೆ ಯಾಂಗೂನ್ಗೆ ತಲುಪಿತು. ತದನಂತರ ಅಲ್ಲಿನ ಮುಖ್ಯಸ್ಥರಿಗೆ ಪರಿಹಾರ ಸಾಮಗ್ರಿಗಳನ್ನು ಹಸ್ತಾಂತರಿಸಲಾಗಿದೆ. ಇದಲ್ಲದೆ, ಐಎನ್ಎಸ್ ಸತ್ಪುರ ಹಾಗೂ ಐಎನ್ಎಸ್ ಸಾವಿತ್ರಿ ಎನ್ನುವ ನೌಕಾಪಡೆಯ ಎರಡು ಹಡಗುಗಳಲ್ಲಿ 40 ಟನ್ಗಳಷ್ಟು ಮಾನವೀಯ ನೆರವುಗಳನ್ನು ಯಾಂಗೂನ್ ಕಡೆ ಕಳುಹಿಸಲಾಗಿದೆ. ಇದೇ ವೇಳೆ ವಿಶ್ವಸಂಸ್ಥೆಯು ಮ್ಯಾನ್ಮಾರ್ಗೆ 5 ಮಿಲಿಯನ್ ಡಾಲರ್ಗಳ ಆರಂಭಿಕ ನೆರವು ನೀಡಿದೆ
30 ಗಂಟೆ ನಂತರವೂ ಬದುಕುಳಿದ ಮಹಿಳೆ!
ಮ್ಯಾನ್ಮಾರ್ನ ಮಂಡಲೇ ನಗರದಲ್ಲಿ 1500 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಅಪಾರ್ಟ್ಮೆಂಟ್ ಕುಸಿದುಬಿದ್ದಿರುವುದರಿAದ ಅದರ ಅವಶೇಷಗಳಡಿ ಸಿಲುಕಿರುವ 90 ಕ್ಕೂ ಹೆಚ್ಚು ಜನರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಶಾಲೆಯೊಂದು ಕುಸಿದ ಬಳಿಕ 12 ಮಕ್ಕಳು ಹಾಗೂ ಓರ್ವ ಶಿಕ್ಷಕ ಮೃತಪಟ್ಟಿದ್ದಾರೆ. ಆದರೆ ಇತರ 50 ಮಕ್ಕಳು ಹಾಗೂ ಆರು ಶಿಕ್ಷಕರು ಏನಾದರೆಂಬುದು ಗೊತ್ತಾಗಿಲ್ಲ. ಅವಶೇಷಗಳಡಿ ಸಿಲುಕಿದ್ದ 30 ವರ್ಷದ ಮಹಿಳೆಯೊಬ್ಬರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಆಕೆ ಕಟ್ಟಡದ ಅವಶೇಷಗಳಡಿ 30 ಗಂಟೆ ಸಿಲುಕಿದ್ದಾರೆ.