ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣಕ್ಕೆ ಬರೋಬ್ಬರಿ 11 ಕೋಟಿ ರೂ. ಖರ್ಚು ಮಾಡಲಾಗಿದೆ.
ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಜವರಾಯಿಗೌಡ ಅವರ ಪ್ರಶ್ನೆಗೆ ಲಿಖಿತ ರೂಪದ ಮೂಲಕ ಉತ್ತರವನ್ನು ನೀಡಿರುವ ಮುಖ್ಯಮಂತ್ರಿಗಳು ವಿವಿಧ ಜಿಲ್ಲೆ ಪ್ರವಾಸ, ವಿಶೇಷ ಪ್ರವಾಸಗಳಿಗಾಗಿ ವಿಮಾನ ಬಳಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಸುಮಾರು 24 ಕೋಟಿ ರೂ. ವಿಮಾನಯಾನಕ್ಕೆ ಖರ್ಚು ಮಾಡಿದ್ದಾರೆ.
ಈ ವರದಿಯಲ್ಲಿ ಸಿಎಂ, ರಾಜ್ಯಪಾಲರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ಸಂಪೂರ್ಣ ವಿಮಾನ ಹಾಗೂ ಹೆಲಿಕಾಷ್ಟರ್ ಪ್ರಯಾಣದ ಖರ್ಚು ವೆಚ್ಚದ ಮಾಹಿತಿಯಿದೆ. 2025- 25ನೇ ಸಾಲಿನಲ್ಲಿ ಸರ್ಕಾರವು ಸುಮಾರು 21 ಕೋಟಿ ರೂ. ವಿಮಾನ ಪ್ರಯಾಣಕ್ಕೆ ಖರ್ಚು ಮಾಡಿದೆ.