ಕಲಬುರಗಿ ; ಪೊಲೀಸ್ ಠಾಣೆಯಲ್ಲೇ ಪೋಲಿಸರು ಜೂಜಾಟದಲ್ಲಿ ತೊಡಗಿದ ಘಟನೆ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹೊರಗಡೆ ಸಾರ್ವಜನಿಕರು ಇಸ್ಪೀಟ್ ಆಡಿದ್ರೆ ದಾಳಿ ಮಾಡಿ ಕೇಸ್ ಫಿಟ್ ಮಾಡುವ ಪೊಲೀಸರು. ಖಾಕಿ ಬಟ್ಟೆಯಲ್ಲೇ ರಮ್ಮೀ ಇಸ್ಪೀಟ್ ಆಟ ಆಡ್ತಿರುವ ವಿಡಿಯೋ ವೈರಲ್ ಆಗಿದೆ.
ಗ್ಯಾಮ್ಲಿಂಗ್ ಗೆ ಕಡಿವಾಣ ಹಾಕುವ ಪೊಲೀಸರೆ ಠಾಣೆಯಲ್ಲಿ ಇಸ್ಪೀಟ್ ಆಟ ಆಡುತ್ತಿರುವುದು ಖೇದಕರ.ಆಗಾಗ ಪೊಲೀಸ್ ಠಾಣೆಯಲ್ಲಿ ಪೊಲೀಸರು ಇಸ್ಪೀಟ್ ಆಡುತ್ತಿದ್ದು ಕರ್ತವ್ಯ- ಜವಬ್ದಾರಿ ಮರೆತಿದ್ದಾರೆ.
ನಾಲ್ಕಾರು ಜನ ಸೇರಿಕೊಂಡು ಇಸ್ಪೀಟ್ ಆಡುವ ಪೊಲೀಸ್ ಸಿಬ್ಬಂದಿ. ಮೇಲಾಧಿಕಾರಿಗಳ ಅಂಜಿಕೆ-ಅಳುಕು ಇಲ್ಲದೆ ನಿರ್ಭಯವಾಗಿ ಜೂಜಾಟವಾಡುತ್ತಿದ್ದಾರೆ. ಪೊಲೀಸರು ಜೂಜಾಟ ಆಡುವ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


