ಚಿಕ್ಕಬಳ್ಳಾಪುರ : ಭ್ರಷ್ಟ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ಪೀಕಿಸುತಿದ್ದ ನಕಲಿ ಲೋಕಾಯುಕ್ತನ ಬಂಧನವಾಗಿದೆ, 10 ತಿಂಗಳ ನಂತರ ನಕಲಿ ಲೋಕಾಯುಕ್ತನನ್ನು ಬಂಧಿಸಿದ್ದು ಬಂಟಿತನನ್ನು ಚೆರುವುಮುನಪ್ಪಗಾರಿಪಲ್ಲಿ ಗ್ರಾಮದ ಪ್ರಭಾಕರ್ ರೆಡ್ಡಿ ಎಂದು ತಿಳಿದಿದೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚೆರುವುಮುನಪ್ಪಗಾರಿಪಲ್ಲಿ ಪ್ರಭಾಕರ್ ರೆಡ್ಡಿಯನ್ನು ಬಂಧಿಸುವಲ್ಲಿ ಗೌರಿಬಿದನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಭಾಕರ್ ರೆಡ್ಡಿ ಹಾಗೂ ಧನುಷ್ ರೆಡ್ಡಿ ಬೆದರಿಕೆ ಹಾಕುತ್ತಿದ್ದ ಆರೋಪಿಗಳು ಎಂದು ಮಾಹಿತಿ ದೊರೆತಿದೆ.
ಕಳೆದ 10 ತಿಂಗಳ ಹಿಂದೆ ಪೌರಾಯುಕ್ತರಿಗೆ ಕರೆಮಾಡಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಈ ಬಗ್ಗೆ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಲಾಖೆಯ ಕಾಮಗಾರಿಯ ಫೈಲ್ ತಡೆಯಲು ಹಣ ನೀಡುವಂತೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆ ಪ್ರಭಾಕರ್ ರೆಡ್ಡಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಆರೋಪಿಯ ಪತ್ತೆಗೆ ಜಾಡು ಹಿಡಿದಿದ್ದು ಮೊಬೈಲ್ ನಂಬರ್ ಆದರಿಸಿ 10 ತಿಂಗಳ ನಂತರ ಗೌರಿಬಿದನೂರು ನಗರ ಪೊಲೀಸ ಆರೋಪಿಯನ್ನು ಬಂಧಿಸಿದ್ದಾರೆ.