Saturday, March 15, 2025
Flats for sale
Homeಜಿಲ್ಲೆಮಂಗಳೂರು ; ಮಾರ್ಚ್ 16 ರಂದು ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ತುಳು...

ಮಂಗಳೂರು ; ಮಾರ್ಚ್ 16 ರಂದು ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ತುಳು ವಿಚಾರ ಸಂಕಿರಣ…!

ಮಂಗಳೂರು : ತುಳುವರ್ಲ್ಡ್ ಫೌಂಡೆಶನ್ ಮಾರ್ಚ್ 16, ಭಾನುವಾರದಂದು ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ವಾಗ್ಗೇವಿ ಸಭಾಂಗಣದಲ್ಲಿ ತುಳು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿ ಕೊಂಡಿದೆ. ತುಳುನಾಡಿನ ಆದಿಮೂಲ ಬೆರ್ಮೆರ್ ಬೊಕ್ಕ ಲೆಕ್ಕೆ ಸಿರಿ- ಪಾಡ್ಡನ, ಆಲಡೆ ಬೊಕ್ಕ ಪ್ರಾದೇಶಿಕತೆದ ಮಿತ್ತ ಅಧ್ಯಯನ ಎಂಬ ವಿಷಯದ ಕುರಿತು ವಿಚಾರ ಸಂಕೀರ್ಣ ನಡೆಯಲಿದೆ ಎಂದು ಡಾ‌.ಪುರುಷೊತ್ತಮ ಬಲ್ಲಾಯ ರವರು ತಿಳಿಸಿದ್ದಾರೆ.

ವಿಚಾರ ಸಂಕಿರಣದ ಉದ್ಘಾಟನೆಯನ್ನು ಕಟೀಲು ಶ್ರೀ ಶ್ರೀಹರಿನಾರಾಯಣದಾಸ ಆಸ್ರಣ್ಣ ಅವರು ನೆರವೇರಿಸಲಿದ್ದು ಕಟೀಲು ದೇವಸ್ಥಾನದ ಮುಕ್ತಸರರು ಮತ್ತು ಅಧ್ಯಕ್ಷರಾದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ಸಂಶೋಧಕ ಹಾಗೂ ಜಾನಪದ ವಿದ್ವಾಂಸರಾದ ಶ್ರೀ ಕೆ. ಎಲ್. ಕುಂಡಂತ್ತಾಯರು ದಿಕ್ಕೂಚಿ ಭಾಷಣ ಮಾಡಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶ್ರೀಧರನ್, ಡೈರೆಕ್ಟರ್ ಭಾಷಾ ವೈವಿದ್ಯತೆ ಅಧ್ಯಯನ ವಿಭಾಗ, ಕಣ್ಣೂರು ವಿಶ್ವವಿದ್ಯಾಲಯ, ಡಾ.ಬಿ. ಎಸ್. ಶಿವಕುಮಾರ್, ಮುಖ್ಯಸ್ಥರು ಭಾಷಾಂತರ ಅಧ್ಯಯನ ವಿಭಾಗ. ದ್ರಾವಿಡ ವಿಶ್ವ ವಿದ್ಯಾನಿಲಯ ಕುಪ್ಪಂ, ಡಾ. ಮಾಧವ ಎಂ. ಕೆ. ಮುಖ್ಯಸ್ಥರು ತುಳು ಪೀಠ ಮಂಗಳೂರು ವಿಶ್ವವಿದ್ಯಾನಿಲಯ, ತುಳು ಜಾನಪದ ವಿದ್ವಾಂಸ ಡಾ. ಕನರಾಡಿ ವಾದಿರಾಜ ಭಟ್, ಜಾನಪದ ವಿದ್ವಾಂಸರು ಮತ್ತು ಸಾಹಿತಿ ಡಾ. ಇಂದಿರಾ ಹೆಗ್ಗಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ, ಜಾನಕಿ ಬ್ರಹ್ಮಾವರ, ಶ್ರೀ ಎ.ಸಿ, ಭಂಡಾರಿ ಅಧ್ಯಕ್ಷರು ಅಖಿಲ ಭಾರತ ತುಳು ಒಕ್ಕೂಟ, ದಯಾನಂದ ಕತ್ತಲ್ಪಾರ್ ದೈವನರ್ತಕರು ಮತ್ತು ತುಳು ಜಾನಪದ ವಿದ್ವಾಂಸರು, ತುಳು ಕನ್ನಡ ಸಾಹಿತಿಗಳಾದ ನಂದಳಿಕೆ ನಾರಾಯಣಶೆಟ್ಟಿ ಮುಂಬೈ, ದೈವನರ್ತಕರು ಮತ್ತು ಜಾನಪದ ವಿದ್ವಾಂಸರಾದ ಡಾ.ರವೀಶ್ ಪಡುಮಲೆ, ತುಳು ಜಾನಪದ ವಿದ್ವಾಂಸರಾದ ಶ್ರೀ ಪಾಂಗಾಳ ಬಾಬು ಕೊರಗ, ಪ್ರೊ. ಯದುಪತಿ ಗೌಡ, ಪ್ರೊ. ಪುರುಷೋತ್ತಮ ಬಲ್ಯಾಯ, ಸುಂದರ ಬಾರಡ್ಕ, ಶ್ರೀ ಸುಧೀರ್, ಯಶೋಧ ಕೇಶವ್, ವಿದ್ಯಾಶ್ರೀ ಎಸ್. ಶಂಕರ ಸ್ವಾಮಿ ಕೃಪಾ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

ಮುಖ್ಯ ಅಭ್ಯಾಗತರಾಗಿ ತುಳು ಹೋರಾಟಗಾರರಾದ ಶ್ರೀ ಹರಿಕೃಷ್ಣ ಪುನರೂರು, ಲಯನ್ ದಿವಾಕರ ಶೆಟ್ಟಿ ಸಾಂಗ್ಲಿ, ಕ.ಜಾ.ಪ. ಬೆಂಗಳೂರು ದ. ಕ. ಜಿಲ್ಲಾಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರಾಜೇಶ್ ಭಟ್ ಮಂದಾರ, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಡಾ. ವಿಜಯ ಪ್ರಾಂಶುಪಾಲರು, ಕಟೀಲು ಎಸ್.ಡಿ. ಪಿ .ಟಿ. ಕಾಲೇಜು, ಶ್ರೀ ವಸಂತ ರೈ, ನಿವೃತ್ತ ಚೀಫ್ ಮ್ಯಾನೇಜರ್ ಹಿಂದುಸ್ತಾನ್ ಪೆಟ್ರೋಲಿಯಂ ಹಾಗೂ ಪದ್ಮಶ್ರೀ ಭಟ್ ನಿಡೋಡಿ ಭಾಗವಹಿಸಲಿದ್ದಾರೆ.

ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅಬುದಾಬಿ, ಉಪಾಧ್ಯಕ್ಷರಾದ ಡಾ. ನಿರಂಜನ ರೈ ಉಪ್ಪಿನಂಗಡಿ, ಶ್ರೀಮತಿ ತಾರಾ ಆಚಾರ್ಯ ಉಡುಪಿ, ಪ್ರಧಾನ ಕಾರ್ಯದರ್ಶಿ ಪ್ರೊ. ಪುರುಷೋತ್ತಮ ಬಲ್ಯಾಯ, ಖಜಾಂಜಿ ಚಂದ್ರಹಾಸ ದೇವಾಡಿಗ ಮೂಡಬಿದ್ರಿ. ಪ್ರಧಾನ ಸಂಚಾಲಕರಾದ ಪ್ರಮೋದ್ ಸಪ್ಪೆ, ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಮೊದಲಾದವರು ಉಪಸ್ಥಿತರಿರುವರು.

ಬೊಲಿಕೆ ಜಾನಪದ ತಂಡ ಕನ್ಯಪ್ಪಾಡಿ ಮತ್ತು ವಾಯ್ಸ್ ಆಫ್ ಆರಾಧನಾ ಮಕ್ಕಳಿಂದ ಜನಪದ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ‌‌.ರಾಜೇಶ್ ಕೃಷ್ಣ ಆಳ್ವ,ಚಂದ್ರಹಾಸ ದೇವಾಡಿಗ, ಹಾಗೂ ಇನ್ನಿತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular