Wednesday, March 12, 2025
Flats for sale
Homeಸಿನಿಮಾಮಂಗಳೂರು ; ಕನ್ನಡ- ಹಿಂದಿ ಭಾಷೆಯಲ್ಲಿ ತಯಾರಾಗಲಿರುವ " ವೈಲ್ಡ್ ಟೈಗರ್ ಸಫಾರಿ " ಸಿನಿಮಾಕ್ಕೆ...

ಮಂಗಳೂರು ; ಕನ್ನಡ- ಹಿಂದಿ ಭಾಷೆಯಲ್ಲಿ ತಯಾರಾಗಲಿರುವ ” ವೈಲ್ಡ್ ಟೈಗರ್ ಸಫಾರಿ ” ಸಿನಿಮಾಕ್ಕೆ ಕದ್ರಿ ದೇವಸ್ಥಾನದಲ್ಲಿ ಮುಹೂರ್ತ…!

ಮಂಗಳೂರು : ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿರುವ ”ವೈಲ್ಡ್ ಟೈಗರ್ ಸಫಾರಿ“ ಸಿನಿಮಾದ ಮುಹೂರ್ತ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಕದ್ರಿ ದೇವಸ್ಥಾನದಲ್ಲಿ ಜರುಗಿತು.

ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಚಿತ್ರದ ನಿರ್ದೇಶಕ ಚಂದ್ರಮೌಳಿ ಅವರು, ”ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾಹಂದರವನ್ನು ಈ ಸಿನಿಮಾ ಹೊಂದಿದ್ದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದೆ. ಮಂಗಳೂರು ಮೂಲದ ಕಥೆಯಲ್ಲಿ ಹುಲಿ ವೇಷಕ್ಕೆ ಪ್ರಾಧಾನ್ಯತೆ ಇರಲಿದೆ. ಮುಂದೆ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದ್ದು ಶೀಘ್ರದಲ್ಲಿ ಸಿನಿಮಾ ತೆರೆಗೆ ಬರಲಿದೆ“ ಎಂದರು.

ಬಳಿಕ ಮಾತಾಡಿದ ನಾಯಕ ನಟ ಶಿಥಿಲ್ ಕುಮಾರ್, ”ಸಿನಿಮಾಕ್ಕೆ ಬೇಕಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿದ್ದೇನೆ. ಲವ್, ಆಕ್ಷನ್ ಸಿನಿಮಾ ಇದಾಗಿದ್ದು ವೀಕ್ಷಕರಿಗೆ ಮನೋರಂಜನೆ ಬೇಕಾದ ಎಲ್ಲವನ್ನು ಒಳಗೊಂಡಿದೆ. ಕಥೆ ಕೇಳಿ ಥ್ರಿಲ್ ಆಗಿದ್ದೇನೆ“ ಎಂದರು.

ರಾಜೇಶ್ ಭಟ್ ಸಿನಿಮಾಕ್ಕೆ ಕೆಮರಾ ಕ್ಲಾಫ್ ಮಾಡಿದರು.ಸಿನಿಮಾ ನಿರ್ಮಾಪಕ ವಿನೋದ್ ಕುಮಾರ್, ನಾಯಕಿ ನಿಮಿಕಾ ರತ್ನಾಕರ್, ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕರಾದ ಧರ್ಮೇಶ್, ಸುಶಾಂತ್, ಕೆಮರಾಮ್ಯಾನ್ ಎಜೆ ಶೆಟ್ಟಿ, ಕಲಾ ನಿರ್ದೇಶಕ ಶಿವು, ದೇವಳದ ಮೆನೇಜರ್ ಜಗದೀಶ್ ಕದ್ರಿ, ಕಿಶೋರ್ ಕುಮಾರ್, ರತ್ನಾಕರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular